ಜೈಪುರ: ತಂದೆಯೊಬ್ಬರು ಹೆಲಿಕಾಪ್ಟರ್ ಮೂಲಕ ತನ್ನ ಮಗಳಿಗೆ ಆಕೆಯ ಪತಿಯ ಮನೆಗೆ ಕಳುಹಿಸಿಕೊಟ್ಟ ಘಟನೆ ರಾಜಸ್ಥಾನದ ಜುಂಜುನುಯಲ್ಲಿ ನಡೆದಿದೆ.
ಜುಂಜುನು ಜಿಲ್ಲೆಯ ಅಜಿತ್‍ಪುರದ ನಿವಾಸಿಯಾಗಿರುವ ಮಹೇಂದ್ರ ಸಿಂಗ್ ಶ್ಲೋಕ್ ತಮ್ಮ ಮಗಳು ರೀನಾ ಮದುವೆ ಆದ ಬಳಿಕ ಹೆಲಿಕಾಪ್ಟರ್ ಮೂಲಕ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಬೇಕೆಂದು ಒಂದು ವರ್ಷದ ಹಿಂದೆಯೇ ನಿರ್ಧರಿಸಿದ್ದರು. ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಡುವಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಅದು ಅತ್ಯಂತ ಭಾವನಾತ್ಮಕ ಕ್ಷಣ. ಈ ಕ್ಷಣ ಮಗಳ ಜೀವನದಲ್ಲಿ ಸ್ಮರಣೀಯವಾಗಿರಲಿ ಎಂದು ತಂದೆ ಮಹೇಂದ್ರ ಸಿಂಗ್ ಬಯಸಿದ್ದರು.
Advertisement
Jhunjhunu: Departure of a bride, Reena after her marriage was on a helicopter arranged by her father in Ajitpura village. Mahendra Solakh, bride's father says,"I planned this a year back and shared the idea with my family when the wedding was 2 months away." (21.11) #Rajasthan. pic.twitter.com/zRhDmHrNFD
— ANI (@ANI) November 22, 2019
Advertisement
ಮದುವೆಯಾದ ತಕ್ಷಣ ವಧು ರೀನಾ ಹಾಗೂ ವರ ಸಂದೀಪ್ ಲಾಂಬಾ ಜುಂಜುನು ಜಿಲ್ಲೆಯ ಚಿದಾವಾ ಪಟ್ಟಣದ ಬಳಿಯಿರುವ ಅಜಿತ್‍ಪುರ ಗ್ರಾಮದಿಂದ ಸುಲ್ತಾನಗೆ ಹೆಲಿಕಾಪ್ಟರ್ ಮೂಲಕ ತೆರಳಿದರು. ಈ ವೇಳೆ ಹೆಲಿಕಾಪ್ಟರ್ ನೋಡಲು ಮುಂಜಾನೆ ಸಾಕಷ್ಟು ಜನ ಸೇರಿದ್ದರು.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಂದ್ರ ಸಿಂಗ್, ನಾನು ಒಂದು ವರ್ಷದ ಹಿಂದೆಯೇ ನನ್ನ ಮಗಳಿಗೆ ಹೆಲಿಕಾಪ್ಟರ್ ಮೂಲಕ ಬೀಳ್ಕೊಡಬೇಕು ಎಂದು ನಿರ್ಧರಿಸಿದ್ದೆ. ಅಲ್ಲದೆ ಮದುವೆಗೆ ಎರಡು ತಿಂಗಳು ಇರುವಾಗ ನಾನು ಈ ವಿಷಯವನ್ನು ಮನೆಯವರ ಬಳಿ ಹಂಚಿಕೊಂಡೆ. ಇದು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುತ್ತದೆ. ನಾವು ಹೆಣ್ಣು ಮಕ್ಕಳ ಜೊತೆ ಸಾಕಷ್ಟು ಘಟನೆಗಳನ್ನು ಹೊಂದಿದ್ದೇವೆ. ಇದರಿಂದ ನಮಗೆ ಸ್ವಲ್ಪ ಹೆಮ್ಮೆ ಆಗುತ್ತದೆ ಎಂದು ಹೇಳಿದ್ದಾರೆ.