ಮುಂಬೈ: ಬಾಲಿವುಡ್ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಫ್ಯಾಶನ್ ಡಿಸೈನಿಂಗ್ ಕಂಪನಿಯೊಂದು ದೂರು ದಾಖಲಿಸಿದೆ.
ಶ್ರದ್ಧಾ ನಟನೆಯ `ಹಸೀನಾ ಪರ್ಕರ್’ ಸಿನಿಮಾ ಬಿಡುಗಡೆಯಾಗಲು ರೆಡಿಯಾಗಿದ್ದು, ಚಿತ್ರತಂಡ ಪ್ರಮೋಶನ್ ನಲ್ಲಿ ಬ್ಯೂಸಿಯಾಗಿದೆ. ಎಂ ಆ್ಯಂಡ್ ಎಂ ಕಂಪನಿ ಚಿತ್ರಕ್ಕೆ ಸಂಬಂಧಪಟ್ಟಂತಹ ಕಾಸ್ಟ್ಯೂಮ್ ಒದಗಿಸಿತ್ತು. ಹೀಗಾಗಿ ಕಂಪನಿ ಮತ್ತು ನಿರ್ಮಾಪಕ-ಸ್ವಿಸ್ ಎಂಟರ್ ಟೈನಮೆಂಟ್ ನಡುವೆ ಒಪ್ಪಂದವಾಗಿತ್ತು.
Advertisement
Advertisement
ಒಪ್ಪಂದದ ಪ್ರಕಾರ ಸಿನಿಮಾ ಪ್ರಚಾರ ವೇಳೆಯಲ್ಲಿ ನಟಿ ಶ್ರದ್ಧಾ ತೊಡುವ ಉಡುಪಿನ ಮೇಲೆ ಎಜಿಟಿಎಂ(ಆಜ್ ಮಿಸ್ಟ್ರಿ ಆ್ಯಂಡ್ ಥಿಯಾ ಮಿನ್ಹಾಸ್) ಲೇಬಲ್ ಹಾಕಿಕೊಳ್ಳಬೇಕಿತ್ತು. ಕಂಪನಿಯ ಲೇಬಲ್ ಧರಿಸಲು ಶ್ರದ್ಧಾ ಕೂಡ ಒಪ್ಪಿಗೆಯನ್ನು ಸೂಚಿಸಿದ್ದರು.
Advertisement
ಸಿನಿಮಾದ ಪ್ರಚಾರದ ವೇಳೆಯಲ್ಲಿ ಶ್ರದ್ಧಾ ಇದೂವರೆಗೂ ಎಲ್ಲಿಯೂ ಕಂಪನಿಯ ಲೇಬಲ್ ಧರಿಸಿಲ್ಲ. ಹೀಗಾಗಿ ಎಂ ಆಂಡ್ ಎಂ ಕಂಪನಿ ಚಿತ್ರ ತಂಡದ ವಿರುದ್ಧ ಹಾಗೂ ಶ್ರದ್ಧಾ ಮೇಲೆ ವೈಯಕ್ತಿಕ ದೂರನ್ನು ಮುಂಬೈ ನ್ಯಾಯಾಲಯದಲ್ಲಿ ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಅಕ್ಟೋಬರ್ 26 ರಂದು ನಡೆಯಲಿದೆ ಎಂದು ಕಂಪನಿ ಪರ ಲಾಯರ್ ರಿಜ್ವಾನ್ ಸಿದ್ದೀಕಿ ತಿಳಿಸಿದ್ದಾರೆ.
Advertisement
ದೂರಿನಲ್ಲಿ ಏನಿದೆ?: ಉದ್ದೇಶಪೂರ್ವಕ, ನಿರ್ಲಕ್ಷ್ಯವಹಿಸಿ ಬೇಕೆಂದೇ ಲೇಬಲ್ ಧರಿಸಿಲ್ಲ. ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಪಾಲನೆ ಮಾಡಬೇಕಿದ್ದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಚಿತ್ರತಂಡ ಮತ್ತು ಶ್ರದ್ಧಾ ಕಪೂರ್ ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಸೀನಾ ಪರ್ಕರ್ ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅಲಿಯಾಸ್ ಆಪಾ ಜೀವನಾಧರಿತ ಕಥೆಯಾಗಿದೆ.