– ಯೋಜನೆಯಿಂದ ರೈತರಿಗೆ ಅನುಕೂಲ
ವಿಜಯಪುರ: ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದ್ದು, ಇದು ಹಗಲು ದರೋಡೆ ಮಾಡುವ ಯೋಜನೆಯಾಗಿದೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರಧಾನಮಂತ್ರಿ ಮೋದಿ ಸರ್ಕಾರದ ಮೂರು ವರ್ಷದ ಸಂಭ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಿಂದ 2015ರಲ್ಲಿ ಸ್ಮಾರ್ಟ್ ಸಿಟಿ ಘೋಷಣೆ ಆಗಿದ್ದು, ಈ ಯೋಜನೆಗೆ 46 ಸಾವಿರ ಕೋಟಿ ಹಣ ನೀಡುವುದಾಗಿ ಮೋದಿಜೀ ಹೇಳಿದ್ರು. ಆದ್ರೆ ನನ್ನ ಮಾಹಿತಿ ಪ್ರಕಾರ ಕೇಂದ್ರ ಇದುವರೆಗೂ 200 ಕೋಟಿನೂ ಕೊಟ್ಟಿಲ್ಲ. ಅದಕ್ಕಾಗಿ ಮೋದಿಯವರ ಮೂರು ವರ್ಷದ ಸಾಧನೆ ಏನೂ ಇಲ್ಲ ಎಂದ್ರು.
Advertisement
ಅಲ್ಲದೇ, ಕಾಂಗ್ರೆಸ್ ಮುಖಂಡ ಎಚ್ ವಿಶ್ವನಾಥ್ ಮಾನಸಿಕವಾಗಿ ಜೆಡಿಎಸ್ ನಲ್ಲಿದ್ದಾರೆ. ಮುಂದಿನ ತಿಂಗಳು ಅಧಿಕೃತವಾಗಿ ಜೆಡಿಎಸ್ ಸೆರಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಶ್ವನಾಥ ಪರ್ಯಾಯವಲ್ಲ, ಅವರು ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿ. ಹೀಗಾಗಿ ಅವರು ಜೆಡಿಎಸ್ ಸೇರಿದರೆ ಅಪ್ಪ ಮಕ್ಕಳ ಪಕ್ಷ ಅನ್ನೋದಾದರು ಕಡಿಮೆ ಅಗುತ್ತೆ ಅಂತಾ ಹೇಳಿದ್ರು.
Advertisement
ಇದನ್ನೂ ಓದಿ: ಯಾವ ವಿಕಾಸವೂ ಆಗಿಲ್ಲ, ಅಚ್ಛೇ ದಿನ್ ಎಲ್ಲಿದೆ: ಡಿಕೆ ಶಿವಕುಮಾರ್ ಪ್ರಶ್ನೆ
Advertisement
ಇದೇ ವೇಳೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಈ ಬಾರಿ ಆಡಳಿತಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ,ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡ್ತೇನೆ ಅಂತಾ ಹೇಳಿದ್ರು. ಆದ್ರೆ, ಅಧಿಕಾರಕ್ಕೆ ಬಂದ ಮೇಲೆ ಯಡ್ಡಿಯೂರಪ್ಪ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಾ ಎಂದು ವಿಧಾನ ಸಭೆಯ ಕಲಾಪದಲ್ಲಿ ಹೇಳಿದ್ರು. ಈಗ ಮತ್ತೆ ಅದೇ ರೀತಿ ರಾಗ ಎಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
Advertisement
ಅಲ್ಲದೇ, ಈ ಬಾರಿಯಾದರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ನಿಜವಾಗಿ ರೈತರ ಸಾಲ ಮನ್ನಾ ಮಾಡ್ತಾರಾ ಇಲ್ವಾ ಅನ್ನೋದು ಜನರಿಗೆ ಸ್ಪಷ್ಟಪಡಿಸಬೇಕೆಂದು ಎಚ್‍ಡಿಕೆ ಸವಾಲು ಹಾಕಿದ್ರು.