ನಾರಿಮಣಿಯರ ಮನಗೆದ್ದ ಬ್ಯೂಟಿಫುಲ್ ಫ್ರಾಕ್‌ಗಳಿವು

Public TV
2 Min Read
frocks

ಗೆಬಗೆಯ ಡಿಸೈನ್‌ನ ಫ್ರಾಕ್‌ಗಳು (Frocks) ಫ್ಯಾಷನ್ (Fashion) ಲೋಕಕ್ಕೆ ಲಗ್ಗೆ ಇಟ್ಟಿವೆ. ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಆಕರ್ಷಿಸುತ್ತಿದೆ. ಧರಿಸಿದಾಗ ಮನೋಲ್ಲಾಸ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಜೆಮೆಟ್ರಿಕಲ್ ಪ್ರಿಂಟ್ಸ್‌ ವಿನ್ಯಾಸದ ಚೆಕ್ಸ್ ಬಾಕ್ಸ್ ಪ್ರಿಂಟ್ಸ್‌ನ ಲೈಟ್‌ವೈಟ್ ಫ್ರಾಕ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಸಿಂಪಲ್ ಆಗಿ ಕಾಣುವ ಈ ಪ್ರಿಂಟ್ಸ್ ಫ್ರಾಕ್‌ಗಳು, ಇಂದು ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿದ್ದು, ಕ್ಯಾಶುವಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಅಂದಹಾಗೆ, ಬಾಲಿವುಡ್ ನಟಿಯರಿಗೂ ಈ ಫ್ರಾಕ್‌ಗಳಂದ್ರೆ ಇಷ್ಟ.

frocks 1

ನೋಡಲು ಮಕ್ಕಳ ಫ್ರಾಕ್‌ನಂತೆ ಕಾಣುವ ಎ ಲೈನ್ ಡಿಸೈನ್‌ನ ಮೈಕ್ರೊ ಫ್ಲಿಟ್ಸ್ ಫ್ರಾಕ್‌ಗಳು ಇಂದು ನಾರಿಮಣಿಯರನ್ನು ಹೆಚ್ಚು ಆಕರ್ಷಿಸುತ್ತಿವೆ. ಅದರಲ್ಲೂ ಸಿಲ್ಕ್ ಮೆಟಿರೀಯಲ್‌ನವು ನೋಡಲು ಅತ್ಯಾಕರ್ಷವಾಗಿ ಕಾಣುತ್ತವೆ. ಒಂದರ ಹಿಂದೊಂದರಂತೆ ಇರುವ ನೆರಿಗೆಗಳು ಸೊಂಟದ ಸುತ್ತಾ ವಿನ್ಯಾಸಗೊಳಿಸಿದಂತೆ ಬಿಂಬಿಸುತ್ತವೆ. ಅಂದಹಾಗೆ, ಮೈಕ್ರೋಪ್ರೀಟ್ಸ್ ಇರುವ ಸಿಲ್ಕ್ ಫ್ರಾಕ್‌ಗಳು ಕೇವಲ ಸಾಫ್ಟ್ ಮೆಟೀರಿಯಲ್ ಅಥವಾ ಸಿಲ್ಕ್ ಮೆಟೀರಿಯಲ್‌ನಲ್ಲಿ ಮಾತ್ರ ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣುತ್ತವೆ. ಬ್ರೋಕೆಡ್ ಇಲ್ಲವೇ ಕಾಟನ್‌ನವು ಉತ್ತಮವಲ್ಲ. ಇದು ಬಾಡಿ ಮಾಸ್‌ಇಂಡೆಕ್ಸ್ ಹೆಚ್ಚಾಗಿ ಬಿಂಬಿಸುತ್ತವೆ. ಹಾಗಾಗಿ, ಆದಷ್ಟೂ ತಮ್ಮ ಬಾಡಿ ಸೂಟ್ ಆಗುವಂತಹ ಫ್ಯಾಬ್ರಿಕ್‌ನ ಫ್ರಾಕ್‌ಗಳನ್ನು ಸೆಲೆಕ್ಟ್ ಮಾಡುವುದು ಉತ್ತಮ.

frocks

ಸುತ್ತಿಕೊಂಡಂತೆ ಕಾಣುವ ಈ ಫ್ರಾಕ್ ಡಿಸೈನ್ ಇದೀಗ ಸಾಕಷ್ಟು ಪ್ರಚಲಿತದಲ್ಲಿದೆ. ನೋಡಲು ಯಂಗ್ ಲುಕ್ ನೀಡುವ ಈ ಫ್ರಾಕ್ ಡಿಸೈನ್ ಸಾಕಷ್ಟು ಟ್ರೆಂಡಿಯಾಗಿದೆ. ಟೈಯಿಂಗ್ ಅಪ್ಷನ್ ಇರುವುದು ನೋಡಲು ಬಿಂದಾಸ್ ಲುಕ್ ನೀಡುತ್ತದೆ ಎನ್ನಬಹುದು. ಮಾಡೆಲ್‌ಗಳು ಅತಿ ಹೆಚ್ಚಾಗಿ ಧರಿಸುವ ಫ್ರಾಕ್ ವಿನ್ಯಾಸವಿದು. ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸಮಂತಾ ಸಾಥ್

frocks 2

ನೋಡಲು ತಕ್ಷಣಕ್ಕೆ ಬ್ಲೌಸ್‌ನಂತೆ ಕಾಣುವ ಈ ಫ್ರಾಕ್, ಸೊಂಟದ ಕೆಳಗೆ ಸ್ಕರ್ಟ್‌ನಂತೆ ಕಾಣುತ್ತದೆ. ಆದರೆ, ಇದು ಸಿಂಗಲ್ ಪೀಸ್ ಡ್ರೆಸ್ ಫ್ರಾಕ್. ಈ ಫ್ರಾಕ್ ಇಂದು ಟೀನೇಜ್ ಹುಡುಗಿಯರ ಹಾಗೂ ವರ್ಕಿಂಗ್ ವುಮೆನ್ ಕೆಟಗರಿಯಲ್ಲಿ ಟಾಪ್ ಲಿಸ್ಟ್‌ನಲ್ಲಿದೆ. ಇದು ಟ್ರೆಂಡ್‌ನಲ್ಲಿರುವುದು ಮಾತ್ರವಲ್ಲ, ನಾನಾ ಡಿಸೈನ್‌ಗಳಲ್ಲಿ ಹಾಗೂ ವೈವಿಧ್ಯಮಯ ಸ್ಟಿಚ್ಚಿಂಗ್ ಸ್ಟೈಲ್‌ನಲ್ಲಿ ಪಾಪುಲರ್ ಆಗಿದೆ.

ನೋಡಲು ಫಿಟ್, ಸೊಂಟದ ಕೆಳಗೆ ಫ್ಲೇರ್ ಇರುವಂತಹ ಸ್ಕೇಟರ್ ಫ್ರಾಕ್‌ಗಳು ಕೂಡ ಇಂದು ಜನಪ್ರಿಯಗೊಂಡಿವೆ. ಗ್ರ‍್ಯಾಂಡ್ ಲುಕ್‌ನಲ್ಲಿ ಇವು ಲಭ್ಯವಿಲ್ಲ. ಏನಿದ್ದರೂ ಇವು ಕೇವಲ ಸಿಂಪಲ್ ಡಿಸೈನ್‌ನಲ್ಲಿ ದೊರೆಯುತ್ತವೆ. ಇವು ಟೀನೇಜ್ ಹುಡುಗಿಯರನ್ನು ಸೆಳೆದಿವೆ. ಸದ್ಯಕ್ಕೆ ಚೆಕ್ಸ್ ಹಾಗೂ ಬಾಕ್ಸ್ ಡಿಸೈನರ್‌ವೇರ್‌ಗಳು ಜನಪ್ರಿಯಗೊಂಡಿವೆ. ಲೇಸ್ ಹಾಗೂ ನೆಟ್ಟೆಡ್ ಮೆಟಿರಿಯಲ್ಸ್‌ನವು ಚಾಲ್ತಿಯಲ್ಲಿವೆ. ಸ್ಲಿಮ್ ಇರುವ ನಟಿಯರ ಫೇವರಿಟ್ ಡಿಸೈನ್ ಫ್ರಾಕ್ ಇದು.

ಫ್ರಾಕ್ ಪ್ರಿಯರಿಗೆ ಟಿಪ್ಸ್:

ಪ್ಲಂಪಿಯಾಗಿರುವವರಿಗೆ ಕ್ಯಾಸ್ಕೆಡ್ ಫ್ರಾಕ್ ಬೇಡ.
ಶೋಲ್ಡರ್‌ಗೆ ತಕ್ಕಂತೆ ನೆಕ್‌ಲೈನ್ ಡಿಸೈನ್ ಇರುವುದು ಅಗತ್ಯ.
ಹಾಲ್ಟರ್ ನೆಕ್ ಧರಿಸುವವರ ಶೋಲ್ಡರ್ ಆಕರ್ಷಕವಾಗಿರಬೇಕು.
ಟೈಯಿಂಗ್ ಇದ್ದಲ್ಲಿ ಬ್ಯಾಕ್‌ಸೈಡ್ ಇರಬೇಕು.

Share This Article