ಬೆಳಗಾವಿ: ಖಾನಾಪುರದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್(62) ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಏಳೆಂಟು ಜನರ ಗುಂಪೊಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಜಯಂತ್ ಅವರನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಖಾನಾಪುರ-ಬೆಳಗಾವಿ ಹೆದ್ದಾರಿಯ ಝಾಡ್ ಶಹಾಪುರ ಬಳಿ ಹಿಂಬಾಲಿಸಿಕೊಂಡು ಬಂದ ಮುಸುಕುಧಾರಿಗಳು ಜಯಂತ್ ಅವರ ಕಾರು ತಡೆದು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಲ ಲಾರಿ ಚಾಲಕರು ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ
Advertisement
Advertisement
ಹಲ್ಲೆ ಮಾಡಿದ ಆರೋಪಿಗಳು ಅಪರಿಚಿತರಾಗಿದ್ದು, ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡಿದ್ದರು. ಹಲ್ಲೆ ವೇಳೆ ಜಯಂತ್ ಅವರ ಬಲಗಾಲು, ಮೊಣಕಾಲು, ಭುಜ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ಧ – ಗಗನಕ್ಕೇರಿದ ಅಡುಗೆ ಎಣ್ಣೆ ದರ
Advertisement
ಜಯಂತ್ ತಿನೇಕರ್ ಹಿನ್ನೆಲೆ:
ಬೆಳಗಾವಿ ಜಿಲ್ಲೆಯ ಖಾನಾಪೂರದ ನಿವಾಸಿ ಜಯಂತ್ ಮುಕುಂದ್ ತಿನೇಕರ್ ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದು ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು. ನಕಲಿ ಛಾಪಾ ಕಾಗದ ಹಗರಣದ ಕುರಿತು ಆಗಿನ ಡಿಜಿಪಿ ಸಾಂಗ್ಲಿಯಾನಾ ಅವರನ್ನು ಭೇಟಿಯಾಗಿ ಕರೀಂ ಲಾಲಾ ತೇಲಗಿ ನಡೆಸುತ್ತಿದ್ದ ನಕಲಿ ಛಾಪಾ ದಂಧೆಯ ಬಗ್ಗೆ ದೂರು ನೀಡಿದ್ದರು.