ಭಾರತೀಯರ ವೈವಿಧ್ಯಮಯ ಸಂಸ್ಕೃತಿ ಹಾಗೂ ಸ್ವಭಾವದಂತೆಯೇ ನಮ್ಮ ಚರ್ಮದ ಟೋನ್ ಕೂಡ ವೈವಿಧ್ಯಮಯ ಶ್ರೇಣಿಯನ್ನು ಹೊಂದಿರುತ್ತದೆ. ಕೆಲವೊಮ್ಮೆ ಹವಾಮಾನವನ್ನು ಅವಲಂಬಿಸಿ, ನಮ್ಮ ಚರ್ಮದ ಟೋನ್‌ಗಳಲ್ಲಿ ವ್ಯತ್ಯಾಸವೂ ಹೊಂದಿರುತ್ತೇವೆ. ಇದು ಲಿಪ್‌ಸ್ಟಿಕ್ ಬಣ್ಣಗಳಲ್ಲಿ ಆಯ್ಕೆಮಾಡುವಾಗ ಗೊಂದಲ ಆಗುವ ಸಾಧ್ಯತೆ ಇರುತ್ತದೆ.
ನಮ್ಮಲ್ಲಿ ಪ್ರತಿಯೊಬ್ಬರೂ ವಿಶಿಷ್ಟವಾಗಿರುವುದರಿಂದ ನಾವು ಒಂದೇ ಬಣ್ಣದ ಲಿಪ್‌ಸ್ಟಿಕ್ ಅನ್ನು ಅತ್ಯುತ್ತಮ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮೈ ಬಣ್ಣಕ್ಕೆ ಹೊಂದುವಂತಹ ಲಿಪ್‌ಸ್ಟಿಕ್ ಬಣ್ಣಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಭಾರತೀಯರ ಮೈ ಬಣ್ಣಕ್ಕೆ ಹೊಂದುವಂತಹ ಕೆಲವು ಲಿಪ್‌ಸ್ಟಿಕ್ ಶೇಡ್‌ಗಳು ಹೀಗಿವೆ.
Advertisement
ನ್ಯೂಡ್ ಲಿಪ್‌ಸ್ಟಿಕ್:
ನ್ಯೂಡ್ ಶೇಡ್ ಲಿಪ್‌ಸ್ಟಿಕ್‌ಗಳು ಭಾರತೀಯರ ಮೈಬಣ್ಣಕ್ಕೆ ಹೆಚ್ಚು ಹೊಂದಿಕೆಯಾಗುತ್ತವೆ. ಅತ್ಯಂತ ಕಡಿಮೆ ಮೇಕಪ್ ಅಥವಾ ನೋ-ಮೇಕಪ್ ಲುಕ್ ಇಷ್ಟಪಡುವವರಿಗೆ ನ್ಯೂಡ್ ಶೇಡ್ ಉತ್ತಮವಾಗಿದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು
Advertisement
Advertisement
ಕಂದು ಲಿಪ್‌ಸ್ಟಿಕ್ ಶೇಡ್:
ಎಣ್ಣೆಗಪ್ಪು ಅಥವಾ ಆಲಿವ್ ಚರ್ಮದ ಟೋನ್ ಹೊಂದಿರುವವರು ಕಂದು ಅಥವಾ ಕಾಫಿ ಶೇಡ್‌ನ ಲಿಪ್‌ಸ್ಟಿಕ್ ಸೂಟ್ ಆಗುತ್ತೆ. ಇದು ಹೆಚ್ಚು ಬೆಳ್ಳಗಿರುವವರಿಗಿಂತಲೂ ಕೊಂಚ ಡಾರ್ಕ್ ಸ್ಕಿನ್ ಟೋನ್ ಹೊಂದಿರುವವರ ಮುಖಕ್ಕೆ ಆಕರ್ಷಕ ನೋಟವನ್ನು ನೀಡುತ್ತದೆ.
Advertisement
ಪಿಂಕ್ ಮ್ಯಾಟ್ ಲಿಪ್‌ಸ್ಟಿಕ್:
ನಿಮ್ಮ ಸ್ಕಿನ್ ಟೋನ್ ಬೆಳ್ಳಗಿದೆ ಎಂದರೆ ಪಿಂಕ್ ಶೇಡ್ ಲಿಪ್‌ಸ್ಟಿಕ್ ಪರ್ಫೆಕ್ಟ್ ಮ್ಯಾಚ್. ಇದರಲ್ಲಿ ಗ್ಲಾಸಿ ಫಿನಿಶ್‌ಗಿಂತ ಮ್ಯಾಟ್ ಫಿನಿಶ್ ಇರುವ ಲಿಪ್‌ಸ್ಟಿಕ್ ಟ್ರೆಂಡಿಯಾಗಿಯೂ ಕಾಣಿಸುತ್ತದೆ. ಹೊಳೆಯುವ ಮುಖದವರಿಗಂತೂ ಪಿಂಕ್ ಬಣ್ಣ ಆಕರ್ಷಕವಾಗಿ ಕಾಣಿಸುತ್ತದೆ.
ಗಾಢ ಕೆಂಪು ಲಿಪ್ ಶೇಡ್:
ಗಾಢವಾದ ಕೆಂಪು ಬಣ್ಣದ ಲಿಪ್‌ಸ್ಟಿಕ್ ಯಾವುದೇ ಸಂದರ್ಭದಲ್ಲೂ ಬೆಸ್ಟ್ ಎನಿಸುತ್ತದೆ. ಎಲ್ಲರ ಮೈಬಣ್ಣಕ್ಕೂ ಹೊಂದುವ ಈ ಶೇಡ್ ದಿನ ಅಥವಾ ರಾತ್ರಿಯ ವಿಶೇಷ ಕಾರ್ಯಕ್ರಮಗಳಲ್ಲೂ ಆಕರ್ಷಕವಾಗಿ ಕಾಣಿಸುತ್ತದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು
ರೂಬಿ ಶೇಡ್:
ರೂಬಿ ರೆಡ್ ಕ್ಲಾಸಿಕ್ ಲಿಪ್‌ಸ್ಟಿಕ್ ಶೇಡ್ ಆಗಿದ್ದು, ಹೆಚ್ಚಿನವರಿಗೆ ಸೂಟ್ ಆಗುವ ಇನ್ನೊಂದು ಬಣ್ಣ. ಪ್ರತಿ ಭಾರತೀಯ ಸ್ಕಿನ್ ಟೋನ್‌ಗೆ ಹೊಂದಿಕೊಳ್ಳುವ ಛಾಯೆ ಪ್ರತಿಯೊಬ್ಬರೂ ತಮ್ಮ ವ್ಯಾನಿಟ್ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬೇಕಾದ ಲಿಪ್‌ಸ್ಟಿಕ್‌ಗಳಲ್ಲಿ ಒಂದು.