DharwadDistrictsKarnatakaLatestMain Post

ವಾಹನ ತೊಳೆಯಲು ಹೋಗಿ ನೀರು ಪಾಲಾದ ತಂದೆ, ಮಗ

Advertisements

ಧಾರವಾಡ: ವಾಹನ ತೊಳೆಯಲೆಂದು ಹೋದ ತಂದೆ, ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

crime

ಗದಿಗೆಪ್ಪ ಅಂಗಡಿ(43) ಹಾಗೂ ರವಿ ಅಂಗಡಿ(14) ಮೃತ ದುರ್ದೈವಿಗಳಾಗಿದ್ದಾರೆ. ಟಂಟಂ ವಾಹನವನ್ನು ತೊಳೆಯಲೆಂದು ತಂದೆ, ಮಗ ಇಬ್ಬರೂ ಕೆರೆಗೆ ಹೋಗಿದ್ದರು. ಈ ವೇಳೆ ಮಗ ಕೆರೆಯಲ್ಲಿ ಸಿಲುಕಿ ಮುಳುಗುತ್ತಿದ್ದ. ಆತನನ್ನು ಉಳಿಸಲು ಹೋಗಿ ತಂದೆ ಕೂಡ ನೀರು ಪಾಲಾಗಿದ್ದಾನೆ. ಸ್ಥಳೀಯರಿಗೆ ಈ ವಿಷಯ ಗೊತ್ತಾದ ಕೂಡಲೇ ಇಬ್ಬರನ್ನು ಹೊರಗಡೆ ತೆಗೆದಿದ್ದಾರೆ. ಆದರೆ ಅಷ್ಟರಲ್ಲಿ ಗದಿಗೆಪ್ಪ ಅಸುನೀಗಿದ್ದ. ಮಗ ರವಿ ನಿತ್ರಾಣ ಸ್ಥಿತಿ ತಲುಪಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರವಿ ಕೂಡ ಅಸುನೀಗಿದ್ದಾನೆ. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

ಗದಿಗೆಪ್ಪ ಚಿಕ್ಕ ಟಂಟಂ ಇಟ್ಟುಕೊಂಡು ಬಾಡಿಗೆ ನಡೆಸುತ್ತಿದ್ದ. ಇದೇ ಆತನ ಕುಟುಂಬಕ್ಕೆ ಆಸರೆಯಾಗಿತ್ತು. ಆದರೆ ಇದೀಗ ಈ ವಾಹನದ ಮಾಲೀಕನೇ ಧಾರುಣವಾಗಿ ಸಾವನ್ನಪ್ಪಿದ್ದು, ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇನ್ನು ಬಾಳಿ ಬದುಕಬೇಕಾದ ರವಿ ಉದಯಕ್ಕೂ ಮುನ್ನವೇ ಅಸ್ತಂಗತನಾಗಿದ್ದಾನೆ. ಗ್ರಾಮಸ್ಥರು ಎರಡೂ ಶವಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರ ಸಹಕಾರದೊಂದಿಗೆ ತೆಗೆದುಕೊಂಡು ಬಂದಿದ್ದರು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

Live Tv

Leave a Reply

Your email address will not be published.

Back to top button