ವ್ಯಾಲೆಂಟೈನ್ಸ್ ಡೇಗೆ (Valentine’s Day) ಇನ್ನೊಂದೇ ದಿನ ಬಾಕಿಯಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಯೋಚನೆ ನೀವು ಮಾಡಿಯೇ ಇರುತ್ತೀರಿ. ಆದರೆ ಏನು ನೀಡುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಇರುವ ಒಂದು ಉತ್ತಮ ಆಯ್ಕೆ ಏನು ಅಂದ್ರೆ ಕಪಲ್ ರಿಂಗ್ಸ್.
ಕೇವಲ ಯಾವುದೋ ಒಂದು ಸಾಮಾನ್ಯ ಉಂಗುರ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀಡಿದರೆ ಚೆನ್ನಾಗಿರುತ್ತಾ? ಸ್ವಲ್ಪ ಯೋಚಿಸಿ. ನೀವು ನೀಡುವ ಉಡುಗೊರೆ ವಿಶೇಷವಾಗಿದ್ದರೆ ಮಾತ್ರವೇ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಬಹುದು ಅಲ್ಲವೇ? ಇತ್ತೀಚೆಗೆ ಕೆಲವು ಟ್ರೆಂಡ್‌ನಲ್ಲಿರುವ ಕಪಲ್ ರಿಂಗ್‌ಗಳ (Couple Rings) ಡಿಸೈನ್ ಹೀಗಿವೆ. ಇವುಗಳಲ್ಲಿ ನಿಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಆಯ್ಕೆ ಮಾಡಿ ಅಂತಹದ್ದನ್ನೇ ಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಅವರನ್ನು ಖುಷಿಪಡಿಸಬಹುದು. ಈಗಿನ ಟ್ರೆಂಡ್‌ನಲ್ಲಿರುವ ವಿವಿಧ ಡಿಸೈನ್‌ನ ಕಪಲ್ ರಿಂಗ್ಸ್ ಹೀಗಿವೆ…
Advertisement
Advertisement
ಕಿಂಗ್ ಆಂಡ್ ಕ್ವೀನ್ ಕಪಲ್ ರಿಂಗ್ಸ್:
ರಾಜ ಹಾಗೂ ರಾಣಿಯರ ಕಿರೀಟದ ವಿನ್ಯಾಸವಿರುವ ಉಂಗುರಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಪ್ರೇಮಿಗಳ ದಿನದಂದು ಇದನ್ನು ನಿಮ್ಮನ್ನು ಇಷ್ಟ ಪಡುವವರಿಗೆ ನೀಡಿದರೆ ಅವರು ಖಂಡಿತವಾಗಿಯೂ ವಿಶೇಷ ಅನುಭವ ಪಡೆಯುತ್ತಾರೆ. ನಿಜ ಜೀವನದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ರಾಜ ಅಥವಾ ರಾಣಿಯಂತೆ ನೋಡುತ್ತೀರಿ ಎಂಬ ಅರ್ಥವನ್ನೂ ಇದು ನೀಡುತ್ತದೆ.
Advertisement
ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ ಉಂಗುರಗಳೆಂದರೆ ಅದು ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್. ಎರಡು ಉಂಗುರಗಳನ್ನು ಒಟ್ಟಿಗೆ ತಂದಾಗ ಅಯಸ್ಕಾಂತದ ಸಣ್ಣ ತುಂಣುಕಿನಿಂದಾಗಿ ಉಂಗುರಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಅದೊಂದು ಸಂಪೂರ್ಣ ಹೃದಯದ ಆಕಾರ ಪಡೆಯುತ್ತದೆ. ಉಂಗುರಗಳನ್ನು ಬಿಡಿಸಿದಾಗ ಸಂಪೂರ್ಣ ಹೃದಯವೂ ಬಿಡಿಸಿಕೊಳ್ಳುತ್ತದೆ. ಪ್ರೀತಿಸುವವರು ಒಟ್ಟಾಗಿದ್ದಾಗ ಮಾತ್ರವೇ ಸಂಪೂರ್ಣವಾಗಲು ಸಾಧ್ಯ ಎಂಬ ವಿಶೇಷ ಸಂದೇಶ ಈ ಉಂಗುರಗಳು ನೀಡುತ್ತವೆ. ವಿಶೇಷ ಸಂದೇಶ ಸಾರುವ ಜೋಡಿ ಉಂಗುರಗಳನ್ನು ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆ ನೀಡುವುದರಿಂದ ಅವರೂ ಸಂತೋಷ ಪಡುತ್ತಾರೆ.
Advertisement
ಹೆಸರು ಬರೆದ ಜೋಡಿ ಉಂಗುರಗಳು:
ಉಂಗುರಗಳಲ್ಲಿ ಅಂದದ ಫಾಂಟ್‌ನಲ್ಲಿ ವೈಯಕ್ತಿಕ ಹೆಸರನ್ನು ಕೆತ್ತಿಸಿ, ಅದನ್ನು ಉಡುಗೊರೆ ನೀಡಿದರೆ ಸಂತೋಷ ಯಾರಿಗೆ ತಾನೇ ಆಗಲ್ಲ? ಉಡುಗೊರೆ ಪಡೆದುಕೊಂಡವರು ನೀಡಿದವರ ಹೃದಯದಲ್ಲಿ ಎಷ್ಟು ಮುಖ್ಯವಾದ ಸ್ಥಾನ ಕೊಟ್ಟಿದ್ದಾರೆ ಎಂಬುದು ಮನದಟ್ಟಾಗುವುದು ಖಂಡಿತಾ.
