Fashion | ವೆರೈಟಿಯಾಗಿ ವೇರ್ ಮಾಡಿ ಬ್ಯಾಗಿ ಜೀನ್ಸ್

Public TV
3 Min Read
Baggy Jeans

ರ್ಷ ಬದಲಾಗುತ್ತಾ ಹೋದಂತೆ ಬಟ್ಟೆಗಳ ಟ್ರೆಂಡ್ ಕೂಡಾ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಜನರು ತಮ್ಮ ಉಡುಪಿನ ಅಭಿರುಚಿಯನ್ನೂ ಬದಲಾಯಿಸುತ್ತಾ ಹೋಗುತ್ತಾರೆ. ಹುಡ್ಗೀರಂತೂ ಸ್ಟೈಲಿಶ್‌ ಆಗಿ ಕಾಣಬೇಕು ಅಂತಾ ಡಿಫರೆಂಟ್ ಸ್ಟೈಲ್‌ನ ಡ್ರೆಸ್‌ಗಳನ್ನು ವೇರ್ ಮಾಡುತ್ತಾರೆ. ಇವಾಗಿನ ಹುಡ್ಗೀರು ಜೀನ್ಸ್ ಪ್ಯಾಂಟ್ ಬಿಟ್ಟು ಬೇರೆ ಡ್ರೆಸ್ ಧರಿಸಲು ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಜೀನ್ಸ್‌ನಲ್ಲೇ ಬೇರೆ ಬೇರೆ ತರಹದ ಪ್ಯಾಂಟ್‌ಗಳು ಈಗ ಟ್ರೆಂಡ್‌ನಲ್ಲಿದೆ. ಈಗಂತೂ ವಿಮೆನ್ಸ್ ಫೆವರೆಟ್ ಎಂದ್ರೆ ಅದು ಬ್ಯಾಗಿ ಜೀನ್ಸ್.

Baggy Jeans 1 1

ಹೌದು.. ಈ ಬ್ಯಾಗಿ ಜೀನ್ಸ್‌ನ(Baggy Jeans) ಧರಿಸಲು ಹೆಣ್ಣುಮಕ್ಕಳು ತುಂಬಾ ಇಷ್ಟಪಡ್ತಾರೆ. ಯಾಕಂದ್ರೆ ಇದು ತುಂಬಾ ಕಂಫರ್‌ಟೇಬಲ್ ಹಾಗೂ ಇದನ್ನು ನಮಗೆ ಬೇಕಾದ ರೀತಿಯಲ್ಲಿ ಸ್ಟೈಲ್‌ ಮಾಡಬಹುದು. ಈ ಬ್ಯಾಗಿ ಜೀನ್ಸ್ ಅನ್ನು ನಾವು ಸಾಂಪ್ರದಾಯಿಕ ಉಡುಗೆಯ ರೀತಿಯಲ್ಲೂ ಧರಿಸಬಹುದು. ಮಾಡರ್ನ್ ವೇರ್ ರೀತಿಯಲ್ಲೂ ಧರಿಸಬಹುದು. ಇದೊಂದು ರೀತಿ ಟೂ ಇನ್ ಒನ್ ಡ್ರೆಸ್ ಇದ್ದಂತೆ.

ಈಗಂತೂ ಸ್ಕಿನ್ ಫಿಟ್ ಜೀನ್ಸ್ ಧರಿಸುವ ಫ್ಯಾಷನ್ ಎಲ್ಲನೂ ಮರೆಯಾಯ್ತು. ಇನ್ನೇನಿದ್ರೂ ಬ್ಯಾಗಿ ಜೀನ್ಸ್ನದ್ದೇ ಹವಾ. ಈ ಬ್ಯಾಗಿ ಪ್ಯಾಂಟ್ ಹುಡ್ಗೀರು ಮಾತ್ರ ಅಲ್ಲ. ಹುಡುಗರೂ ವೇರ್ ಮಾಡ್ತಾರೆ. ಬಾಯ್ಸ್ ಸೆಕ್ಷನ್‌ನಲ್ಲೂ ಈ ಬ್ಯಾಗಿ ಪ್ಯಾಂಟ್‌ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಬ್ಯಾಗಿನ ನೀವು ಕುರ್ತಾಗಳಿಗೆ, ಜೀನ್ಸ್ ಟಾಪ್, ಟ್ಯಾನ್ ಟಾಪ್, ಶರ್ಟ್ಸ್, ಟೀ-ಶರ್ಟ್‌ಗಳಿಗೂ ಧರಿಸಬಹುದು. ಇದು ಎಲ್ಲಾ ತರಹದ ಟಾಪ್‌ಗಳಿಗೆ ಒಪ್ಪುವ ಜೀನ್ಸ್ ಆಗಿದೆ.

