ಬೆಂಗಳೂರು: ಹಿಟ್ ಆ್ಯಂಡ್ ರನ್ (Hit And Run) ಕೇಸ್‌ಗೆ ತಂದೆ (Father) ಹಾಗೂ ಮಗ (Son) ಬಲಿಯಾಗಿರುವ ಘಟನೆ ಬೆಂಗಳೂರಿನ (Bengaluru) ರಾಮಯ್ಯ ಆಸ್ಪತ್ರೆ ಮುಂಭಾಗದ ಇಸ್ರೋ ಸರ್ಕಲ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಚಿರಂಜೀವಿ (25), ರಘು (65) ಮೃತ ಪಟ್ಟಿದ್ದು, ಇವರು ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಕೋರಮಂಗಲದಲ್ಲಿರುವ (Koramangala) ತಮ್ಮ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು 12 ಗಂಟೆಯ ವೇಳೆಗೆ ಮನೆಗೆ ಬರುತ್ತಿದ್ದಾಗ ಅಪಘಾತವಾಗಿದ್ದು, ಘಟನೆಯಲ್ಲಿ ತಂದೆ-ಮಗ ಮೃತಪಟ್ಟಿದ್ದಾರೆ. ಅಲ್ಲದೇ ವಾಸು ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವೃದ್ಧೆಯನ್ನು ಛತ್ರಿಯಿಂದ ಹೊಡೆದು ಕೊಂದ ವೃದ್ಧ!
ಈ ಮೂವರು ಇಸ್ರೋ ಸರ್ಕಲ್ ಬಳಿ ಹೋಗುತ್ತಿದ್ದ ಸಂದರ್ಭ ಹಿಂಬಂದಿಯಿಂದ ಕಂಠಪೂರ್ತಿ ಕುಡಿದ ಗುಂಪೊಂದು ಇಕೋ ಕಾರಿನಲ್ಲಿ ರಭಸವಾಗಿ ಬಂದಿದ್ದು, ಆರಂಭದಲ್ಲಿ ಆಟೋಗೆ ಕಾರು ಗುದ್ದಿ ಆಟೋ ಪಲ್ಟಿಯಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೆ ವೇಗವಾಗಿ ಹೋಗಲು ಯತ್ನಿಸುವ ವೇಳೆ ಮುಂದೆ ಎರಡು ಕಾರು ಪಾರ್ಕ್ ಮಾಡಿರುತ್ತಾರೆ. ಮುಂದೆ ಇರುವ ಕಾರುಗಳನ್ನು ತಪ್ಪಿಸಲು ಹೋಗಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ (Pedestrian) ವಾಸು ಎಂಬವರಿಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್‌ನಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಉಜ್ಜಿ ದೌರ್ಜನ್ಯ
ಘಟನಾ ಸ್ಥಳದಲ್ಲಿದ್ದ ಆಟೋ ಚಾಲಕರು ಹಾಗೂ ಸ್ಥಳೀಯರು ಸೇರಿ ಅಪಘಾತ ಮಾಡಿದ ಕಾರನ್ನು ತಡೆದು ಕಾರಿನಲ್ಲಿದ್ದ ಆಕಾಶ್ ಎಂಬವನನ್ನು ವಶಕ್ಕೆ ಪಡೆದು ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದು, ಉಳಿದವರು ಅಪಘಾತ ಮಾಡಿದ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಪೊಲೀಸರ ವಶದಲ್ಲಿರುವ ಆಕಾಶ್ ಮಾಗಡಿ ಜಿಲ್ಲಾ ಪಂಚಾಯತ್ ಸದಸ್ಯೆಯ ಮಗ ಎಂಬ ವಿಚಾರ ತಿಳಿದು ಬಂದಿದೆ. ಆರೋಪಿತರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಘಟನೆಗೆ ಕಾರಣವಾದವರ ವಿರುದ್ಧ ಸದಾಶಿವ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
Web Stories