ಸಾಮಾನ್ಯವಾಗಿ ಹುಡುಗರಿಗೆ ತಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇ ವೇಳೆ ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಆದರೆ ಪ್ರತಿಯೋರ್ವ ಮಹಿಳೆಯರಿಗೆ ಆಭರಣಕ್ಕಿಂತ ಪ್ರಿಯವಾದದ್ದು ಮತ್ತೊಂದಿಲ್ಲ. ಚಿಕ್ಕ ಆಭರಣಗಳು ಸಹ ಮಹಿಳೆಯರಿಗೆ ಸಖತ್ ಖುಷಿ ನೀಡುತ್ತದೆ. ನೀವು ನಿಮ್ಮ ಗರ್ಲ್‍ಫ್ರೆಂಡ್‍ಗೆ ವಿಶೇಷವಾದ ಉಡುಗೊರೆ ನೀಡಲು ಬಯಸುತ್ತಿದ್ದರೆ, ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸಿಗುವ ಪುಟ್ಟ-ಪುಟ್ಟ ಆಭರಣಗಳನ್ನು ಗಿಫ್ಟ್ ಆಗಿ ನೀಡಬಹುದು.
Advertisement
ಇಯರಿಂಗ್ಸ್ ಸೆಟ್
ಈ ಇಯರಿಂಗ್ ಸೆಟ್‍ನಲ್ಲಿ 6 ರೀತಿಯ ಸುಂದರವಾದ ಇಯರಿಂಗ್ಸ್‍ಗಳಿದ್ದು, ಇದನ್ನು ನಿಮ್ಮ ಗೆಳತಿ ದಿನನಿತ್ಯ ಬಳಸಬಹುದಾಗಿದೆ. ಅಲ್ಲದೇ ಡೈಮಂಡ್ ಸ್ಟಡ್‍ಗಳು ಮತ್ತು ಪರ್ಲ್ ಸ್ಟಡ್, ರೌಂಡ್ ಶೇಪ್ ಇಯರಿಂಗ್ ಸೇರಿದಂತೆ ಹಲವಾರು ಆಕಾರಗಳಲ್ಲಿ ಇಯರಿಂಗ್ಸ್‍ಗಳಿದ್ದು, ಇವುಗಳನ್ನು ನಿಮ್ಮ ಗೆಳತಿ ಆಫೀಸ್ ವೇರ್ ಮತ್ತು ಡೇಟ್ ನೈಟ್‍ಗೆ ತೆರಳುವ ವೇಳೆ ಕೂಡ ಧರಿಸಬಹುದಾಗಿದೆ.
Advertisement
Advertisement
ಟ್ರೆಡಿಷನಲ್ ಇಯರಿಂಗ್
ಮಹಿಳೆಯರ ಇಯರ್ ಕಲೆಕ್ಷನ್‍ನಲ್ಲಿ ಟ್ರೆಡಿಷನಲ್ ಇಯರ್ ಕೂಡ ಒಂದು. ಮದುವೆ ಸಮಾರಂಭಗಳಲ್ಲಂತೂ ಮಹಿಳೆಯರಿಗೆ ಟ್ರೆಡಿಷನಲ್ ಇಯರಿಂಗ್ಸ್ ಬಹಳ ಮುಖ್ಯ. ಸದ್ಯ ಕೆಳಗೆ ನೀಡಲಾಗಿರುವ ಈ ಚಿನ್ನದ ಇಯರಿಂಗ್ ಸೀರೆ ಹಾಗೂ ಲೆಹೆಂಗಾದ ಜೊತೆ ಧರಿಸುವುದರಿಂದ ಇದು ನಿಮ್ಮ ಗೆಳತಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Advertisement
ಜ್ಯುವೆಲರಿ ಕೊಂಬೋ
ಈ ಜ್ಯುವೆಲರಿ ಕೊಂಬೋದಲ್ಲಿ ಇಯರಿಂಗ್, ಮ್ಯಾಚಿಂಗ್ ನೆಕ್ಲೇಸ್ ಮತ್ತು ಬ್ರೇಸ್ಲೆಟ್‍ಗಳನ್ನು ನೀಡಲಾಗಿರುತ್ತದೆ. ಈ ಸೆಟ್ ಶೈನಿಂಗ್ ನೀಡುವುದರ ಜೊತೆಗೆ ನಿಮ್ಮ ಗೆಳತಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಇದನ್ನು ಕೋಬಾಲ್ಟ್ ನೀಲಿ ಕಲ್ಲು ಮತ್ತು ಸಣ್ಣ ವಜ್ರಗಳಿಂದ ತಯಾರಿಸಲಾಗಿದೆ. ಈ ಜ್ಯುವೆಲರಿ ಸೆಟ್ ಟ್ರೆಡಿಷನ್ ಮತ್ತು ವೆಸ್ಟ್ರನ್ ಡ್ರೆಸ್ ಎರಡಕ್ಕೂ ಸೂಟ್ ಆಗುತ್ತದೆ.
ಸಾಲಿಟೇರ್ ರಿಂಗ್
ಏಕ ವಜ್ರದ ಉಂಗುರವನ್ನು ಸಾಲಿಟೇರ್ ರಿಂಗ್ ಎಂದು ಕರೆಯಲಾಗುತ್ತದೆ. ಇದು ನಿಶ್ಚಿತಾರ್ಥದ ರಿಂಗ್ ಎಂದೇ ಫೇಮಸ್ ಆಗಿದೆ. ಇದರಲ್ಲಿ ಸಾಕಷ್ಟು ಬೆಸ್ಟ್ ಡಿಸೈನ್‍ಗಳಿದೆ. ನಿಮ್ಮ ಗರ್ಲ್ ಫ್ರೆಂಡ್ ಅಥವಾ ಪತ್ನಿ ವಜ್ರದ ಉಂಗುರಗಳಲ್ಲಿ ಕ್ಲಾಸಿಕ್ ಅಥವಾ ದೊಡ್ಡ ಸಾಲಿಟೇರ್ ಡೈಮಂಡ್ ರಿಂಗ್‍ಗಳನ್ನು ಇಷ್ಟಪಟ್ಟರೆ ಈ ಉಂಗುರಗಳನ್ನು ಗಿಫ್ಟ್ ಆಗಿ ನೀಡಬಹುದಾಗಿದೆ.