ಫ್ಯಾಷನ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಹೆಣ್ಣುಮಕ್ಕಳು. ಈಗಿನ ಫ್ಯಾಷನ್ ಯುಗದಲ್ಲಂತೂ ಟ್ರೆಂಡ್ ತಕ್ಕಂತೆ ಇರಬೇಕು ಅಂತಾನೇ ಬಯಸುತ್ತಾರೆ. ಉಡುಗೆ, ಮೇಕಪ್, ಆಭರಣ ಹೀಗೆ ಎಲ್ಲದರಲ್ಲೂ ಟ್ರೆಂಡಿಗೆ ಸರಿ ಹೊಂದುವಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾರ್ಕೆಟ್‌ನಲ್ಲಿ ಮಹಿಳೆಯರಿಗೆ ಇರುವಷ್ಟು ಆಯ್ಕೆ ಪುರುಷರಿಗೆ ಇಲ್ಲ. ವೆರೈಟಿ, ವೆರೈಟಿಯ ಡಿಸೈನ್‌ಗಳು, ಕರ‍್ಸ್ ಹೀಗೆ ನಾನಾ ತರಹದಲ್ಲಿ ಆಭರಣಗಳು ಹುಡ್ಗೀರ ಕಣ್ಣು ಕುಕ್ಕುತ್ತದೆ.
ಇಷ್ಟೆಲ್ಲಾ ಯಾಕೆ ಹೇಳ್ತಿದೀನಿ ಅಂತಾ ಅಂದ್ಕೊತ್ತಿದ್ದೀರಾ. ಹೆಣ್ಣುಮಕ್ಕಳ ಫ್ಯಾಷನ್ ಬಗ್ಗೆ ಎಷ್ಟು ಹೇಳಿದ್ರೂ ಸಾಲಲ್ಲ. ಅದೊಂದು ಸಮುದ್ರ ಇದ್ದಂತೆ. ದಿನ ದಿನ ಹೊಸಹೊಸ ಟ್ರೆಂಡ್ ಬರುತ್ತದೆ. ಅದಕ್ಕೇ ಎಲ್ಲಾರೂ ಒಗ್ಗಿಕೊಂಡು ಹೋಗುತ್ತಾರೆ. ಈಗಂತೂ ನಾರಿಮಣಿಯರ ಕಂಠದಲ್ಲಿ ಚೋಕರ್ ಎಂಬ ಆಭರಣ ರಾರಾಜಿಸುತ್ತಿದೆ. ಸೀರೆ ಪ್ರಿಯರಿಗಂತೂ ಈ ಚೋಕರ್ ಅಚ್ಚುಮೆಚ್ಚು. ಬೇರೆ ಬೇರೆ ಡಿಸೈನ್ ಹೊಂದಿರುವ ಈ ಚೋಕರ್ ಎಲ್ಲಾ ರೀತಿಯ ಡ್ರೆಸ್‌ಗಳಿಗೆ ಮ್ಯಾಚ್ ಆಗುತ್ತದೆ.
ಚೋಕರ್ ಅಲ್ಲಿ ನಾನಾ ವಿಧದ ಡಿಸೈನ್‌ಗಳಿದ್ದೂ, ಎತ್ನಿಕ್ ವೇರ್‌ಗೆ ಹಾಗೂ ಮಾಡರ್ನ್ ವೇರ್‌ಗೂ ಒಪ್ಪುತ್ತದೆ. ಈಗಂತೂ ಮದುವೆ, ಬರ್ತ್‌ಡೇ ಹೀಗೆ ಎಲ್ಲಾ ಫಂಕ್ಷನ್‌ಗಳಿಗೂ ಹುಡ್ಗೀರು ಚೋಕರ್ ಧರಿಸಲು ಇಷ್ಟಪಡುತ್ತಾರೆ. ಇದ್ರಲ್ಲೂ ಗ್ರ್ಯಾಂಡ್ ಆಗಿರುವ ಚೋಕರ್‌ಗಳಿವೆ. ಸಿಂಪಲ್ ಆ್ಯಂಡ್ ಸ್ಟನ್ನಿಂಗ್ ಆಗಿರುವ ಡಿಸೈನ್‌ಗಳ ಚೋಕರ್‌ಗಳೂ ಮಾರ್ಕೆಟ್‌ನಲ್ಲಿ ಲಭ್ಯವಿದೆ.
ಚೋಕರ್‌ನ ನೆಕ್ಲೆಸ್‌ನ ವಿಧಗಳು:
1. ಮುತ್ತಿನ ಚೋಕರ್
ಮುತ್ತುಗಳಿಂದ ನಿರ್ಮಿತ ಚೋಕರ್ ಅಂದರೆ ಪರ್ಲ್ ಚೋಕರ್ ಅಂತಾನೂ ಇದನ್ನೂ ಕರೀತಾರೆ. ಇದು ಎಲ್ಲ ಕಾಲಕ್ಕೂ ಮ್ಯಾಚ್ ಆಗುತ್ತದೆ. ಸೀರೆಗಳಿಗೆ ಅಥವಾ ಕುರ್ತಾಗಳಿಗೆ, ಅನಾರ್ಕಲಿಗಳಿಗೆ ಅಂತ ಸೂಪರ್ ಆಗಿ ಕಾಣಿಸುತ್ತದೆ. ಪರ್ಲ್ ಚೋಕರ್ ನಾರಿಯರ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಅಲ್ಲದೇ ಇದು ವಿಭಿನ್ನವಾಗಿ ಟ್ರೆಂಡ್‌ಗೆ ಹೊಂದಿಕೊಳ್ಳುವಂತೆ ಕಾಣುತ್ತದೆ.
2. ಲೇಸ್ ಚೋಕರ್
ಫ್ಯಾಬ್ರಿಕ್ ಲೇಸ್‌ನಿಂದ ತಯಾರಾದ ಈ ಶೈಲಿ ಯುವತಿಯರು ತುಂಬಾ ಇಷ್ಟ ಪಡುತ್ತಾರೆ. ಇದು ಸಿಂಪಲ್ ಸೀರೆಗಳ ಲುಕ್ ಅನ್ನು ಗ್ರ್ಯಾಂಡ್ ಆಗಿ ಕಾಣುವಂತೆ ಮಾಡುತ್ತದೆ. ಇದನ್ನೂ ಬೇರೆ ಮಾರ್ಡನ್ ಡ್ರೆಸ್‌ಗಳಿಗೂ ಮ್ಯಾಚ್ ಮಾಡಬಹುದು. ಎಲ್ಲಾ ಡ್ರೆಸ್‌ಗಳಿಗೂ ಈ ಲೇಸ್ ಚೋಕರ್ ಸೆಟ್ ಆಗುತ್ತದೆ. ಲೆಹಂಗಾಗಳಿಗೆ, ಸಿಂಪಲ್ ಕುರ್ತಾಗಳಿಗೆ ಅಥವಾ ಫಂಕ್ಷನ್ ವೇರ್‌ಗಳಿಗೆ ಇದು ಒಪ್ಪುತ್ತದೆ.
3. ಗೋಲ್ಡ್ ಚೋಕರ್
ಭಾರತೀಯ ಸಂಸ್ಕೃತಿಯಲ್ಲಿ ಚಿನ್ನದ ಚೋಕರ್‌ಗೆ ವಿಶೇಷ ಸ್ಥಾನವಿದೆ. ಇದನ್ನೂ ಎಲ್ಲಾ ವರ್ಗದ ಹೆಣ್ಣುಮಕ್ಕಳು ಬಳಸುತ್ತಾರೆ. ಮದುವೆ ಅಥವಾ ವಿಶೇಷ ಸಮಾರಂಭಗಳಲ್ಲಿ ಚಿನ್ನದ ಚೋಕರ್ ತೊಡುವುದು ಶ್ರೇಷ್ಠ ಸಾಂಪ್ರದಾಯಿಕ ಶೈಲಿಯ ಸಂಕೇತವಾಗಿದೆ. ಈ ಚಿನ್ನ ಚೋಕರ್‌ಗಳಲ್ಲೂ ತುಂಬಾ ವೆರೈಟಿಗಳು ಸಿಗುತ್ತದೆ. ಬೇರೆ ಬೇರೆ ಡಿಸೈನ್‌ಗಳೂ ಇರುತ್ತದೆ.
4. ಕ್ರಿಸ್ಟಲ್ ಅಥವಾ ಸ್ಟೋನ್ ಚೋಕರ್
ಈ ರೀತಿಯ ಚೋಕರ್‌ಗಳನ್ನು ಬೇರೆ ಬೇರೆ ಹರಳು ಅಥವಾ ಕಲ್ಲುಗಳಿಂದ ಮಾಡಲಾಗುತ್ತದೆ. ಇವು ತುಂಬಾ ಹೊಳೆಯುತ್ತವೆ. ಈ ಕ್ರಿಸ್ಟಲ್ ಚೋಕರ್ ಫ್ಯಾಶನ್ ಮಾಡೆಲ್‌ಗಳಿಗೆ ಅಚ್ಚುಮೆಚ್ಚು. ಇದು ಸಮಾರಂಭಗಳಲ್ಲಿ ನೀವು ಹೆಚ್ಚು ಆಕರ್ಷಿತರಾಗಿ ಕಾಣುವಂತೆ ಮಾಡುತ್ತದೆ. ಈಗಂತೂ ಈ ಕ್ರಿಸ್ಟಲ್ ಚೋಕರ್ ಫುಲ್ ಟ್ರೆಂಡ್‌ನಲ್ಲಿದೆ. ಡಿಸ್ಕೋ, ಪಾರ್ಟಿ ಈವೆಂಟ್‌ಗಳಿಗೆ ಇದನ್ನು ಧರಿಸಬಹುದು.
5. ವೆಲ್ವೆಟ್ ಚೋಕರ್
ವೆಲ್ವೆಟ್ ಚೋಕರ್ ಅಂದರೆ ಇದನ್ನು ವೆಲ್ವೆಟ್ ಮೆಟೀರಿಯಲ್‌ನ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದು ಇದರ ಎದುರಿಗೆ ಪೆಂಡೆಂಟ್ ಹಾಗೂ ಪಕ್ಕದಲ್ಲಿ ಈ ವೆಲ್ವೆಟ್ ಬಟ್ಟೆಯನ್ನು ಜೋಡಿಸಿರಲಾಗುತ್ತದೆ. ಈ ವೆಲ್ವೆಟ್ ಚೋಕರ್ ಕೂಡ ಎಲ್ಲಾ ರೀತಿಯ ಡ್ರೆಸ್‌ಗಳಿಗೆ ಸ್ಟನ್ನಿಂಗ್ ಲುಕ್ ನೀಡುತ್ತದೆ.
6. ಟಸೆಲ್ ಚೋಕರ್
ಈ ಟಸಲ್ ಚೋಕರ್ ಕುತ್ತಿಗೆಯಿಂದ ಸೊಗಸಾಗಿ ನೇತಾಡುವ ಟಸೆಲ್‌ಗಳು ಅಥವಾ ದಾರದ ಅಂಚನ್ನು ಒಳಗೊಂಡಿರುವ ಚೋಕರ್ ಬ್ಯಾಂಡ್ ಅನ್ನು ಒಳಗೊಂಡಿರುತ್ತವೆ. ಮ್ಯಾಕ್ಸಿ ಡ್ರೆಸ್‌ಗಳಿಗೆ, ಆಫ್-ಶೋಲ್ಡರ್ ಟಾಪ್‌ಗಳಿಗೆ ಈ ಟಸಲ್ ಚೋಕರ್ ಒಪ್ಪುತ್ತದೆ.
ಚೋಕರ್ ಧರಿಸುವಾಗ ಗಮನಿಸಬೇಕಾದ ಅಂಶ:
ಚೋಕರ್ ಧರಿಸುವುದಕ್ಕೂ ಕೆಲವೊಂದು ಟಿಪ್ಸ್‌ಗಳಿವೆ. ಈ ಮುಖ್ಯ ಅಂಶಗಳನ್ನು ಗಮನಿಸಿದರೆ ನಿಮ್ಮ ಲುಕ್ ಇನ್ನೂ ಸೂಪರ್ ಆಗಿ ಕಾಣಿಸುತ್ತದೆ.
* ಅಗಲ ಕುತ್ತಿಗೆಯವರಿಗಿಂತ ಸಣ್ಣ ಕುತ್ತಿಗೆಯವರಿಗೆ ಚೋಕರ್ ಹೆಚ್ಚು ಮ್ಯಾಚ್ ಆಗುತ್ತದೆ
* ಸಿಂಪಲ್ ಡ್ರೆಸ್‌ಗಳಿಗೆ ಗ್ರ‍್ಯಾಂಡ್ ಚೋಕರ್ ಹಾಗೂ ಗ್ರ‍್ಯಾಂಡ್ ಡ್ರೆಸ್‌ಗಳಿಗೆ ಸಿಂಪಲ್ ಚೋಕರ್ ಧರಿಸಬೇಕು.
* ದೊಡ್ಡ ಇಯರಿಂಗ್ಸ್ ಜೊತೆ ದೊಡ್ಡ ದೊಡ್ಡ ಸ್ಟೋನ್ ವರ್ಕ್‌ನ ಚೋಕರ್ ಧರಿಸಿದರೆ, ನಿಮ್ಮ ಲುಕ್ ಹೆಚ್ಚಿಸುತ್ತದೆ. ದೊಡ್ಡ ಚೋಕರ್‌ಗಳನ್ನ ಧರಿಸುವಾಗ ಸರಳವಾದ ಇಯರಿಂಗ್ಸ್‌ಗಳನ್ನು ಆಯ್ಕೆಮಾಡಿ.
ಈವೆಂಟ್‌ಗಳಿಗೆ ರೆಡಿಯಾಗುವಾಗ ಈ ಮೇಲೆ ತಿಳಿಸಿರುವ ಅಂಶಗಳನ್ನು ನೀವು ಗಮನಿಸಿದರೆ ಇದು ನಿಮ್ಮ ಲುಕ್ ಅನ್ನು ಡಿಫ್ರೆಂಟ್ ಹಾಗೂ ಮಾಡರ್ನ್, ಸ್ಟೈಲಿಶ್ ಆಗಿ ಕಾಣುವಂತೆ ಮಾಡಲು ಸಹಾಯಮಾಡುತ್ತದೆ.