ನವದೆಹಲಿ: ಫಾಸ್ಟ್ಟ್ಯಾಗ್ (FASTag) ದೈನಂದಿನ ಟೋಲ್ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಮಂಗಳವಾರ ತಿಳಿಸಿದೆ.
ಫಾಸ್ಟ್ಟ್ಯಾಗ್ ವ್ಯವಸ್ಥೆಯ ಮೂಲಕ ದೈನಂದಿನ ಟೋಲ್ ಸಂಗ್ರಹವು ಏ. 29 ರಂದು ಸಾರ್ವಕಾಲಿಕ ಗರಿಷ್ಠ 193.15 ಕೋಟಿ ರೂ. ತಲುಪಿದೆ. ಒಂದೇ ದಿನದಲ್ಲಿ 1.16 ಕೋಟಿ ವಹಿವಾಟುಗಳು ದಾಖಲಾಗಿದೆ. ಭಾರತದಲ್ಲಿ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್ಟ್ಯಾಗ್ ವ್ಯವಸ್ಥೆಯ ಅನುಷ್ಠಾನ ಉತ್ತಮ ಬೆಳವಣಿಗೆಯೊಂದಿಗೆ ಯಶಸ್ಸನ್ನು ಕಂಡಿದೆ ಎಂದು ಪ್ರಾಧಿಕಾರ (NHAI) ಹೇಳಿಕೊಂಡಿದೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ
Advertisement
Advertisement
ದೇಶದಾದ್ಯಂತ 50 ಕ್ಕೂ ಹೆಚ್ಚು ನಗರಗಳಲ್ಲಿ 140 ಕ್ಕೂ ಹೆಚ್ಚು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಟ್ಯಾಗ್ ವ್ಯವಸ್ಥೆ ಮಾಡಿದೆ. ಅಲ್ಲದೆ ತಡೆರಹಿತ ಪ್ರಯಾಣ ಮತ್ತು ಸುರಕ್ಷಿತ ಪಾವತಿಯನ್ನು ಸುಗಮಗೊಳಿಸಿದೆ. ಫಾಸ್ಟ್ಟ್ಯಾಗ್ ಕಾರ್ಯಕ್ರಮದ ಅಡಿಯಲ್ಲಿ ಟೋಲ್ ಪ್ಲಾಜಾಗಳ (Toll Plazas) ಸಂಖ್ಯೆಯು 339 ರಾಜ್ಯ ಟೋಲ್ ಪ್ಲಾಜಾಗಳನ್ನು ಒಳಗೊಂಡಂತೆ 770 ರಿಂದ 1,228 ಕ್ಕೆ ಏರಿಕೆ ಮಾಡಲಾಗಿದೆ.
Advertisement
ಹೆದ್ದಾರಿ (Expressways) ಬಳಕೆದಾರರಿಂದ ಫಾಸ್ಟ್ಟ್ಯಾಗ್ನ ಅಳವಡಿಕೆ ಟೋಲ್ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಿದೆ. ಭಾರತದ ಹೆದ್ದಾರಿ ಮೂಲಸೌಕರ್ಯದಲ್ಲಿ ಮತ್ತಷ್ಟು ಹೂಡಿಕೆ ಅಗತ್ಯವಿದೆ ಎಂದು ಪ್ರಾಧಿಕಾರ ಹೇಳಿದೆ.
Advertisement
ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣಾ ಬೂತ್ಗಳಲ್ಲಿ ವಾಹನ ಸವಾರಾರು ನಿಲ್ಲಿಸದೆಯೇ ಟೋಲ್ ಶುಲ್ಕವನ್ನು ಪಾವತಿಸಲು ಫಾಸ್ಟ್ಟ್ಯಾಗ್ ಅನುಕೂಲವಾಗಿದೆ. ಫೆ.2021 ರಲ್ಲಿ ಸರ್ಕಾರ ಕಮರ್ಶಿಯಲ್ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿತು.
ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಹೆಚ್ಚಾಗುತ್ತಿದೆ. 2019 ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗುತ್ತಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿತ್ತು. ಇದನ್ನೂ ಓದಿ: ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?