ಗುವಾಹಟಿ: ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳೋದು ಅಥವಾ ಹೆಚ್ಚಿಗೆ ಊಟ ಮಾಡಿದಾಗ ಹೊಟ್ಟೆ ಊದಿಕೊಳ್ಳೊದು ಸಾಮಾನ್ಯ. ಆದ್ರೆ ಹೊಟ್ಟೆ ಊತವೇ ಈಗ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿದೆ.
ಅಸ್ಸಾಂನ ಬಿಕಾಶ್ ಹಜಾರಿಕಾ 61 ಕೆಜಿ ತೂಕವಿದ್ದು, ಅವರ ಹೊಟ್ಟೆ ಊದಿಕೊಂಡಿರುವ ಕಾರಣ ಪ್ರತಿದಿನ ನಡೆದಾಡಲು ಸಾಧ್ಯವಾಗದೆ ನೋವಿನಿಂದ ನರಳುವಂತಾಗಿದೆ. ಇವರು ಕಂಜೆಸ್ಟಿವ್ ಹೆಪಟಾಮೆಗಾಲಿ ಎಂಬ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಲೇ ಅವರ ಹೊಟ್ಟೆ 10 ಕೆಜಿಯಷ್ಟು ಊದಿಕೊಂಡಿದೆ. ಈ ತೊಂದರೆಯಿಂದಾಗಿ 21 ವರ್ಷದ ಬಿಕಾಶ್ ಕಳೆದ 5 ವರ್ಷದಿಂದ ಒಂದು ಸಲಕ್ಕೆ ಸುಮಾರು ಒಂದೂವರೆ ಗಂಟೆಯ ಕಾಲ ಕುಳಿತ ಸ್ಥಿತಿಯಲ್ಲೇ ನಿದ್ದೆ ಮಾಡುವಂತಾಗಿದೆ.
Advertisement
Advertisement
ಚಿಕಿತ್ಸೆಗೆ ಈಗಾಗಲೇ ತಡವಾಗಿದೆ ಎಂದು ಭಾವಿಸಿರೋ ಬಿಕಾಶ್ ಸದ್ಯ ಬದುಕುವ ಎಲ್ಲಾ ಆಸೆಯನ್ನ ಬಿಟ್ಟಿದ್ದಾರೆ. ಪ್ರತಿದಿನ ನರಳಾಡುತ್ತಿರುವುದರಿಂದ ನಾನು ನಿಧಾನವಾಗಿ ಸಾಯ್ತಿದ್ದೀನಿ. ಏನೇ ಮಾಡಿದ್ರೂ ನೋವನ್ನ ದೂರ ಮಾಡೋಕೆ ಆಗ್ತಿಲ್ಲ ಎಂದು ಬಿಕಾಶ್ ಹೇಳಿದ್ದಾರೆ. ಸರ್ಜರಿಯಿಂದ ಬಿಕಾಶ್ ಅವರನ್ನ ಗುಣಪಡಿಸಬಹುದು. ಆದ್ರೆ ಬಿಕಾಶ್ ತಂದೆ ಗುತ್ತಿಗೆ ನೌಕರರಾಗಿದ್ದು ಸುಮಾರು 5 ಲಕ್ಷಕ್ಕೂ ಮೀರಿದ ಚಿಕಿತ್ಸಾ ವೆಚ್ಛವನ್ನ ಭರಿಸಲು ಕುಟುಂಬಕ್ಕೆ ಸಾಧ್ಯವಿಲ್ಲ.
Advertisement
Advertisement
ಬಿಕಾಶ್‍ಗೆ ಇದರ ಲಕ್ಷಣ ಕಾಣಿಸಿಕೊಂಡಾದ ಸ್ಥಳೀಯ ವೈದ್ಯರು ಸಣ್ಣ ಇನ್ಫೆಕ್ಷನ್ ಎಂದು ಹೇಳಿ ಕೆಲವು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದ್ರೆ ಅದು ಉಲ್ಭಣಿಸಿದ ನಂತರ ಬಿಕಾಶ್ ಅವರ ಔಷಧಿಗಾಗಿ ಕುಟುಂಬದವರು ಮನೆಯನ್ನೇ ಮಾರಬೇಕಾಯ್ತು. ಇದೀಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದ ಕಾರಣ ಬಿಕಾಶ್ ಬದುಕುವ ಯಾವುದೇ ಭರವಸೆಯನ್ನ ಇಟ್ಟುಕೊಂಡಿಲ್ಲ.