ಪ್ರಸ್ತುತ ಎಲ್ಲ ವಯೋಮಾನದ ಯುವತಿಯರು (Girls) ಹಾಗೂ ಮಹಿಳೆಯರು ತಮ್ಮ ಸ್ಟೈಲಿಶ್ ಉಡುಗೆಗೆ ಸ್ಯೂಟ್ ಆಗುವಂತ ಸ್ಯಾಂಡಲ್ಗಳನ್ನೇ (ಚಪ್ಪಲಿ) (Ladies Sandal) ಧರಿಸಲು ಇಷ್ಟಪಡ್ತಾರೆ. ಕಂಪನಿಗಳು ಸಹ ಅವರ ಅಭಿರುಚಿಗೆ ತಕ್ಕಂತೆ ಬಗೆ-ಬಗೆ ವಿನ್ಯಾಸದ ಆಕರ್ಷಕ ಚಪ್ಪಲಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿವೆ.
ನೂತನ ವಿನ್ಯಾಸದ ಚಪ್ಪಲಿಗಳು (Sandals Footwear) ಸಂಗ್ರಹದ ಶ್ರೀಮಂತಿಕೆಯನ್ನೂ ಹೆಚ್ಚಿಸುವ ಜೊತೆಗೆ, ಕಂಫರ್ಟ್ ನಡಿಗೆಗೆ ಸಹಕರಿಸುತ್ತವೆ. ಕಾಲಿನ ಅಂದವನ್ನು ಡಬಲ್ ಮಾಡುವ ಸ್ಯಾಂಡಲ್ಗಳಲ್ಲೂ ಯಾವೆಲ್ಲಾ ಬಗೆಗಳಿವೆ ಎಂಬ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಕೆಂಪು ಬಣ್ಣದ ಕಂಪು:
ಕೆಂಪು ಬಣ್ಣದಲ್ಲಿ ಇರುವ ಚಪ್ಪಲಿ ಬಹಳ ಆಕರ್ಷಕ ವಿನ್ಯಾಸಗಳಿಂದ ಕೂಡಿದೆ. ವಧು ಹಾಗೂ ವಿಶೇಷ ಸಮಾರಂಭಗಳಲ್ಲಿ ಧರಿಸಲು ಇದು ಅತ್ಯುತ್ತಮ ಆಯ್ಕೆ. ಸೀರೆ, ಲೆಹೆಂಗಾದಂತಹ ಸಾಂಪ್ರದಾಯಿಕ ಉಡುಗೆ ಹಾಗೂ ಬಾಡಿಕಾರ್ನ್ ಡ್ರೆಸ್ಗಳೊಂದಿಗೆ ಧರಿಸೋದ್ರಿಂದ ಇನ್ನಷ್ಟು ಫ್ರೆಶ್ ಲುಕ್ ಸಿಗುತ್ತದೆ. ಇದನ್ನೂ ಓದಿ: ಯೂತ್ಸ್ಗೆ ಹೆಚ್ಚಾಯ್ತು ಕನ್ನಡಕದ ಮೇಲೆ ಕ್ರಶ್ – ಟ್ರೆಂಡಿ ಕನ್ನಡಕಗಳ ವಿನ್ಯಾಸ ನೋಡಿ…
ಗೋಲ್ಡ್ ಪೇಂಟೆಡ್ ಸ್ಯಾಂಡಲ್:
ಚಿನ್ನದ ಬಣ್ಣದಲ್ಲಿ ಲಭ್ಯವಿರುವ ಚಪ್ಪಲಿಗಳು ಮಹಿಳೆಯರ ಇತ್ತೀಚಿನ ಫ್ಯಾಷನ್ ಆಗಿದೆ. ಹೊಸ ವಿನ್ಯಾಸದಿಂದ ಕೂಡಿರುವ ಈ ಸ್ಯಾಂಡಲ್ ಸಾಂಪ್ರದಾಯಿಕ ಹಾಗೂ ಪಾರ್ಟಿವೇರ್ ಡ್ರೆಸ್ಗಳಿಗೆ ಧರಿಸಬಹುದು. ಇದನ್ನೂ ಓದಿ: ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್
ಶಾರ್ಟ್ ಹೀಲ್ಸ್:
ಇದೊಂದು ಹೊಸ ಶೈಲಿಯ ಮಹಿಳೆಯರ ಸ್ಯಾಂಡಲ್. ಗುಣಮಟ್ಟದ ಈ ಆಕರ್ಷಕ ಸ್ಯಾಂಡಲ್ ದೀರ್ಘಕಾಲ ಬಾಳಿಕೆ ಬರುವುದು. 3.5 ಇಂಚಷ್ಟು ಹಿಮ್ಮಡಿಯ ಎತ್ತರವನ್ನು ಪಡೆದುಕೊಂಡಿದೆ. ಫ್ರೆಂಡ್ಸ್ ಪಾರ್ಟಿ, ಮದುವೆ ಸಮಾರಂಭಗಳಿಗೂ ಧರಿಸಬಹುದು.
ಕಪ್ಪು ಹೀಲ್ಸ್:
ಬಹುಪಾಲು ಯುವತಿಯರು, ಮಧ್ಯವಯಸ್ಸಿನ ಮಹಿಳೆಯರು ಇಷ್ಟಪಡುವ ಈ ಕಪ್ಪು ಹೀಲ್ಸ್ ಸ್ಯಾಂಡಲ್ ಕೆಂಪುಬಣ್ಣದ ಲೆಗೆಂಹಾ, ಬಾಡಿಕಾರ್ನ್ ಡ್ರೆಸ್, ಸ್ಯಾರಿ, ಕುರ್ತಾ, ಸ್ಲೀವ್ಲೆಸ್ ಡ್ರೆಸ್ಗಳಿಗೆ ಸ್ಯೂಟ್ ಆಗುತ್ತದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k