ತುಮಕೂರು: ಕೆಎಸ್‌ಆರ್‌ಟಿಸಿ ಬಸ್ (KSRTC Bus) ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ನೊಣವಿನಕೆರೆ ಬಳಿ ಆಲ್ಬುರಿನಲ್ಲಿ ನಡೆದಿದೆ.
ಬಿದರೆಕೆರೆ ಗ್ರಾಮದ ಯೋಗೇಶ್(23), ದಯಾನಂದ್(25) ಮೃತ ದುರ್ದೈವಿಗಳು. ಶುಕ್ರವಾರ ರಾತ್ರಿ ಯೋಗೇಶ್ ಮತ್ತು ದಯಾನಂದ್ ಒಂದೇ ಬೈಕ್‌ನಲ್ಲಿ ಬಿದರೆಕೆರೆ ಕಡೆಯಿಂದ ತುರುವೇಕೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ತುರುವೇಕೆರೆ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿದೆ – ಪೋಸ್ಟರ್ ಹಾಕಿ, ಬಿಸ್ಕತ್ ಹಂಚಿ ಸಂಭ್ರಮಿಸಿದ ಗಂಡ!
Advertisement
Advertisement
ಮೃತರು ಬೈಕ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಾರಾತ್ಮಕ ತಂತ್ರಗಳಿಂದ ರಾಜಕೀಯ ಮಾಡ್ತಿದ್ದವರಿಗೆ ದೆಹಲಿ ಜನರಿಂದ ತಕ್ಕ ಪಾಠ: ಜೋಶಿ
Advertisement