ಮುಂಬೈ: ಅತ್ಯಾಚಾರ ಆರೋಪಿ ಮಗನನ್ನು ಕಾನೂನಿನಿಂದ ರಕ್ಷಿಸಿಕೊಳ್ಳಲು ಮುಂದಾದ ತಂದೆಯೂ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ವಡಾಲಾದ ಆಂಟೋಪ್ ಹಿಲ್‌ನ ನಿವಾಸಿ ಮಜಿವುಲ್ಲಾ ಖಾನ್(56) ಬಂಧಿತ ಆರೋಪಿ. ಅತ್ಯಾಚಾರ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ಮಗನನ್ನು ರಕ್ಷಿಸಿಕೊಳ್ಳಲು, ತನ್ನ ಮಗ ಅಪ್ರಾಪ್ತ ಎಂದು ನಂಬಿಸಲು ಮುಂದಾಗಿದ್ದ. ಅಷ್ಟೇ ಅಲ್ಲದೇ ತನ್ನ ಮಗ ಅಪ್ರಾಪ್ತ ಎಂದು ಸಾಬೀತುಪಡಿಸಲು ನಕಲಿ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ.
Advertisement
Advertisement
ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಕಾರಣ ನಕಲಿ ಹಾಗೂ ವಂಚನೆಯ ಆರೋಪದ ಮೇಲೆ ಮಜಿವುಲ್ಲಾ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ
Advertisement
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಿಂಗಳ ಹಿಂದೆ ಮಜಿವುಲ್ಲಾ ಮಗನನ್ನು ಬಂಧಿಸಲಾಗಿತ್ತು. ತನ್ನ ಮಗನನ್ನು ಅಪ್ರಾಪ್ತ ಎಂದು ಸಾಬೀತು ಪಡಿಸಲು ಆತನ ತಂದೆ ನಕಲಿ ಜನನ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Advertisement
ಆತನ ತಂದೆ ನೀಡಿದ್ದ ಪ್ರಮಾಣಪತ್ರ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಪೊಲೀಸರು ಅವರ ಹುಟ್ಟೂರು ಉತ್ತರ ಪ್ರದೇಶದ ಗೊಂಡಾಗೆ ತೆರಳಿದ್ದರು. ಅಲ್ಲಿನ ಗ್ರಾಮಾಭಿವೃದ್ಧಿ ಅಧಿಕಾರಿಗಳು ಅಂತಹ ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದ – ಕೈ, ಕಾಲು ಕತ್ತರಿಸಿ ಕಾಡಿಗೆ ಎಸೆದ
ಅತ್ಯಾಚಾರ ಆರೋಪಿಯ ತಂದೆ ತನ್ನ ಮಗನನ್ನು ಉಳಿಸುವ ಪ್ರಯತ್ನದಲ್ಲಿ ವಕೀಲನ ಸಹಾಯದೊಂದಿಗೆ ನಕಲಿ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಂಡಿದ್ದಾನೆ. ನಕಲಿ ಪ್ರಮಾಣ ಪತ್ರದಲ್ಲಿ ಆರೋಪಿಯ ವಯಸ್ಸು 16 ವರ್ಷ ಹಾಗೂ 10 ತಿಂಗಳು ಎಂದು ನಮೂದಿಸಲಾಗಿದೆ. ಆದರೆ ಆತನ ನಿಜವಾದ ವಯಸ್ಸು 21 ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.