– ಈ ಮಾಟಿಗಳು ಮಾಡ್ರನ್ ಗೂ ಸೈ, ಎತ್ನಿಕ್ ಗೂ ಸೈ
ಈಗಿನ ಫ್ಯಾಶನ್ ಲೋಕದಲ್ಲಿ ಹುಡುಗಿರು ಡಿಫರೆಂಟ್ ಆಗಿ ಕಾಣಲು ಬಯಸುತ್ತಾರೆ. ಇತ್ತೀಚೆಗೆ ಚಿನ್ನದ ಆಭರಣಗಳನ್ನು ಇಷ್ಟ ಪಡದೆ ಹೆಚ್ಚಾಗಿ ಆರ್ಟಿಫೀಶಿಯಲ್ ಜ್ಯುವೆಲ್ಲರಿಗಳನ್ನು ಹಾಕಲು ಬಯಸುತ್ತಾರೆ. ಮಾರುಕಟ್ಟೆಗೆ ವಿವಿಧ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ. ಫ್ಯಾಶನ್ ಪ್ರಿಯರು ಆರ್ಟಿಫೀಶಿಯಲ್ ಜ್ಯುವೆಲ್ಲರಿಗಳನ್ನು ಪಾರ್ಟಿ, ಇತರ ಸಮಾರಂಭಗಳಿಗೆ ಧರಿಸಲು ಈ ಆಭರಣಗಳನ್ನು ಇಷ್ಟ ಪಡುತ್ತಾರೆ.
ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಸಂಸ್ಕೃತಿಯ ಛಾಯೆ ಕಳೆದುಕೊಳ್ಳದೆ ಆಧುನಿಕತೆಯನ್ನು ತೋರಿಸುವ ಶೈಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಆ ಶೈಲಿಯ ಉತ್ತಮ ಉದಾಹರಣೆ ಎಂದರೆ ಮಾಟಿ ಆಭರಣಗಳೊಂದಿಗೆ ಮಾಡ್ರನ್ ಡ್ರೆಸ್‌ಗಳ ಕಾಂಬಿನೇಷನ್.
ಮಾಟಿ ಆಭರಣಗಳು ಮತ್ತೆ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿವೆ. ಇವು ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಆಧುನಿಕ ಉಡುಪುಗಳವರೆಗೆ ಎಲ್ಲದಕ್ಕೂ ಒಪ್ಪುತ್ತದೆ. ಇತ್ತೀಚೆಗೆ, ಎರಡು ಅಥವಾ ಮೂರು ಎಳೆಯ ಮಾಟಿಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಇವು ಮುಖದ ಆಕರ್ಷಕತೆಯನ್ನು ಹೆಚ್ಚಿಸುತ್ತವೆ ಅಲ್ಲದೇ ಹೆವಿ ವರ್ಕ್‌ಗಳಿರುವ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ ಸ್ಟೋನ್ ಅಥವಾ ಮುತ್ತಿನ ಕೆಲಸದ ಮಾಟಿಗಳು ವಿಶೇಷವಾಗಿ ಆಕರ್ಷಕವಾಗಿವೆ.
ಟ್ರೆಂಡಿಂಗ್ ಮಾಟಿಗಳನ್ನು ಧರಿಸುವುದರಿಂದ ದೊಡ್ಡ ನೆಕ್ಲೆಸ್ ಧರಿಸುವ ಅಗತ್ಯವಿಲ್ಲದೆ ರಿಚ್ ಲುಕ್ ಪಡೆಯಬಹುದು. ಚಿನ್ನದ ಜೊತೆಗೆ ಬೆಳ್ಳಿ ಮಾಟಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಭಿನ್ನ ಆಯ್ಕೆಗಳನ್ನು ನೀಡುತ್ತವೆ. 2025ರಲ್ಲಿ ಮಾಟಿ ಆಭರಣಗಳು ಮತ್ತೆ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹಳೆಯ ಕಾಲದ ಮಾಟಿಗಳು ಈಗ ನವೀಕೃತ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ಸೀರೆ, ಗ್ರ್ಯಾಂಡ್ ಸೆಲ್ವಾರ್ ಅಥವಾ ಸ್ಕರ್ಟ್-ಬ್ಲೌಸ್ ಧರಿಸಿದಾಗ ಮಾಟಿ ಆಭರಣಗಳು ರಿಚ್ ಲುಕ್ ನೀಡುತ್ತವೆ. ಇವು ಫ್ರೀ ಹೇರ್ ಅಥವಾ ಬನ್ ಹೇರ್‌ಸ್ಟೈಲ್‌ಗೂ ಚೆನ್ನಾಗಿ ಹೊಂದುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೂ ವಿಭಿನ್ನ ರೀತಿಯ ಸ್ಟೈಲಿಶ್ ಮಾಟಿಗಳು ಹೊಸ ಲುಕ್ ಅನ್ನು ನೀಡುತ್ತದೆ. ಒಂದೆಳೆಯ ಮಾಟಿಗಳಿಂದ ಹಿಡಿದು ಎರಡು-ಮೂರೆಳೆಯ ಮಾಟಿಗಳವರೆಗೆ ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜೆಟ್ ಮತ್ತು ಶೈಲಿಗೆ ಅನುಗುಣವಾಗಿ ಆಯ್ಕೆಮಾಡಬಹುದು. ಹೀಗಾಗಿ, ಮಾಟಿ ಆಭರಣಗಳು ಇಂದಿನ ಫ್ಯಾಷನ್ ಪ್ರಿಯರಿಗೆ ಹೊಸ ಆಯ್ಕೆಯಾಗಿ ಹೊರಹೊಮ್ಮಿವೆ.
ಅದರಲ್ಲೂ ಫ್ಯಾಷನ್ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಇಂತಹ ಆಭರಣಗಳನ್ನು ಧರಿಸುತ್ತಾರೆ. ಫೋಟೋಶೂಟ್‌ನಲ್ಲಿ ಧರಿಸುವ ಮಾಟಿ ಇಯರಿಂಗ್ ಇಡೀ ಲುಕ್ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ. ಈಗಿನ ಟ್ರೆಂಡ್‌ಗೆ ಮ್ಯಾಚ್ ಆಗುವಂತಾ ಮಾಟಿಗಳನ್ನು ಡಿಸೈನರ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ
ಮಾಡ್ರನ್ ಡ್ರೆಸ್‌ಗಳಿಗೆ ಒಪ್ಪುವ ಮಾಟಿಗಳು
ಸಿಂಪಲ್ ಡ್ರೆಸ್‌ಗಳು, ಶರ್ಟ್ಸ್ ಅಥವಾ ವೆಸ್ಟರ್ನ್ ಗೌನ್ಸ್‌ಗಳಿಗೆ ಸ್ಟೈಲಿಶ್ ಮಾಟಿಗಳು ಎತ್ನಿಕ್ ಟಚ್ ಕೊಡುತ್ತವೆ. ಹಾಗೆಯೇ ಯುನೀಕ್ ಆಗಿ ಕೂಡ ಕಾಣಿಸುತ್ತದೆ. ಕಚೇರಿ, ಕಾಲೇಜು ಅಥವಾ ಕಾಫಿ ಡೇಟ್‌ಗೆ ಬಳಸಬಹುದಾದ ಮಾಟಿಗಳು ಲಭ್ಯವಿವೆ. ಹ್ಯಾಂಡ್‌ಪೈಂಟೆಡ್ ಅಥವಾ ಪ್ಯಾಟ್‌ಟರ್ನ್ಡ್ ಮಾಟಿಗಳು ಶರ್ಟ್ ಡ್ರೆಸ್‌ಗಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.
ಮಾಟಿ ಆಭರಣಗಳ ತೂಕವು ಕಡಿಮೆಯಿದ್ದು, ವಿನ್ಯಾಸದ ವೈವಿಧ್ಯತೆ ಹೆಚ್ಚಾಗಿದೆ. ಜೀನ್ಸ್-ಟಾಪ್ ಅಥವಾ ಜಂಪ್‌ಸೂಟ್ ಜೊತೆ ಕಲರ್ ಫುಲ್ ಮಾಟಿಗಳು ಹಾಗೂ ಮ್ಯಾಚಿಂಗ್ ಬಳೆ ಹಾಕಿದರೆ ಕ್ಲಾಸೀ ಲುಕ್ ನೀಡುತ್ತದೆ. ಈ ಸ್ಟೈಲ್‌ಗಳನ್ನು ಬಳಸುವುದರಿಂದ ನವೀನತೆಯ ಜೊತೆಗೆ ಸಂಸ್ಕೃತಿಯ ಹಳೆಯ ಆಭರಣಗಳ ವಿನ್ಯಾಸಗಳೂ ಚಾಲ್ತಿಯಲ್ಲಿರುತ್ತದೆ.
ಸ್ಟೋನ್ ಅಥವಾ ಮುತ್ತಿನ ಮಾಟಿ
ಸ್ಟೋನ್ ಅಥವಾ ಮುತ್ತಿನ (Pearl) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು. ಮುತ್ತಿನ ಡಿಸೈನ್‌ಗಳ ಮಾಟಿಗಳು ಸೀರೆ, ಲಂಗ ದಾವಣಿಗೆ ಹೇಳಿ ಮಾಡಿಸಿದ ಆಭರಣವಾಗಿದೆ. ಇದು ಉಡುಪಿನ ರೂಪುರೇಷೆಯನ್ನೇ ಬದಲಾಯಿಸುತ್ತದೆ. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.
ಮಾಟಿ ಆಭರಣಗಳು ನಾವಿನ್ಯತೆಯೊಂದಿಗೆ ಸಂಸ್ಕೃತಿಯ ಸೌಂದರ್ಯವನ್ನೂ ಪ್ರತಿಬಿಂಬಿಸುತ್ತವೆ. ವಿಭಿನ್ನ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಶನ್‌ಗೂ ಸೂಕ್ತವಾಗಿವೆ. ಸ್ಟೈಲಿಶ್ ಆಯ್ಕೆಯಾಗಿರುವ ಈ ಆಭರಣಗಳು ನಿತ್ಯ ಉಡುಪುಗಳಿಗೆ ಆಕರ್ಷಕವಾಗಿವೆ. ನೀವು ಸಾಂಪ್ರದಾಯಿಕ ಉಡುಗೆ ಹಾಗೂ ಮಾಡನ್ ಡ್ರೆಸ್ ಗಳಲ್ಲಿ ರಿಚ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಇಂತಹ ಆಧುನಿಕ ಮಾಟಿಗಳನ್ನ ಬಳಸಿ.