ಬಾಗಲಕೋಟೆ: ಶ್ರೀಶೈಲದಲ್ಲಿ ನಡೆದ ಗಲಾಟೆ ವೇಳೆ ಗಂಭೀರ ಗಾಯಗೊಂಡಿದ್ದ ಯುವಕ ಶ್ರೀಶೈಲ ವಾರಿಮಠ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತೆಲೆಗೆ ಪೆಟ್ಟಾಗಿದ್ದ ಕಾರಣ ಅವರಿಗೆ ಮಾತೇ ಬರುತ್ತಿಲ್ಲವೆಂದು ಕುಟುಂಬಸ್ಥರು ಆತಂಕಪಟ್ಟಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕೆ ತೆರಳಿದ್ದ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದ ವಾರಿಮಠ ಅವರ ನಡುವೆ ಕುಡಿಯುವ ನೀರಿನ ಬಾಟಲ್ ವಿಚಾರಕ್ಕೆ ಮಾರ್ಚ್ 30ರ ಮಧ್ಯರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ದುಷ್ಕರ್ಮಿಗಳು ವಾರಿಮಠ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಶ್ರೀಶೈಲ ಜಗದ್ಗುರುಗಳಿಂದ ವೀರಭದ್ರೇಶ್ವರ ಜಯಂತಿ
Advertisement
ಇದೇ ವೇಳೆ ಹಲವು ಕನ್ನಡಿಗರ ಮೇಲೆಯೂ ಹಲ್ಲೆ ನಡೆದಿತ್ತು. ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ವಾರಿಮಠ ಅವರು ಗುಣಮುಖರಾಗಿದ್ದಾರೆ. ಆದರೆ ಅವರಿಗೆ ಮಾತೇ ಬರುತ್ತಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement