ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ – ತಂದೆ, ಮಗಳು ಆತ್ಮಹತ್ಯೆ

Public TV
1 Min Read
RCR SUICIDE

ರಾಯಚೂರು: ಫೇಸ್ ಬುಕ್ ನಲ್ಲಿ ಪ್ರಕಟಗೊಂಡ ವಿಡಿಯೋ ಅವಾಂತರದಿಂದ ತಂದೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ನಡೆದಿದೆ.

40 ವರ್ಷದ ರಾಮನಗೌಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, 18 ವರ್ಷದ ಮಗಳು ಬಸಲಿಂಗಮ್ಮ ವಿಷ ಕುಡಿದು ಆಸ್ಪತ್ರೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಫೆಬ್ರವರಿ 25 ರಂದು ಗೌಡನಬಾವಿಯಲ್ಲಿ ಊರ ಜಾತ್ರೆ ನಡೆದಿತ್ತು, ಈ ವೇಳೆ ಯುವತಿ ಕುಂಭ ಹೊತ್ತುಕೊಂಡು ಹೋಗುವ ಫೋಟೋ, ವಿಡಿಯೋವನ್ನು ಕೆಲ ಯುವಕರು ಫೇಸ್ ಬುಕ್ ಗೆ ಹಾಕಿದ್ದರು.

FACE BOOK

ವಿಡಿಯೋ ನೋಡಿ ಇನ್ನೊಂದು ಯುವಕರ ಗುಂಪು ಜಗಳ ಮಾಡಿತ್ತು. ಜಾತ್ರೆಯ ಬಳಿಕ ಗ್ರಾಮದ ಹಿರಿಯರು ನ್ಯಾಯ ಇತ್ಯರ್ಥ ಮಾಡಿದ್ದರು. ಆದರೆ ಶನಿವಾರ ರಾತ್ರಿ ಪುನಃ ಇದೇ ವಿಚಾರಕ್ಕೆ ಗುಂಪು ಘರ್ಷಣೆಯಾಗಿ ಯುವಕ ಕನಕರಾಯ ಎಂಬಾತ ಗಂಭೀರ ಗಾಯಗೊಂಡಿದ್ದ. ಇದರಿಂದ ನಾಯಕ್ ಸಮಾಜದ ಮುಖಂಡರು ಅದೇ ಸಮಾಜದ ರಾಮನಗೌಡನಿಗೆ ಬೈದಿದ್ದರು. ಇದರಿಂದ ಮನನೊಂದ ರಾಮನಗೌಡ ಇಂದು ನೇಣಿಗೆ ಶರಣಾಗಿದ್ದಾನೆ. ಕಣ್ಣ ಮುಂದೆ ತಂದೆಯ ಸಾವನ್ನ ಕಂಡು ಮಗಳು ಸಹ ವಿಷ ಕುಡಿದು ಸಾವನ್ನಪ್ಪಿದ್ದಾಳೆ.

ಈ ಘಟನೆ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಘಟನೆಯಿಂದ ಗ್ರಾಮಸ್ಥರು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳನ್ನ ಕೂಡಲೇ ಬಂಧಿಸಬೇಕು. ಸ್ಥಳಕ್ಕೆ ಎಸ್‍ಪಿ ಆಗಮಿಸಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಿಹಿಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲ್ಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *