ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

Public TV
2 Min Read
hair style

ಕೂದಲಿನ ವಿಷಯಕ್ಕೆ ಬಂದಾಗ ನೀವು ಕ್ಯೂಟ್ ಅಥವಾ ಆಕರ್ಷಕವಾಗಿ ಕಾಣಿಸಲು ಹೆಚ್ಚಿನ ಆ್ಯಕ್ಸಸರಿ ಆಯ್ಕೆಯನ್ನು ಹೊಂದಿರಬೇಕಾಗುತ್ತದೆ. ಪ್ರತಿ ಹುಡುಗಿಯರೂ ಹೊಂದಬೇಕಾದ ಕೆಲವು ಮುದ್ದಾದ ಕೂದಲಿನ ಆ್ಯಕ್ಸಸರೀಸ್ ಪಟ್ಟಿ ಇಲ್ಲಿವೆ.

ಕೂದಲಿನ ಆ್ಯಕ್ಸಸರೀಸ್ ಯಾವಾಗಲಾದರೋ ಬಳಸಿದರೇನೇ ಚಂದ. ನಿಮ್ಮ ದಿನನಿತ್ಯದ ನೋಟಕ್ಕಿಂತಲೂ ಯಾವಾಗಲಾದರೂ ಒಮ್ಮೆ ಬಳಸಿದಾಗ ನಿಮ್ಮ ಸಂಪೂರ್ಣ ಲುಕ್ ಬದಲಾದಂತೆ ಹಾಗೂ ಮುದ್ದಾಗಿ ಕಾಣಿಸುವಂತೆ ಮಾಡುತ್ತದೆ. ನಿಮ್ಮ ಡೈಲಿ ಲುಕ್‌ಗಿಂತಲೂ ಭಿನ್ನವಾಗಿ ಕಾಣಿಸಲು ಕೂದಲಿನ ಪರಿಕರಗಳು ಉಪಯುಕ್ತ. ಕೂದಲಿನ ಆ್ಯಕ್ಸಸರೀಸ್ ಯಾವುದೇ ಸಮಯದಲ್ಲೂ ನಿಮ್ಮ ನೋಟವನ್ನು ಕಂಡಿತಾ ಹೆಚ್ಚಿಸುತ್ತದೆ. ನೀವು ಭಿನ್ನವಾಗಿ ಕಾಣಿಸಬೇಕೆಂದರೆ ಹೊಂದಿರಲೇ ಬೇಕಾದ ಕೆಲವು ಕ್ಯೂಟ್ ಕ್ಯೂಟ್ ಆ್ಯಕ್ಸಸರಿಗಳನ್ನು ನೋಡೋಣ.

Floral Tiara

ಬಕೆಟ್ ಹ್ಯಾಟ್:
ಮೀನುಗಾರರು ಬಳಸುವ ಟೋಪಿಯಂತೆ ಕಾಣಿಸುತ್ತಾದರೂ ಟ್ರೆಂಡಿಯಾಗಿರುವ, ಹಲವು ವಿನ್ಯಾಸಗಳಲ್ಲಿ ಬರುವ ಬಕೆಟ್ ಹ್ಯಾಟ್ ನಿಮ್ಮ ದೈನಂದಿನ ಲುಕ್‌ಗಿಂತಲೂ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ. ಇವು 90ರ ದಶಕದ ಫ್ಯಾಶನ್ ಆಗಿದ್ದರೂ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಆಕರ್ಷಕ ನೋಟವನ್ನು ಪಡೆಯಲು ಸಾಧ್ಯವಿದೆ. ಟೋಪಿ ಮೊದಲ ಬಾರಿ ಬಳಸುವಾಗ ಚೆನ್ನಾಗಿ ಕಾಣಿಸಲ್ಲ ಎನಿಸಿದರೂ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

Bucket Hat

ಹೆಡ್‌ಬ್ಯಾಂಡ್:
ಹೆಡ್‌ಬ್ಯಾಂಡ್‌ಗಳು ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಹೆಚ್ಚಾಗಿ ಹೆಡ್ ಬ್ಯಾಂಡ್‌ಗಳನ್ನು ತಲೆಯ ಕೂದಲು ಮುಖಕ್ಕೆ ಬರಬಾರದು ಎಂಬ ಕಾರಣಕ್ಕೆ ಬಳಸುತ್ತಾರೆ. ಇದೀಗ ಮಾರುಕಟ್ಟೆಗಳಲ್ಲಿ ವಿಭಿನ್ನ ಶೈಲಿಯ ಹೆಡ್ ಬ್ಯಾಂಡ್‌ಗಳು ಲಭ್ಯವಿದೆ. ಕೇವಲ ಕೂದಲು ಮುಖಕ್ಕೆ ಬೀಳಬಾರದು ಎಂದು ಬಳಸುವುದಕ್ಕಿಂತಲೂ ಟ್ರೆಂಡಿ ಎಂಬ ಕಾರಣಕ್ಕೂ ಬಳಸಬಹುದು. ಇವು ನಿಮ್ಮನ್ನು ಮಕ್ಕಳಂತೆ ಮುದ್ದಾಗಿ ಕಾಣಿಸುವಂತೆ ಮಾಡಲು ಸಹಾಯ ಮಾಡುತ್ತದೆ.

Headband

ಸ್ಕಾರ್ಫ್:
ಅತ್ಯಂತ ಬ್ಯುಸಿ ಲೈಫ್ ಅಥವಾ ಜನನಿಬಿಡ ಪ್ರದೇಶಗಳಲ್ಲಿ ದಿನ ಕಳೆಯುತ್ತಿದ್ದಿರಿ ಎಂದಾದರೆ ಪೋನಿ ಟೇಲ್ ಹೇರ್ ಸ್ಟೈಲ್ ಯಾವಾಗಲೂ ಆಯ್ಕೆ ಮಾಡಬಹುದಾದ ಸುಲಭದ ಕೇಶ ವಿನ್ಯಾಸ. ಆದರೆ ಪ್ರತೀ ದಿನ ಪೋನಿ ಟೇಲ್ ಹಾಕಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆ ಸ್ವಲ್ಪ ಸೊಬಗು ನೀಡಲು ಸ್ಕಾರ್ಫ್ ಕಟ್ಟಿಕೊಳ್ಳಬಹುದು. ಪೋನಿ ಟೇಲ್ ಸುಲಭ ಹಾಗೂ ತಕ್ಷಣವೇ ಕಟ್ಟಿಕೊಳ್ಳಬಹುದು ಹಾಗೂ ಅದು ನಿಮ್ಮನ್ನು ಎಂತಹ ಸ್ಥಳಗಳಲ್ಲೂ ಕಂಫರ್ಟೇಬಲ್ ಆಗಿ ಇರಿಸುತ್ತದೆ. ಅದರ ಮೇಲೆಯೇ ಒಂದು ಸಣ್ಣ ಸ್ಕಾರ್ಫ್ ಮೂಲಕ ಗಂಟು ಹಾಕಿದರೆ, ದಿನನಿತ್ಯದ ಲುಕ್‌ಗಿಂತಲೂ ಭಿನ್ನವಾಗಿ ತೊರುತ್ತೀರಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
hair Scarf 1

ಹೇರ್ ಪಿನ್:
ನೀವು 90ರ ದಶಕದ ಫ್ಯಾಶನ್ ಅನ್ನು ಮತ್ತೆ ಟ್ರೈ ಮಾಡಲು ಬಯಸಿದರೆ ಹೇರ್ ಪಿನ್‌ಗಳು ಹೆಚ್ಚು ಸಹಾಯಕವಾಗಿವೆ. ನಿಮ್ಮ ಮುದ್ದಾದ ಡ್ರೆಸ್‌ಗಳಿಗೆ ಮ್ಯಾಚ್ ಮಾಡಿಕೊಂಡು, ಭಿನ್ನ ವಿಭಿನ್ನ ಶೈಲಿಯ ಹೂವಿನ, ಚಿಟ್ಟೆಯ ಅಥವಾ ಇನ್ನಿತರ ಡಿಸೈನ್‌ನಲ್ಲಿ ಹೇರ್ ಪಿನ್‌ಗಳನ್ನು ಆಯ್ದುಕೊಳ್ಳಬಹುದು.

Hairpins

ಹೂವಿನ ಕಿರೀಟ:
ಪುಟ್ಟ ಪುಟ್ಟ ಗಾತ್ರದ, ಬಣ್ಣ ಬಣ್ಣದ ಹೂವುಗಳಿರುವ ಬಳ್ಳಿಯ ಕಿರೀಟ ಅಪರೂಪದ ನೋಟಕ್ಕೆ ಮೆರುಗು ನೀಡುತ್ತದೆ. ತಿಳಿ ಬಣ್ಣದ ಫ್ರಾಕ್ ಅಥವಾ ಯಾವುದೇ ಹಗುರ ಬಟ್ಟೆಗಳೊಂದಿಗೆ ವಿಶೇಷ ಪ್ರವಾಸದ ಸಂದರ್ಭ ಮ್ಯಾಚ್ ಮಾಡಿಕೊಂಡು ಹೋಗಬಹುದು.

Live Tv

Share This Article
Leave a Comment

Leave a Reply

Your email address will not be published. Required fields are marked *