ಕುರ್ತಾಗಳಿಗೆ ವಿಥ್ ಬ್ಯಾಗಿ
ಕುರ್ತಾ(Kurtha) ಟಾಪ್‌ಗಳಿಗೂ ಈ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು. ಇದು ಸಾಂಪ್ರಾದಾಯಿಕ ಉಡುಪಿನ ವಿನ್ಯಾಸವನ್ನೂ ಹೋಲುತ್ತದೆ. ಅಲ್ಲದೇ ಇದು ಈಗಿನ ಟ್ರೆಂಡ್ ಸಖತ್ ಮ್ಯಾಚ್ ಕೂಡಾ ಆಗುತ್ತದೆ. ಬ್ಯಾಗಿ ಜೀನ್ಸ್ ಅಗಲವಾಗುರುವುದರಿಂದ ಇವುಗಳನ್ನು ಕುರ್ತಾಗಳಿಗೆ ಮ್ಯಾಚ್ ಮಾಡಬಹುದು. ಇನ್ನು ಕುರ್ತಾಗಳಲ್ಲೂ ಮಾಡರ್ನ್ ಟಾಪ್ ಹಾಗೂ ಟ್ರೆಡಿಷನಲ್ ಎರಡಕ್ಕೂ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು.

Baggy with Kurthi

ಇನ್ನೂ ಈ ಕುರ್ತಾಗಳಲ್ಲೂ ನಾವು ಬ್ಯಾಗಿಯನ್ನು ಸ್ಟೈಲ್‌ ಮಾಡಬಹುದು. ಹೌದು.. ಕುರ್ತಾಗಳಲ್ಲೂ ಶಾರ್ಟ್ ಕುರ್ತಾಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಈ ಶಾರ್ಟ್ ಕುರ್ತಾಗಳಿಗೆ ಬ್ಯಾಗಿ ಜೀನ್ಸ್, ವೈಡ್ ಲೆಗ್ ಜೀನ್ಸ್, ಬೂಟ್ ಕಟ್ ಜೀನ್ಸ್ ಸುಂದರವಾಗಿ ಕಾಣುತ್ತದೆ. ಲಾಂಗ್ ಟಾಪ್ ಕುರ್ತಾಗಳಿಗೂ ಬ್ಯಾಗಿ ಜೀನ್ಸ್‌ಗಳು ಮ್ಯಾಚ್ ಆಗುತ್ತದೆ. ಇದು ಬ್ಯಾಗಿ ಜೀನ್ಸ್ಗಳಿಗೆ ಟ್ರೆಡಿಷನಲ್ ಟಚ್ ಅನ್ನು ನೀಡುತ್ತದೆ.

Kurthi With Baggy

ಕ್ರಾಪ್ ಟಾಪ್ ಜೊತೆ ಬ್ಯಾಗಿ
ಈ ಬ್ಯಾಗಿ ಜೀನ್ಸ್ ಅನ್ನು ಕ್ರಾಪ್ ಟಾಪ್‌ನೊಂದಿಗೆ ಧರಿಸಿದರೆ ಮಾಡರ್ನ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ. ಶಾಪಿಂಗ್, ಪಾರ್ಟಿ, ಲಂಚ್ ಹಾಗೂ ಟ್ರಾವೆಲ್ ಮಾಡುವಾಗ ಕ್ರಾಪ್ ಟಾಪ್ ಜೊತೆ ಬ್ಯಾಗಿ ಪ್ಯಾಂಟ್ ಧರಿಸಿದರೆ ಇದು ನಿಮಗೆ ಕಂಫರ್ಟ್ ಫೀಲ್ ನೀಡುತ್ತದೆ. ಈ ರೀತಿ ಧರಿಸುವುದರಿಂದ ನೀವು ಸ್ಟೈಲಿಶ್‌ ಆಗಿಯೂ ಕಾಣಬಹುದು. ಇದು ನಿಮಗೆ ಸಿಂಪಲ್ ಹಾಗೂ ಗುಡ್ ಲುಕ್ ನೀಡುತ್ತದೆ. ಈ ಬ್ಯಾಗಿ ಜೀನ್ಸ್ ಧರಿಸುವುದರಿಂದ ತೆಳ್ಳಗಿರುವವರು ಸ್ವಲ್ಪ ದಪ್ಪ ಕಾಣುತ್ತಾರೆ. ಅಲ್ಲದೇ ದಪ್ಪಗಿರುವವರು ಸಾಧಾರಣವಾಗಿ ಅಂದರೆ ಹೆಚ್ಚೇನೂ ದಪ್ಪ ಕಾಣುವುದಿಲ್ಲ.

Baggy

ಶಟ್ ಹಾಗೂ ಟೀ-ಶರ್ಟ್‌ಗಳಿಗೆ ಮ್ಯಾಚ್ ಮಾಡುವ ಬ್ಯಾಗಿ
ಇನ್ನು ಬ್ಯಾಗಿ ಪ್ಯಾಂಟ್‌ಗೆ ಶರ್ಟ್ ಧರಿಸುವುದರಿಂದ ಇದು ನಿಮಗೆ ಪ್ರೊಫೆಶನಲ್ ಲುಕ್ ನೀಡುತ್ತದೆ. ಇದನ್ನೂ ಆಫೀಸ್ ವೇರ್ ಆಗಿಯೂ ಬಳಸಬಹುದು. ಇದು ನಿಮಗೆ ಸ್ಟ್ಯಾಂಡರ್ಡ್‌ ಲುಕ್ ಸಹ ನೀಡುತ್ತದೆ. ಇನ್ನೂ ಶರ್ಟ್ ಜೊತೆ ಟ್ಯಾನ್ ಟಾಪ್ ಧರಿಸಿದರೆ ಇದು ಕ್ಯಾಶ್ಯುವಲ್ ಲುಕ್ ನೀಡುತ್ತದೆ. ಈ ರೀತಿ ಸ್ಟೈಲ್‌ನಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ.

Baggy Jeans 2

ಟೀ-ಶರ್ಟ್ ಜೊತೆ ಬ್ಯಾಗಿಯನ್ನು ಮ್ಯಾಚ್ ಮಾಡುವುದರಿಂದ ಇದು ಸಿಂಪಲ್ ಹಾಗೂ ಈಸಿ ವೇರ್ ಆಗಿ ಕಾಣಿಸುತ್ತದೆ. ಇದನ್ನೂ ಆಫೀಸ್, ಶಾಪಿಂಗ್, ಔಟಿಂಗ್ ಹೋಗುವಾಗಲೂ ಧರಿಸಬಹುದು. ಹೆಚ್ಚಿನ ಹುಡುಗಿಯರು ಈ ಸ್ಟೈಲ್‌ನ್ನು ಅನುಸರಿಸುತ್ತಾರೆ.

Baggy 1

ಬ್ಯಾಗಿ ಧರಿಸುವಾಗ ಅನುಸರಿಸಬೇಕಾದ ಅಂಶಗಳು
* ಬ್ಯಾಗಿ ಜೀನ್ಸ್ ಧರಿಸುವಾಗ ಶೂ ಅಥವಾ ಹೈ ಹೀಲ್ಸ್ ಅನ್ನು ವೇರ್ ಮಾಡಿ.
* ಬ್ಯಾಗಿಗೆ ಲಾಂಗ್ ಟೀ-ಶರ್ಟ್ ಧರಿಸಿದರೆ ಇನ್ ಶರ್ಟ್ ಮಾಡಿ.
* ಬ್ಯಾಗಿ ಪ್ಯಾಂಟ್ ಖರೀದಿಸುವಾಗ ವೈಡ್ ಲೆಗ್ ಪ್ಯಾಂಟ್ ತೆಗೆದುಕೊಳ್ಳಿ, ಇದು ಎಲ್ಲಾ ರೀತಿಯ ಟಾಪ್‌ಗಳಿಗೂ ಒಪ್ಪುತ್ತದೆ.
* ಇನ್ನು ಬ್ಯಾಗಿ ಪ್ಯಾಂಟ್‌ಗೆ ಮ್ಯಾಚ್ ಆಗುವ ಹ್ಯಾಂಡ್ ಬ್ಯಾಗ್ ಅಂದರೆ ಸಿಂಪಲ್ ಆಗಿರುವ ಸೈಟ್ ಬ್ಯಾಗ್‌ಗಳನ್ನು ಧರಿಸಿ.
* ವೈಡ್ ಲೆಗ್ ಜೀನ್ಸ್‌ಗಳಿಗೆ ಲಾಂಗ್ ಕುರ್ತಾಗಳನ್ನು ಪ್ರಿಫರ್ ಮಾಡಿ.
* ಬ್ಯಾಗಿಗೆ ಕ್ರಾಪ್ ಟಾಪ್ ಮ್ಯಾಚ್ ಮಾಡುವಾಗ ಹೆವಿ ಮೇಕಪ್ ಧರಿಸಬೇಡಿ. ಅಲ್ಲದೇ ನ್ಯೂಡ್ ಲಿಪ್‌ಸ್ಟಿಕ್‌ಗಳನ್ನು ಹಾಕಿ.

ಬ್ಯಾಗಿ ಜೀನ್ಸ್ ಇತ್ತೀಚೆಗೆ ಟ್ರೆಂಡ್‌ನಲ್ಲಿರುವ ಹಾಗೂ ಹುಡುಗಿಯರು ಹೆಚ್ಚು ಇಷ್ಟಪಡುವ ಪ್ಯಾಂಟ್ ಆಗಿದೆ. ಈ ಪ್ಯಾಂಟ್ ಅನ್ನು ಟ್ರೆಡಿಷನ್ ಹಾಗೂ ಮಾಡರ್ನ್ ವೇರ್ ಆಗಿಯೂ ಧರಿಸಬಹುದು. ಈಗಿನ ಜೀನ್ಸ್ ಯುಗದಲ್ಲಿ ದಿನ ಕಳೆದಂತೆ ಬಟ್ಟೆಗಳ ಟ್ರೆಂಡ್ ಸಹ ಬದಲಾಗುತ್ತಿರುತ್ತದೆ.

Share This Article