ಇಂಟರ್‌ನೆಟ್ ಲೋಕದಲ್ಲಿ 1 ಮಿನಿಟ್ ಸೀರೆಗೆ ಹೆಚ್ಚಿದ ಬೇಡಿಕೆ

Public TV
2 Min Read
shilpa shetty 1

ಗ ಸೋಷಿಯಾ ಮೀಡಿಯಾ ಫಾಸ್ಟ್ ಇರುವ ಜಮಾನ. ದುಡ್ಡಿದ್ರೆ ಏನು ಬೇಕಾದರೂ ಕ್ಷಣ ಮಾತ್ರದಲ್ಲಿ ಕೊಂಡುಕೊಳ್ಳಬಹುದು. ಹೀಗಿರುವಾಗ ಕಡಿಮೆ ಸಮಯದಲ್ಲಿ ವಿವಿಧ ರೀತಿಯ ಬಟ್ಟೆಯ ಟ್ರೆಂಡ್ (Trend) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅದರಲ್ಲಿ ಧಿಡೀರ್ ಎಂದು ಉಡಬಹುದಾದ ಈ ಸೀರೆಗಳು ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅದೇ 1 ಮಿನಿಟ್ ಸ್ಯಾರಿ ಟ್ರೆಂಡ್.

saree

ಈ ಮುಂಚೆ ರೆಡಿ ಸೀರೆಗಳೆಂದು ಕರೆಯಲ್ಪಡುವ ಸೀರೆಗಳೇ ಇಂದಿನ 1 ಮಿನಿಟ್ ಸೀರೆಗಳು. ಕಾಲ ಬದಲಾದಂತೆ ಹೆಸರು ಕೂಡ ಬದಲಾಗಿದೆ ಅಷ್ಟೇ. ಈ 1 ಮಿನಿಟ್ ಸೀರೆ ಕಾನ್ಸೆಪ್ಟ್, ಕಾರ್ಪೋರೇಟ್ ಕ್ಷೇತ್ರದ ಮಹಿಳಾ ಮಣಿಯರನ್ನ ಗಮನದಲ್ಲಿಟ್ಟುಕೊಂಡು ಈ ಸೀರೆಗಳನ್ನು ಆನ್‌ಲೈನ್ ಸೀರೆ ಶಾಪ್‌ಗಳು ಪರಿಚಯಿಸಿದ್ದವು. ಇದೀಗ ಈ ಕಾನ್ಸೆಪ್ಟ್ನ ಮುಂದುವರಿದ ಭಾಗವಾಗಿ, ಕಾಲೇಜು ಹುಡುಗಿಯರನ್ನ ಗಮನದಲ್ಲಿಟ್ಟುಕೊಂಡು ಅವರವರ ಅಭಿರುಚಿಗೆ ತಕ್ಕಂತೆ 1 ಮಿನಿಟ್ ಸೀರೆಗಳನ್ನ(One Minute Saree) ಸಿದ್ಧಪಡಿಸಿ ಸೇಲ್ ಮಾಡಲಾಗುತ್ತಿದೆ. ಈ ಸೀರೆಗೆ ಡಿಮ್ಯಾಂಡ್ ಕೂಡ ಇದೆ.

cover1669284010601

ಮಹಿಳೆಯರ ಬಜೆಟ್‌ಗೆ ತಕ್ಕಂತೆ ವಿವಿಧ ಶೈಲಿಯ ಬ್ರ್ಯಾಂಡ್ ಸೀರೆಗಳು ಮಾರುಕಟ್ಟೆಯಲ್ಲಿದೆ. ಸುಲಭವಾಗಿ ಉಟ್ಟು ಸಮಾರಂಭ, ಅಥವಾ ಆಫೀಸ್‌ಗೆ ಹೋಗಬಹುದಾದ ಕಾರಣ ಸೀರೆಗೆ ಸಹಜವಾಗಿ ಬೇಡಿಕೆ ಶುರುವಾಗಿದೆ. ಈ ಜನರೇಷನ್ ಮಹಿಳೆಯರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡಿ ಡೆನಿಮ್‌ ಜೀನ್ಸ್‌ಗೆ ಮಹಿಳೆಯರು ಫಿದಾ

rashmika 1 2

ಈ 1 ಮಿನಿಟ್‌ ಸೀರೆ ಟ್ರೆಂಡ್‌ಗೆ ನಟಿಮಣಿಯರು ಕೂಡ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್‌- ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ಮಾರು ಹೋಗಿದ್ದಾರೆ. ಶಿಲ್ಪಾ ಶೆಟ್ಟಿ(Shilpa Shetty), ರಶ್ಮಿಕಾ ಮಂದಣ್ಣ (Rashmika Mandanna), ಜಾನ್ವಿ ಕಪೂರ್‌, ಸಾರಾ ಅಲಿ ಖಾನ್‌ ಸೇರಿದಂತೆ ಹಲವರು 1 ಮಿನಿಟ್‌ ಸೀರೆ ಧರಿಸಿ ಹೈಲೆಟ್‌ ಆಗಿದ್ದಾರೆ.

1 ಮಿನಿಟ್ ಸೀರೆ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಿಚಾರ

* ಸೊಂಟದ ಅಳತೆಗೆ ತಕ್ಕಂತೆ ಕಸ್ಟಮೈಸ್ ಮಾಡಿಸಿ
* ಜಾಹೀರಾತು ನೋಡಿ ಮರುಳಾಗಬೇಡಿ
* ರಿಟರ್ನ್ ಪಾಲಿಸಿ ಬಗ್ಗೆ ತಿಳಿದುಕೊಳ್ಳಿ
* ಆನ್‌ಲೈನ್‌ಗೂ ಮತ್ತು ರಿಯಲ್ ಆಗಿ ನೋಡುವುದಕ್ಕೂ ವ್ಯತ್ಯಾಸವಿರುತ್ತದೆ
* ಸೀರೆಯ ಕ್ವಾಲಿಟಿ ಮತ್ತು ದರವನ್ನು ತಿಳಿದುಕೊಳ್ಳಿ

Share This Article