ತಂದೆ, ಮಗನ ಕೊಂದು ಪೊಲೀಸರಿಗೆ ಆರೋಪಿ ಶರಣು

Public TV
1 Min Read
ANE MURDER

ಬೆಂಗಳೂರು: ಜಮೀನು ಗಲಾಟೆ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಕೊಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನ ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾರಾಯಣರೆಡ್ಡಿ(60) ಮತ್ತು ಲಿಂಗಾರೆಡ್ಡಿ(32) ಮೃತ ದುರ್ದೈವಿಗಳು. ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಸಂಜೆ ಸುಮಾರು 5.45ರ ವೇಳೆಗೆ ಕೊಲೆ ನಡೆದಿದೆ.

vlcsnap 2019 02 05 08h20m27s006

ಬಾಬು ಮತ್ತು ಗ್ರಾಮದ ನಾರಾಯಣರೆಡ್ಡಿ ಅವರಿಗೂ ಸರ್ವೆ ನಂ18 ರ 2 ಎಕರೆ ಭೂಮಿಯ ಬಗ್ಗೆ ವಿವಾದವಿತ್ತು. ಸುಮಾರು 15 ವರ್ಷಗಳಿಂದ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಸೋಮವಾರ ಜಮೀನಿನಲ್ಲಿ ನಾರಾಯಣರೆಡ್ಡಿ ಹಾಗೂ ಆತನ ಮಗ ಲಿಂಗಾರೆಡ್ಡಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಬು ಏಕಾಏಕಿ ಬಂದು ಮಚ್ಚಿನಿಂದ ಇಬ್ಬರಿಗೂ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಅಷ್ಟೇ ಅಲ್ಲದೇ ಆರೋಪಿ ಬಾಬು ಕೊಲೆ ಮಾಡಿದ ಬಳಿಕ ತಾನೇ ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿ ಮೃತದೇಹಗಳನ್ನು ವೈಟ್‍ಫೀಲ್ಡ್ ನ ವೈದೇಹಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಇತ್ತ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೋಲಿಸರು ಬಿಗಿ ಬಂದೊಬಸ್ತ್ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *