ನೀವು ನೈಲ್ ಆರ್ಟ್ ಪ್ರಿಯರಾ? ಹೊಸ ಹೊಸ ವಿನ್ಯಾಸಗಳನ್ನು ನಿಮ್ಮ ಉಗುರುಗಳಲ್ಲಿ ಚಿತ್ರಿಸಲು ನೀವು ಇಷ್ಟ ಪಡುತ್ತೀರಾ? ಪ್ರತಿ ಮಹಿಳೆ ತನ್ನ ಉಗುರುಗಳನ್ನು ಅಂದವಾಗಿ ಕಾಣಿಸಲು ವಿಭಿನ್ನ ವಿನ್ಯಾಸಗಳಿಗೆ ಮಾರು ಹೋಗುತ್ತಾರೆ. ಕೆಲವರು ತಮ್ಮ ಉಗುರುಗಳಿಗೆ ಗಾಢ ಬಣ್ಣಗಳನ್ನು ಹಚ್ಚಲು ಇಷ್ಟಪಟ್ಟರೆ ಇನ್ನೂ ಕೆಲವರು ಸರಳ ಹಾಗೂ ತಿಳಿ ಬಣ್ಣಗಳನ್ನು ಇಷ್ಟ ಪಡುತ್ತಾರೆ. ಉಗುರುಗಳಲ್ಲಿ ಮೂಡಿಸಬಹುದಾದ ಹೊಸ ಹೊಸ ವಿನ್ಯಾಸಗಳ ಹುಡುಕಾಟದಲ್ಲಿ ನೀವಿದ್ದರೆ, ಇಲ್ಲಿವೆ ಕೆಲವು ಸಿಂಪಲ್ ಹಾಗೂ ಬೇಗನೇ ಉಗುರುಗಳಲ್ಲಿ ಮೂಡಿಸಬಹುದಾದ ನೈಲ್ ಆರ್ಟ್ ಡಿಸೈನ್‌ಗಳು.
ಲವ್ ಹಾರ್ಟ್ ನೈಲ್ ಆರ್ಟ್:
ನಿಮ್ಮ ಉಗುರುಗಳಿಗೆ ಲವ್ ಹಾರ್ಟ್ ನೇಲ್ ಆರ್ಟ್ ವಿನ್ಯಾಸಗನ್ನು ಮೂಡಿಸುವ ಮೂಲಕ ರೋಮ್ಯಾಂಟಿಕ್ ಲುಕ್ ಪಡೆಯಬಹುದು. ಗುಲಾಬಿ, ಕೆಂಪು, ಅಥವಾ ಯಾವುದೇ ತಿಳಿ ಬಣ್ಣಗಳಿಂದ ನೀವು ನಿಮ್ಮ ಉಗುರುಗಳಲ್ಲಿ ಪುಟ್ಟದಾದ ಹೃದಯದ ವಿನ್ಯಾಸ ಮೂಡಿಸಿದರೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ನೀವು ಈ ವಿನ್ಯಾಸಗಳಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಒಂದರ ಮೇಲೊಂದು ಹೃದಯಗಳನ್ನು ಬಿಡಿಸಿದರೆ ಹೃದಯದ ಆಕೃತಿ ಪಾಪ್ ಅಪ್ ಆದಂತೆ ಭಾಸವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು
Advertisement
Advertisement
ಒಂಬ್ರೆ ನೇಲ್ ಆರ್ಟ್ ವಿನ್ಯಾಸ:
ಎರಡು ಬಣ್ಣಗಳನ್ನು ಗ್ರೇಡಿಯಂಟ್ ವಿನ್ಯಾಸವನ್ನಾಗಿ ಮಾರ್ಪಡಿಸುವುದನ್ನು ಒಂಬ್ರೆಲ್ ನೇಲ್ ಆರ್ಟ್ ಎನ್ನಲಾಗುತ್ತದೆ. ಈ ವಿನ್ಯಾಸವನ್ನು ನಿಮ್ಮ ಉಗುರುಗಳಲ್ಲಿ ಮೂಡಿಸಲು ಬೇಕಾಗಿರುವುದು ಕೇವಲ ಎರಡು ಬಣ್ಣಗಳ ನೈಪ್ ಪಾಲಿಶ್ ಹಾಗೂ ಒಂದು ಪುಟ್ಟ ಸ್ಪಂಜ್.
