ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನದ ತಂಡದ ವಿರುದ್ಧ ದೇಶದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ನಾಯಕ ಸರ್ಫರಾಜ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
ತಂಡದ ನಾಯಕ ಸರ್ಫರಾಜ್ ಅಹ್ಮದ್ ಟಾಸ್ಗೆ ಆಗಮಿಸುತ್ತಿದ್ದ ವೇಳೆ ಆತನ ಹೊಟ್ಟೆ ಬೊಜ್ಜಿನಿಂದ ಕೂಡಿರುವುದನ್ನು ನೋಡಿ ನನಗೆ ಅಸಹ್ಯವಾಗಿತ್ತು. ಇದುವರೆಗೂ ನಾನು ನೋಡಿದ ಆನ್ ಫಿಟ್ ಕ್ಯಾಪ್ಟನ್ ಎಂದರೆ ಈತನೆ. ಆತನ ದೇಹದಲ್ಲಿ ತುಂಬಿಕೊಂಡಿದ್ದ ಬೊಜ್ಜಿನಿಂದ ಆತ ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ. ಅಲ್ಲದೇ ವಿಕೆಟ್ ಕೀಪಿಂಗ್ ಸಮಯದಲ್ಲಿ ಭಾರೀ ಅವಸ್ಥೆ ಪಡುತ್ತಿದ್ದನ್ನು ಗಮನಿಸಿದ್ದೇನೆ ಎಂದು ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
.@SarfarazA_54 is the first captain that i have seen unfit – @shoaib100mph #Cricket #Pakistan #England #CWC19 #WorldCup #Karachi #Lahore #WeHaveWeWill #PakistanZindabad #SarfarazAhmed #Captain #ShoaibAkhtar pic.twitter.com/ZADpdnVgoC
— Khel Shel (@khelshel) June 1, 2019
Advertisement
ಪಂದ್ಯದ ವೇಳೆ ಅಖ್ತರ್ ಈ ಮೇಲಿನ ಮಾತುಗಳನ್ನು ಆಡಿದ್ದು, ಆ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಆಗಿದ್ದು.. ಆಗಿದೆ.. ನನ್ನ ಆಲೋಚನೆಗಳ ಭಾವೋದ್ವೇಗದಲ್ಲಿ ಆಡಿದ ಮಾತುಗಳನ್ನು ಮತ್ತೊಮ್ಮೆ ಚಿಂತಿಸುತ್ತಿದ್ದೇನೆ. ದೇಶದ ಪರ ಆಡುತ್ತಿರುವ ಆಟಗಾರರಿಗೆ ನಾವು ಬೆಂಬಲವಾಗಿರುವುದು ಅಗತ್ಯ. ಟೂರ್ನಿ ಅಂತ್ಯವಾಗುವವರೆಗೂ ನಮ್ಮ ಬೆಂಬಲ ಆಟಗಾರರಿಗೆ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
Advertisement
Harsh – Shoaib Akhtar "When Sarfaraz Ahmed came for the toss, his stomach was sticking out and his face was so fat. He's the first captain I've seen who is so unfit. He's not able to move across and he's struggling with wicket-keeping" #CWC19 #PAKvWI
— Saj Sadiq (@SajSadiqCricket) May 31, 2019
Advertisement
ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಸರ್ಫರಾಜ್ ಅಹ್ಮದ್, 2017 ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಕೂಡ ಭಾರತ ತಂಡ ಕೂಡ ಮೊದಲ ಪಂದ್ಯಗಳಲ್ಲಿ ಸೋಲುಂಡಿತ್ತು. ಆದರೆ ಫೈನಲ್ ವೇಳೆಗೆ ಟೈಟಲ್ ಗೆದ್ದು ಸಂಭ್ರಮಿಸಿತ್ತು ಎಂದು ನೆನಪು ಮಾಡಿದ್ದಾರೆ. ಅಲ್ಲದೇ ಸೋಲಿನಿಂದ ಆಟಗಾರರು ಪಾಠ ಕಲಿತು ಟೈಟಲ್ ಗೆಲುವಿನ ರೇಸ್ ನಲ್ಲಿ ಇರುತ್ತೇವೆ. ಟೂರ್ನಿಯ ಉಳಿದ 8 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನು ಓದಿ: ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ
Ok the match is over. Recollecting my thoughts and emotions.
We have to back these boys, they are representing our nation. They need our support throughout the World Cup. #PAKvWI #CWC19
— Shoaib Akhtar (@shoaib100mph) May 31, 2019