ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುತ್ತಮುತ್ತಲಿನ ಭಾಗದಲ್ಲಿ ಶುಕ್ರವಾರ ಮಳೆಯಾಗಿದೆ.
ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು, ಕಕ್ಕಬೆ, ಭಾಗಮಂಡಲ ಸೇರಿದಂತೆ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆಯ ವರೆಗೆ ಮಳೆಯಾಗಿದೆ. ಮಳೆಯು ಇಳೆಯನ್ನು ಸೋಕುತ್ತಿದ್ದಂತೆ ಬೇಸಿಗೆಯ ಧಗೆ ಕೊಂಚ ಮಟ್ಟಿಗೆ ಕಡಿಮೆಯಾದಂತಾಗಿದೆ. ಪ್ರಾಣಿ ಪಕ್ಷಿಗಳಿಗೂ ಒಂದಷ್ಟು ಕುಡಿಯುವ ನೀರಿಗೆ ಆಕ್ರಂದನ ಮುಗಿಲು ಮುಟ್ಟುತ್ತಿರುವ ಸಮಯದಲ್ಲಿ ದಿಢೀರ್ ಮಳೆಯಿಂದ ಇಳೆ ತಂಪಾಗಿದೆ. ಇದನ್ನೂ ಓದಿ: ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ
ರೋಬಸ್ಟಾ ಕಾಫಿ ಗಿಡದಲ್ಲಿ ಹೂವು ಅರಳುತ್ತಿದ್ದು, ಅರೇಬಿಕಾ ತಳಿಯ ಕಾಫೀ ಗಿಡಗಳಲ್ಲಿನ ಮೊಗ್ಗುಗಳು ಅರಳಲಾರಂಭಿಸಿದೆ. ಸಣ್ಣ ಬೆಳೆಗಾರರು ಮತ್ತು ರೈತರು ತೋಟಕ್ಕೆ ನೀರು ಹಾಯಿಸುವ ಸಮಯದಲ್ಲಿ ಮಳೆ ಬಂದಿದೆ. ಇದನ್ನೂ ಓದಿ: ವಿಷಪೂರಿತ ಮೇಕೆ ಮೃತದೇಹ ತಿಂದು 100 ರಣಹದ್ದುಗಳ ದಾರುಣ ಸಾವು