Advertisement
Advertisement
ನಿಮ್ಮ ಇಷ್ಟದ ಒಂದು ಬಣ್ಣವನ್ನು ನಿಮ್ಮ ಉಗುರಿನಲ್ಲಿ ಬೇಸ್ ಆಗಿ ಹಚ್ಚಿ ಬಳಿಕ ಇನ್ನೊಂದು ಬಣ್ಣದ ನೈಲ್ ಪಾಲಿಶ್ ಅನ್ನು ಇನ್ನೊಂದು ಲೇಯರ್ ಆಗಿ ಅರ್ಧ ಉಗುರಿಗೆ ಹಚ್ಚಿ. ಎರಡನೇ ಬಣ್ಣ ಒಣಗುವ ಮೊದಲು ಸ್ಪಂಜ್ ಸಹಾಯದಿಂದ ಮೆತ್ತಗೆ ಉಗುರುಗಳ ಮೇಲೆ ಒತ್ತಿದರೆ ಗ್ರೇಡಿಯಂಟ್ ವಿನ್ಯಾಸ ಮೂಡುತ್ತದೆ. ಉಗುರುಗಳಿಗೆ ಫಿನಿಶಿಂಗ್ ಟಚ್ ನೀಡಲು ಕೊನೆಯದಾಗಿ ವಾಟರ್ ಕಲರ್ ನೈಲ್ ಪಾಲಿಷ್ ಅಥವಾ ಕಲ್ಲರ್ ಲೆಸ್ ನೈಲ್ ಪೈಂಟ್ ಹಚ್ಚಿದರೆ ನಿಮ್ಮ ಉಗುರುಗಳು ಆಕರ್ಷಕವಾಗಿ ಹೊಳೆಯುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್
ವರ್ಣರಂಜಿತ ನೈಲ್ ಆರ್ಟ್:
ಉಗುರುಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಬಳಸಲು ಹಲವರು ಇಷ್ಟಪಡುತ್ತಾರೆ. ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಚಿತ್ತಾರವನ್ನು ಉಗುರಿನಲ್ಲಿ ಬಿಡಿಸುವಾಗ ನಿಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ.
ನೀವು ಹಲವು ಬಣ್ಣಗಳನ್ನು ಒಂದೇ ಉಗುರಿನಲ್ಲಿ ವಿವಿಧ ವಿನ್ಯಾಸಗಳನ್ನು ಮೂಡಿಸುವ ಮೂಲಕ ಆಕರ್ಷಕವನ್ನಾಗಿ ಮಾಡಬಹುದು. ಇಲ್ಲವೇ ಒಂದೊಂದು ಬೆರಳಿಗೆ ಒಂದೊಂದು ಬಣ್ಣಗಳನ್ನು ಬಳಸಿ ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬಹುದು.
ಈ ವಿನ್ಯಾಸಗಳನ್ನು ರಚಿಸುವಾಗ ಒಂದೇ ಉಗುರಿನಲ್ಲಿ ಹಲವು ಬಣ್ಣ ಬಳಸುತ್ತಿರಾದರೆ ಯಾವ ಬಣ್ಣಗಳನ್ನೂ ಬಳಸಬಹುದು. ಆದರೆ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಒಂದೊಂದು ಉಗುರಿಗೆ ಒಂದೊಂದು ಬಣ್ಣಗಳನ್ನು ಬಳಸುತ್ತೀರಾದರೆ ಒಂದು ಬಾರಿಗೆ ತಿಳಿ ಬಣ್ಣಗಳನ್ನು ಆಯ್ದುಕೊಳ್ಳಿ ಇಲ್ಲವೇ ಗಾಢ ಬಣ್ಣಗಳನ್ನೇ ಆಯ್ದುಕೊಳ್ಳಿ.
