Fashion | ನೀವು ಹ್ಯಾಂಡ್‌ಬ್ಯಾಗ್ ಪ್ರಿಯರೇ? – ಟ್ರೆಂಡಿ ಬ್ಯಾಗ್ಸ್ ಬಗ್ಗೆ ಒಂದು ಕ್ಲಿಕ್‌ನಲ್ಲಿದೆ ಟಿಪ್ಸ್‌

Public TV
3 Min Read
Hand Bags

ಜಗತ್ತಿನಲ್ಲಿ ಸೊಬಗಿಗೆ ಮಾರುಹೋಗದವರೇ ಇಲ್ಲ ಎನ್ನುವಂತೆ ಎಲ್ಲರಲ್ಲಿಯೂ ತಾವು ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತೆ. ಸೆಲೆಬ್ರೆಟಿಗಳಂತೆ ನಾನು ಕೂಡ ಮಾಡ್ರನ್ ಹಾಗೂ ಸ್ಟೈಲಿಶ್ ಆಗಿ ಕಾಣಬೇಕು ಅಂತ ಕೆಲವು ಫ್ಯಾಷನೇಬಲ್ ಐಟಂಗಳನ್ನ ಹುಡುಗೀರು ತುಂಬಾನೇ ಲೈಕ್ ಮಾಡ್ತಾರೆ.

Hand Bag

ಎಲ್ಲಾದರೂ ಹೊರಡುವಾಗ ಹುಡುಗಿಯರ ಬೆಡಗು-ಬಿನ್ನಾಣದ ಉಡುಗೆಗೆ ಫೈನಲ್ ಟಚ್ ನೀಡುವುದೇ ಟ್ರೆಂಡಿ ಹ್ಯಾಂಡ್ ಬ್ಯಾಗ್ಸ್‌. ಇದು ನಿಮ್ಮ ಡ್ರೆಸ್ಸಿಂಗ್ ಸ್ಟೈಲ್‌ನ ಒಂದು ಮುಖ್ಯ ಭಾಗವೂ ಹೌದು. ಯಾವ ಡ್ರೆಸ್‌ಗೆ ಯಾವ ರೀತಿಯ ಹ್ಯಾಂಡ್ ಬ್ಯಾಗ್ ಧರಿಸುತ್ತೇವೆ ಅನ್ನೋದು ಕೂಡ ನೋಡೋರಿಗೆ ಮ್ಯಾಟರ್ ಆಗುತ್ತದೆ. ಈ ಹ್ಯಾಂಡ್ ಬ್ಯಾಗ್‌ಗಳಿಂದ ಎರಡು ರೀತಿಯ ಬೆನಿಫಿಟ್‌ಗಳಿವೆ. ಒಂದು ಇದು ಫ್ಯಾಶನ್ ಲುಕ್ ನೀಡಿದರೆ ಇನ್ನೊಂದು ಮುಖ್ಯವಾಗಿರುವ ಸಣ್ಣ ಪುಟ್ಟ ಮೇಕಪ್ ಐಟಂಗಳನ್ನ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

Hand Bags 1

ನಿಮಗೂ ನಿಮ್ಮ ಪಾರ್ಟಿ ಇವೆಂಟ್ ಅಥವಾ ಕ್ಯಾಶುಯಲ್ ವೇರ್ ಅಲ್ಲಿ ಡಿಫ್ರೆಂಟ್ ಆಗಿ ಕಾಣಬೇಕು ಅಂತ ಆಸೆ ಇದೆಯಾ? ಯಾವ ತರಹದ ಹ್ಯಾಂಡ್‌ಬ್ಯಾಗ್‌ ಬಳಸಿದ್ರೆ ಸ್ಟೈಲಿಶ್‌ & ಬ್ಯೂಟಿಫುಲ್‌ ಆಗಿ ಕಾಣ್ತೀರಿ ಅನ್ನೋದಕ್ಕೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ…

1. ಕಿಲಿ ಸೋಲ್ಡರ್ ಬ್ಯಾಗ್ (Kili Bag)
ಈ ಕಿಲ್ಲಿ ಶೋಲ್ಡರ್ ಬ್ಯಾಗ್ ಹಾಲಿವುಡ್ ಮಾಡೆಲ್‌ಗಳು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದು ಹೆಚ್ಚಾಗಿ ಮಾಡರ್ನ್ ಡ್ರೆಸ್ ಅಂದ್ರೆ ಜೀನ್ಸ್ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುತ್ತದೆ. ಇದರಲ್ಲೂ ವೆರೈಟಿ ವೆರೈಟಿಯ ಬ್ಯಾಗ್‌ಗಳಿವೆ. ವೆಲ್ವೆಟ್ ಮೆಟೀರಿಯಲ್ ಅಥವಾ ಲೆದರ್ ರೀತಿಯ ಬ್ಯಾಗ್‌ಗಳು ಸದ್ಯ ಟ್ರೆಂಡ್‌ನಲ್ಲಿದೆ.