ದೂರದ ಜೋಡಿಗಳ ಉಂಗುರ:
ನಿಮ್ಮ ಪ್ರೀತಿ ಲಾಂಗ್ ಡಿಸ್ಟೆನ್ಸ್‌ನದ್ದಾ? ಹಾಗಿದ್ದರೆ ಈ ಉಂಗುರಗಳು ನಿಮಗಾಗಿಯೇ ಹೇಳಿ ಮಾಡಿಸಿರುವಂತಹವುಗಳು. ಜೋಡಿಗಳು ದೂರವಿದ್ದರೂ ಹೃದಯದಲ್ಲಿ ವಿಶೇಷ ಸ್ಥಾನ ನೀಡುವುದು ಸಾಮಾನ್ಯದ ಮಾತಲ್ಲ. ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟಕರ. ಹೀಗಿರುವಾಗ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭೂಮಿಯ ನಕ್ಷೆಯ ಚಿತ್ರವಿರುವ ಉಂಗುರವನ್ನೇ ಉಡುಗೊರೆ ಕೊಡಿ. ಅದನ್ನು ತೊಟ್ಟುಕೊಂಡವರು ಪ್ರತಿಬಾರಿ ಉಂಗುರವನ್ನು ಗಮನಿಸಿದಾಗ ನಿಮ್ಮನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ.
ಜೋಡಿಗಳಿಗೆ ಲವ್ ಬರ್ಡ್ಸ್ ಉಂಗುರಗಳು:
ನೀವು ಪರಿಸರ ಪ್ರೇಮಿಯೇ? ಪ್ರಾಣಿ-ಪಕ್ಷಿಗಳೆಂದರೆ ನಿಮಗೆ ಹಾಗೂ ನಿಮ್ಮ ಪ್ರೇಮಿಗೆ ಇಷ್ಟವೇ? ಹಾಗಿದ್ದರೆ ಲವ್ ಬರ್ಡ್ಸ್ ಚಿತ್ರವಿರುವ ಉಂಗುರಗಳನ್ನು ನೀಡಿ. ನಿಮ್ಮ ಪ್ರೀತಿ ಪಾತ್ರರು ಇದನ್ನು ಜೀವನದ ಅಮೂಲ್ಯ ಆಭರಣವೆಂದುಪರಿಗಣಿಸುತ್ತಾರೆ.
ಹೆಸರಿನ ಮೊದಲ ಅಕ್ಷರದ ಕಪಲ್ ರಿಂಗ್‌ಗಳು:
ಹೆಸರಿನ ಮೊದಲ ಅಕ್ಷರ ಹೊಂದಿರುವ ಕಪಲ್ ರಿಂಗ್ಸ್ ಹಿಂದಿನಿಂದಲೂ ಟ್ರೆಂಡ್ ಹುಟ್ಟಿಸಿರುವ ಉಂಗುರಗಳೇ ಆಗಿವೆ. ಆದರೆ ಅವುಗಳ ವಿನ್ಯಾಸಗಳಲ್ಲಿ ಬದಲಾವಣೆಗಳು ಬಂದಿವೆ. ಹೆಸರಿನ ಮೊದಲ ಅಕ್ಷರದ ಉಂಗುರಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಫ್ಯಾಶನ್‌ಪ್ರೇಮಿಗಳು ಈ ವಿನ್ಯಾಸದ ಉಂಗುರಗಳ ಉಡುಗೊರೆ ನೀಡುವುದು ಬೆಸ್ಟ್ ಚಾಯ್ಸ್.
ಮ್ಯೂಜಿಕಲ್ ನೋಟ್‌ನ ಜೋಡಿ ಉಂಗುರಗಳು:
ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ? ಇಷ್ಟ ಇಲ್ಲ ಎನ್ನುವವರನ್ನು ಹುಡುಕುವುದೂ ಕಷ್ಟ. ಸಂಗೀತವನ್ನು ಇಷ್ಟ ಪಡುವ ಜೋಡಿಗಳು ತಮ್ಮ ಪ್ರೇಮಿಗಳಿಗೆ ಸಂಗೀತದ ಟಿಪ್ಪಣಿಗಳನ್ನು ನಮೂದಿಸಿರುವ ವಿನ್ಯಾಸದ ಉಂಗುರ ನೀಡಿದರೆ ಚೆನ್ನಾಗಿರುತ್ತದೆ.
ನಿಮಗೂ ನಿಮ್ಮ ಪ್ರೇಮಿಗೂ ಈ ರೀತಿಯಾಗಿ ತಮ್ಮ ತಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಉಡುಗೊರೆ ನೀಡಿ, ಈ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿಕೊಳ್ಳಿ.