ಪ್ರತೀದಿನ ಮೇಕಪ್ ಧರಿಸುವುದು ಮಹಿಳೆಗೆ ಸುಲಭದ ಮಾತಲ್ಲ. ಬಿಝಿ ಜೀವನದಲ್ಲಿ ನಿಮ್ಮ ಮೇಕಪ್ ಸುಲಭವಾದಷ್ಟು ಒಳ್ಳೆಯದು. ಅಷ್ಟು ಮಾತ್ರವಲ್ಲದೇ ಆಕರ್ಷಕವಾಗಿರುವುದೂ ಮುಖ್ಯ.
ಹೆವಿ ಮೇಕ್‌ಅಪ್ ಧರಿಸುತ್ತಿದ್ದ ಕಾಲ ಕಳೆದುಹೋಗಿದೆ. ಈಗ ಏನಿದ್ದರೂ ಮೇಕ್‌ಅಪ್ ಮಾಡಿದ್ದರೂ ಮಾಡದಿದ್ದಂತೆ ಅಥವಾ ನೈಸರ್ಗಿಕವಾಗಿ ತೋರಬೇಕು ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಸ್ವಚ್ಛ ಹಾಗೂ ಹೊಳೆಯುವ ಮುಖಕ್ಕಾಗಿಯೇ ಇಂದು ಎಲ್ಲರೂ ಪ್ರತೀದಿನ ಮೇಕಪ್ ಮಾಡುತ್ತಾರೆ.
ಪ್ರತೀದಿನ ಸಿಂಪಲ್ ಆಗಿ ಮೇಕಪ್ ಮಾಡಲು ನಿಮ್ಮ ಮೇಕಪ್ ಬಾಕ್ಸ್ನಲ್ಲಿ ಇರಬೇಕಾದ ಕೆಲವು ವಸ್ತುಗಳ ಪಟ್ಟಿ ಹೀಗಿವೆ. ನೀವೊಬ್ಬ ವೃತ್ತಿಪರ ಮಹಿಳೆ ಅಥವಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಲ್ಲಿ ಈ ಪಟ್ಟಿ ಖಂಡಿತಾ ಉಪಯುಕ್ತ. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್
ಬಿಬಿ ಕ್ರೀಮ್ ಅಥವಾ ಲೈಟ್ ಫೌಂಡೇಷನ್:
ಬಿಬಿ ಕ್ರೀಮ್ ಅಥವಾ ಲೈಟ್ ಫೌಂಡೇಷನ್ ಅನ್ನು ಸೌಂದರ್ಯ ಮುಲಾಮು ಎನ್ನಲಾಗುತ್ತದೆ. ಇದು ನಿಮ್ಮ ತ್ವಚೆಯ ಅಡಿಪಾಯ ಬದಲಿಸಲು ಒಂದು ಅತ್ಯುತ್ತಮ ಉತ್ಪನ್ನ. ಇದನ್ನು ಒಮ್ಮೆ ಲೇಪಿಸಿದರೆ ಹೊಳೆಯುವ ಕವರೇಜ್ ನಿಮಗೆ ದೊರಕುತ್ತದೆ. ಪ್ರತಿನಿತ್ಯದ ಸಿಂಪಲ್ ಮೇಕಪ್‌ಗೆ ಫೌಂಡೇಷನ್‌ಗಿಂತಲೂ ಬಿಬಿ ಕ್ರೀಮ್ ಉತ್ತಮ. ಇದು ಮೇಕಪ್ ಧರಿಸಿದ ಭಾರವಾದ ಅನುಭವ ನೀಡದೇ ನ್ಯಾಚುರಲ್ ಲುಕ್ ನೀಡುತ್ತದೆ. ಜೊತೆಗೆ ಫೌಂಡೇಷನ್‌ಗಿಂತಲೂ ಬಿಬಿ ಕ್ರೀಮ್ ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ.
ಐಲೈನರ್:
ಯಾವುದೇ ರೀತಿಯ ಮೇಕಪ್‌ಗೆ ಪರಿಪೂರ್ಣಲುಕ್ ಬರುವುದು ಐಲೈನರ್‌ನಿಂದ. ಪರಿಪೂರ್ಣ ಐಲೈನರ್ ಕಣ್ಣುಗಳನ್ನು ವರ್ಧಿಸುತ್ತದೆ ಹಾಗೂ ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪೆನ್ಸಿಲ್ ಲೈನರ್‌ಗಳು, ಲಿಕ್ವಿಡ್, ವಾಟರ್ ಪ್ರೂಫ್, ಲೈನರ್ ಬ್ರಶ್ ಹೀಗೆ ಹಲವು ವಿಧಗಳಾಗಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಹೆಚ್ಚಿನವರು ಆಕರ್ಷಕವಾದ ಕ್ಯಾಟ್ ಐ ಅಥವಾ ಡ್ರಾಮಾ ವಿನ್ಯಾಸಕ್ಕೆ ಮಾರುಹೋಗಿರುವುದು ನಿಜ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್
ಹುಬ್ಬು ಕುಂಚ/ ಬ್ರೋವ್ ಬ್ರಶ್:
ಹೆಚ್ಚಿನವರು ಮೇಕಪ್‌ನಲ್ಲಿ ಹುಬ್ಬಿನ ಕಡೆ ಗಮನ ಹರಿಸುವುದಿಲ್ಲ. ಎವ್ರಿ ಡೇ ಮೇಕಪ್‌ನಲ್ಲೂ ಫಿನಿಶಿಂಗ್ ಟಚ್ ನೀಡಲು ಹುಬ್ಬನ್ನು ಅಂದಗೊಳಿಸುವುದು ಅಗತ್ಯ. ಹುಬ್ಬು ಆಕರ್ಷಕವಾಗಿ ಕಾಣಿಸಲು ಅದಕ್ಕೆ ಒಂದು ಪರ್ಫೆಕ್ಟ್ ಆಕಾರ ನೀಡಬೇಕು. ದಪ್ಪ ಹುಬ್ಬಿನವರು ಇಂತಿಷ್ಟು ದಿನಗಳಿಗೊಮ್ಮೆ ಪಾರ್ಲರ್‌ನಲ್ಲಿ ಶೇಪ್ ಕೊಡಿಸಿ. ಕಡಿಮೆ ಹುಬ್ಬು ಇರುವವರು ಅತೀ ತೆಳು ಪದರದಲ್ಲಿ ಕಾಡಿಗೆ ಅಥವಾ ಕಂದು ಕಾಡಿಗೆ ಹಚ್ಚಿ, ಬ್ರೋವ್ ಬ್ರಶ್ ಮೂಲಕ ಅದನ್ನು ಬ್ಲೆಂಡ್ ಮಾಡಿ.
ಮಸ್ಕರಾ:
ನಿಮ್ಮ ಕಣ್ಣುಗಳು ಎಲ್ಲರ ಗಮನ ಸೆಳೆಯುವಂತೆ ಮಾಡುವ ಶಕ್ತಿ ಮಸ್ಕರಾಗೆ ಇದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಉದ್ದವಾದ ಕಣ್‌ರೆಪ್ಪೆಯ ಕೂದಲು ಹೆಚ್ಚಿನವರಿಗೆ ಇರುವುದಿಲ್ಲ. ಅದು ಎಷ್ಟು ದಪ್ಪವಾಗಿ ಖಾಣಿಸಿದರೂ ಅಷ್ಟೇ ಆಕರ್ಷಕವಾಗಿ ಕಾಣಿಸುತ್ತದೆ. ಇದಕ್ಕೆ ಮಸ್ಕರಾ ಸಹಾಯ ಮಾಡುತ್ತದೆ. ಮಸ್ಕರಾ ಕಣ್‌ರೆಪ್ಪೆಯ ಕೂದಲು ಗಮನಸೆಳೆಯುವಂತೆ ಮಾಡುತ್ತದೆ ಹಾಗೂ ಕಣ್ಣುಗಳನ್ನು ದೊಡ್ಡದಾಗಿ, ಆಕರ್ಷಕವಾಗಿ ತೋರುವಂತೆ ಮಾಡುತ್ತದೆ. ಇದನ್ನೂ ಓದಿ: ಯುವತಿಯರಿಗಾಗಿ ಈ 5 ಬಗೆಯ ಸ್ಟೈಲಿಶ್ ಪಾದರಕ್ಷೆ
ಲಿಪ್‌ಸ್ಟಿಕ್ ಅಥವಾ ಲಿಪ್ ಟಿಂಟ್:
ತುಟಿಯ ಮೇಲೆ ಆಕರ್ಷಕ ಬಣ್ಣದ ಇದ್ದರೆ ಅದು ಯಾವುದೇ ಜನಸಮೂಹದಲ್ಲೂ ಎದ್ದು ತೋರುವಂತೆ ಮಾಡುತ್ತದೆ. ಲಿಪ್‌ಸ್ಟಿಕ್ ಅಥವಾ ಲಿಪ್ ಟಿಂಟ್‌ಗಳು ನಿಮ್ಮ ಮೇಕಪ್ ಲುಕ್‌ಗೆ ನೈಸರ್ಗಿಕ ಹೊಳಪು ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಒಂದು ಲಿಪ್‌ಸ್ಟಿಕ್ ಅಥವಾ ಲಿಪ್ ಟಿಂಟ್ ನಿಮ್ಮ ಮೇಕಪ್‌ಗೆ ರಿಫ್ರೆಶಿಂಗ್ ನೋಟ ನೀಡಲು ಸಹಾಯ ಮಾಡುತ್ತದೆ. ಹೀಗಾಗಿ ನಮ್ಮ ಮೇಕಪ್ ಬಾಕ್ಸ್ನಲ್ಲಿ ಲಿಪ್‌ಸ್ಟಿಕ್ ಒಂದು ಅತೀ ಅಗತ್ಯವಾದ ವಸ್ತುವಾಗಿದೆ.