Kili Bag

2. ರೈನ್‌ಸ್ಟೋನ್ ಡೆಕೋರ್ ಬಕೆಟ್ ಬ್ಯಾಗ್(Rhinestone Decor Bucket Bag)
ಇದು ಪಕ್ಕಾ ಪಾರ್ಟಿವೇರ್ ಬ್ಯಾಗ್. ಇದನ್ನು ಶಾರ್ಟ್ ಡ್ರೆಸ್‌ಗಳಿಗೆ ಬಳಕೆ ಮಾಡ್ತಾರೆ. ಇದು ಹೆವಿ ಸ್ಟೋನ್ ವರ್ಕ್ನ ಬ್ಯಾಗಾಗಿದೆ. ಈ ರೈನ್‌ಸ್ಟೋನ್ ಬ್ಯಾಗ್‌ಗಳು ಸಣ್ಣ ಗಾತ್ರದ್ದಾಗಿದೆ. ಈ ಬ್ಯಾಗ್‌ನಲ್ಲಿ ಹೆಚ್ಚೇನು ದೊಡ್ಡ ದೊಡ್ಡ ವಸ್ತುಗಳನ್ನು ಕೊಂಡೊಯ್ಯಲಾಗುವುದಿಲ್ಲ. ಇದಲ್ಲಿ ಕೇವಲ ಮೇಕಪ್ ವಸ್ತುಗಳಾದ ಲಿಪ್‌ಸ್ಟಿಕ್, ಫೌಂಡೇಶನ್, ಲೈನರ್‌ಗಳನ್ನು ಕ್ಯಾರಿ ಮಾಡಬಹುದು. ಈ ಬ್ಯಾಗ್‌ಗಳು ಪಾರ್ಟಿವೇರ್ ಡ್ರೆಸ್‌ಗಳಿಗೆ ನ್ಯೂ ಲುಕ್ ನೀಡುತ್ತದೆ.

Rinostone Bag

3. ಕೆಪ್ಯೂಸ್ಸಿನೊ ಬ್ಯಾಗ್(Capucines Bag)
ಇದು ಸಾಮಾನ್ಯವಾದ ಹ್ಯಾಂಡ್ ಬ್ಯಾಗ್. ಇದನ್ನು ಹುಡ್ಗೀರು, ಮಹಿಳೆಯರು ಎಲ್ಲರೂ ಬಳಕೆ ಮಾಡ್ತಾರೆ. ಇದು ಸೀರೆಗಳಿಗೂ ಒಪ್ಪುತ್ತೆ, ಫಾರ್ಮಲ್ ಔಟ್‌ಫಿಟ್‌ಗೂ ಮ್ಯಾಚ್ ಆಗುತ್ತದೆ. ಈ ಕೆಪ್ಯೂಸ್ಸಿನೊ ಬ್ಯಾಗ್ ಈಗ ಹೆಚ್ಚು ಟ್ರೆಂಡ್‌ನಲ್ಲಿದೆ. ಇದು ನಮ್ಮ ಡ್ರೆಸ್‌ಗಳಿಗೆ ಸಿಂಪಲ್ ಅಂಡ್ ರಿಚ್ ಲುಕ್ ನೀಡುತ್ತದೆ. ಆದ್ದರಿಂದ ಈ ಬ್ಯಾಗ್ ಅನ್ನು ಹೆಚ್ಚಿನವರು ಇಷ್ಟಪಡುತ್ತಾರೆ.

Bag

4. ಹೊಬೊ ಟೋಟ್ ಬ್ಯಾಗ್ (Hobo Tote Bag)
ಈ ಬ್ಯಾಗ್‌ಗಳನ್ನು ಕೊರಿಯನ್ ಬೆಡಗಿಯರು ಹೆಚ್ಚಾಗಿ ವೇರ್ ಮಾಡ್ತಾರೆ. ಫ್ಯಾಷನ್ ಟ್ರೆಂಡ್‌ನಲ್ಲಿ ಭಾರತೀಯರಿಗಿಂತ ಒಂದು ಕೈ ಮೇಲಿರುವ ಕೊರಿಯನ್ನರು ಇಂತಹ ನವೀನ ವಿನ್ಯಾಸದ ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇದು ಕೇವಲ ಫ್ಯಾಷನ್ ಸೆಟ್ ಮಾಡಲು ಮಾತ್ರ ಸೂಕ್ತವಾಗಿರುವ ಬ್ಯಾಗ್. ಇದು ನಮ್ಮ ಭುಜಕ್ಕೆ ಅಂಟಿಕೊಂಡಿರುವಂತೆ ನಾವು ಧರಿಸಬೇಕು. ಇದು ಲಾಂಗ್ ಸೂಟ್ ಡ್ರೆಸ್‌ಗಳಿಗೆ ಗುಡ್ ಲುಕ್ ನೀಡುತ್ತದೆ. ಇದನ್ನು ಹೆಚ್ಚಾಗಿ ಮಾಡೆಲ್‌ಗಳು ಇಷ್ಟಪಡುತ್ತಾರೆ.

Hobo tote bag

5. ಇವ್‌ನಿಂಗ್ ಬ್ಯಾಗ್(Evening Bag)
ಇದು ಚಿಕ್ಕ ಆಕಾರದಲ್ಲಿರುವ ಹಿಡಿದುಕೊಳ್ಳಲು ಸುಲಭವಾಗಿರುವ ಹ್ಯಾಂಡ್ ಬ್ಯಾಗ್. ಇದು ಒಂದು ರೀತಿ ವೃತ್ತಾಕಾರದಲ್ಲಿರುತ್ತದೆ. ಇದನ್ನು ತುಂಬಾ ಸುಲಭವಾಗಿ ಹಾಗೂ ಆರಾಮವಾಗಿ ಬಳಸಬಹುದು. ಇದು ಗ್ಯಾಂಡ್ ಫಂಕ್ಷನ್‌ಗಳಿಗೆ ಧರಿಸುವ ಕುರ್ತಾಗಳಿಗೆ, ಲೆಹಂಗಾ ಡ್ರೆಸ್‌ಗಳಿಗೆ ಸುಂದರವಾಗಿ ಕಾಣುತ್ತದೆ. ಅಲ್ಲದೇ ಇದು ಕೇವಲ ಸಾಂಪ್ರದಾಯಿಕ ಉಡುಗೆಗಳಿಗೆ ಒಪ್ಪುತ್ತದೆ. ಈ ಇವ್‌ನಿಂಗ್ ಹ್ಯಾಂಡ್ ಬ್ಯಾಗ್‌ಗಳನ್ನು ಬಾಲಿವುಡ್, ಸ್ಯಾಂಡಲ್‌ವುಡ್ ಹೀರೊಯಿನ್ಸ್ ಹೆಚ್ಚಾಗಿ ಬಳಕೆ ಮಾಡುತ್ತಾರೆ.

Evening Bag

ಇನ್ನು ಹ್ಯಾಂಡ್ ಬ್ಯಾಗ್ ಧರಿಸುವಾಗ ಅನುಸರಿಸಬೇಕಾದ ಟಿಪ್ಸ್
1. ನೀವು ತುಂಬಾ ಹೆವಿ ಸ್ಟೋನ್ ವರ್ಕ್ನ ಬಟ್ಟೆಗಳನ್ನು ಧರಿಸುವಾಗ ಚಿಕ್ಕದಾದ ಹಾಗೂ ಸಿಂಪಲ್ ಹ್ಯಾಂಡ್ ಬ್ಯಾಗ್‌ಗಳನ್ನು ವೇರ್ ಮಾಡಿ
2. ಕಡು ಬಣ್ಣದ ಉಡುಪುಗಳಿಗೆ ಸಾಧ್ಯವಾದಷ್ಟು ತಿಳಿ ಬಣ್ಣದ ಬ್ಯಾಗ್‌ಗಳನ್ನು ಧರಿಸಿ.
3. ನೀವು ಧರಿಸಿರುವ ಬಟ್ಟೆಯ ಬಣ್ಣ ಹಾಗೂ ಬ್ಯಾಗ್‌ನ ಬಣ್ಣ ಯಾವತ್ತೂ ಒಂದೇ ಆಗಿರಬಾರದು.
4. ಸಿಂಪಲ್ ಡ್ರೆಸ್‌ಗಳಿಗೆ ಹೆಚ್ಚು ಡಿಸೈನ್ ಅಥವಾ ಸ್ಟೋನ್ ವರ್ಕ್ ಇರುವ ಬ್ಯಾಗ್‌ಗಳನ್ನು ಧರಿಸಿ.
5. ಪಾರ್ಟಿ, ಇವೆಂಟ್, ಮದುವೆ ಸಮಾರಂಭಗಳಿಗೆ ಆದಷ್ಟು ಚಿಕ್ಕ ಬ್ಯಾಗ್‌ಗಳನ್ನು ಬಳಸಿ.
6. ಕ್ಯಾಶುವಲ್ ಫಾರ್ಮಲ್‌ಗಳಿಗೆ ಸಿಂಪಲ್ ಆಗಿರುವ ಬ್ಯಾಗ್ ಹಾಗೂ ಪಾರ್ಟಿವೇರ್‌ಗಳಿಗೆ ಮಾಡರ್ನ್ ಹಾಗೂ ಗ್ಯಾಂಡ್ ಬ್ಯಾಗ್‌ಗಳನ್ನು ಧರಿಸಿ.
7. ನೀವು ಧರಿಸಿರುವ ಉಡುಪಿಗೆ ನಿಮ್ಮ ಹ್ಯಾಂಡ್ ಬ್ಯಾಗ್ ಮ್ಯಾಚ್ ಆಗುತ್ತದೆಯೇ ಎಂದು ಮೊದಲು ಗಮನಿಸಿ.

Share This Article