ಲೈನ್ ಆರ್ಟ್ ಉಗುರು ವಿನ್ಯಾಸ:
ಉಗುರುಗಳಲ್ಲಿ ರೇಖೆಗಳನ್ನು ಮೂಡಿಸುವುದು ಇತ್ತೀಚಿನ ಟ್ರೆಂಡ್. ಒಂದು ನಿಮ್ಮ ಇಷ್ಟದ ಬಣ್ಣವನ್ನು ಬೇಸ್ ಆಗಿ ಬಳಸಿ ಬಳಿಕ ತೆಳುವಾದ ರೇಖೆಗಳನ್ನು ಉಗುರುಗಳಲ್ಲಿ ಮೂಡಿಸಿದರೆ ಟ್ರೆಂಡಿಯಾಗಿ ಕಾಣಿಸುವುದಲ್ಲದೇ ಡೀಸೆಂಟ್ ಲುಕ್ ನಿಮ್ಮದಾಗುತ್ತದೆ. ಉಗುರುಗಳಲ್ಲಿ ಪುಟ್ಟ ರೇಖೆಗಳನ್ನು ಮೂಡಿಸಲು ನಿಮ್ಮ ನೈಲ್ ಆರ್ಟ್ ಕಿಟ್‌ನಲ್ಲಿ ಪುಟ್ಟದಾದ ಬ್ರಷ್‌ಗಳಿದ್ದರೆ ಒಳಿತು. ಇಲ್ಲವೆಂದರೆ ಚಿಕ್ಕ ಕಡ್ಡಿ ಅಥವಾ ಟೂತ್ ಪಿಕ್‌ಗಳನ್ನೂ ಬಳಸಬಹುದು. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್
ಪ್ರಕೃತಿ ಪ್ರೇರಿತ ನೇಲ್ ಆರ್ಟ್ ವಿನ್ಯಾಸ:
ನಿಮ್ಮ ಉಗುರುಗಳಲ್ಲಿ ಪ್ರಕೃತಿಯ ಚಿತ್ರಗಳನ್ನು ಮೂಡಿಸಿದರೆ ಅದರ ಮೇಲೆ ಗಮನಹರಿಸುವವರು ನೀವೊಬ್ಬ ಪ್ರಕೃತಿ ಪ್ರೇಮಿ ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ಉಗುರುಗಳಲ್ಲಿ ಹೂವು, ಎಲೆ, ಬಳ್ಳಿ ಹೀಗೆ ಹಲವು ವಿನ್ಯಾಸಗಳನ್ನು ಮೂಡಿಸಿ ಆಕರ್ಷಕವಾಗಿಸಿ.
ಪ್ರಕೃತಿಯ ಚಿತ್ರಗಳನ್ನು ಉಗುರಿನಲ್ಲಿ ಮೂಡಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಇದನ್ನು ಸುಲಭವಾಗಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೈಲ್ ಸ್ಟಿಕ್ಕರ್‌ಗಳು ಲಭ್ಯವಿದೆ. ನೀವು ಉಗುರುಗಳಲ್ಲಿ ಮೂಡಿಸುವ ವಿನ್ಯಾಸಗಳು ಕೇವಲ ಹೂವು-ಹಣ್ಣು, ಎಲೆ-ಬಳ್ಳಿಗಳಿಗೆ ಮಾತ್ರ ಸೀಮಿತವಾಗಿಸದೇ ಸಮುದ್ರ, ಸೂರ್ಯ, ಬೆಟ್ಟ ಗುಡ್ಡಗಳಿಗೂ ವಿಸ್ತರಿಸಬಹುದು.