ನವದೆಹಲಿ: ಹಾಲಿವುಡ್ ಸಿನಿಮಾ ಫಾಸ್ಟ್ ಆ್ಯಂಡ್ ಫ್ಯೂರಿಯಸ್ 7 ನಿಂದ ಪ್ರೇರಿತರಾಗಿ ಹಲವು ಹೈಟೆಕ್ ಗ್ಯಾಜೆಟ್ಸ್‌ಗಳನ್ನು ಬಳಸಿಕೊಂಡು 40 ಐಷಾರಾಮಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೂಲದವನಾದ ರವಿ ಈ ಗ್ಯಾಂಗ್‍ನ ಕಿಂಗ್‍ಪಿನ್ ಆಗಿದ್ದು, ಆರೋಪಿಗಳನ್ನು ಮನೀಶ್ ರಾವ್ (42) ಮತ್ತು ಜಗದೀಪ್ ಶರ್ಮಾ (43) ಮತ್ತು ಆಸ್ ಮೊಹಮ್ಮದ್ (40) ಎಂದು ಗುರುತಿಸಲಾಗಿದೆ. ರಾವ್ ಮತ್ತು ಶರ್ಮಾ ದೆಹಲಿಯ ಉತ್ತಮ್ ನಗರದ ನಿವಾಸಿಗಳಾಗಿದ್ದರೆ, ಮೊಹಮ್ಮದ್ ಮೀರತ್ ಮೂಲದವನಾಗಿದ್ದನು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ
Advertisement
Advertisement
ಆರೋಪಿಗಳು ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಆಂಡ್ ದಿ ಫ್ಯೂರಿಯಸ್’ ನಿಂದ ಪ್ರೇರಿತರಾಗಿದ್ದರು. ಕೆಲವೇ ನಿಮಿಷಗಳಲ್ಲಿ ಕಾರುಗಳನ್ನು ಅನ್ಲಾಕ್ ಮಾಡಲು ಸ್ಕ್ಯಾನರ್‌ಗಳನ್ನು ಬಳಸಿಕೊಳ್ಳುತ್ತಿದ್ದರು. ನಂತರ ಕಾರುಗಳಲ್ಲಿ ಅಳವಡಿಸಲಾದ ಜಿಪಿಎಸ್ ಅನ್ನು ನಿಷ್ಕ್ರಿಯಗೊಳಿಸಲು ಜಾಮರ್ ಅನ್ನು ಬಳಸುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಮನೋಜ್ ಸಿ ತಿಳಿಸಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
Advertisement
ಆರೋಪಿಗಳಿಂದ ಎರಡು ಪಿಸ್ತೂಲ್‍ಗಳಲ್ಲದೆ, ಸೆನ್ಸಾರ್ ಕಿಟ್, ಮ್ಯಾಗ್ನೆಟ್, ಎಲ್‍ಎನ್‍ಟಿ ಕೀಗಳು ಮತ್ತು ಎಂಟು ರಿಮೋಟ್ ಕಾರಿನ ಕೀಗಳು ಸೇರಿದಂತೆ ವಿವಿಧ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಸಾಫ್ಟ್‌ವೇರ್ ಆಧಾರಿತ ಹ್ಯಾಕಿಂಗ್ ಸಾಧನ ಬಳಸಿಕೊಂಡು ಕಾರನ್ನು ಅನ್‍ಲಾಕ್ ಮಾಡುತ್ತಿದ್ದರು. ಈ ಸಾಧನದ ನೆರವಿನಿಂದ ಕಾರಿನ ಸಾಫ್ಟ್‌ವೇರ್ ಅನ್ನು ಫಾಮ್ರ್ಯಾಟ್ ಮಾಡಿ ಹೊಸ ಸಾಫ್ಟ್‌ವೇರ್ ಇನ್‍ಸ್ಟಾಲ್ ಮಾಡುತ್ತಿದ್ದರು. 2ರಿಂದ 3 ನಿಮಿಷಗಳ ಒಳಗೆ ಕಾರು ಕಳವು ಮಾಡುತ್ತಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಕಾರನ್ನು ಕದ್ದ ನಂತರ, ಅವರು ಅದನ್ನು ಸೊಸೈಟಿಗಳ ಹೊರಗೆ, ಆಸ್ಪತ್ರೆಗಳ ಬಳಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದ ಇತರ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದರು. ಕದ್ದ ಕಾರುಗಳನ್ನು ಆರೋಪಿಗಳು ರಾಜಸ್ಥಾನ ಮತ್ತು ಮೀರತ್‍ನಲ್ಲಿ ದುಬಾರಿ ವ್ಯವಹಾರಗಳ ಮೂಲಕ ಮಾರಾಟ ಮಾಡುತ್ತಿದ್ದರು.
ಪಶ್ಚಿಮ ವಿಹಾರ್ ಪ್ರದೇಶದಿಂದ ಕದ್ದ ಕಾರಿಗೆ ಡೀಲ್ ಮಾಡಲು ಬಂದಾಗ ರಾವ್ ಮತ್ತು ಶರ್ಮಾ ಅವರನ್ನು ಬಂಧಿಸಲಾಯಿತು. ಆರೋಪಿಗಳು ಏಪ್ರಿಲ್‍ನಿಂದ ಉತ್ತಮ್ ನಗರ, ತಿಲಕ್ ನಗರ, ಸುಭಾಷ್ ನಗರ, ಪಾಶಿಮ್ ವಿಹಾರ್, ಮುನಿರ್ಕಾ ಮತ್ತು ದ್ವಾರಕಾದಿಂದ 40 ಕಾರುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.