– ಬುದ್ಗಾಮ್ ಕ್ಷೇತ್ರ ತ್ಯಜಿಸಿದ ಜಮ್ಮು & ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ 6 ಮಂದಿ ವಲಸೆ ಕಾರ್ಮಿಕರು ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಒಂದು ದಿನದ ಹಿಂದೆಯಷ್ಟೇ ನಡೆದಿದೆ. ಈ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಜೀವನಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು ಮತ್ತು ಒಬ್ಬ ವೈದ್ಯರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದಾಳಿಯಿಂದ ಭಯೋತ್ಪಾದಕರು (Terror Attack) ಏನನ್ನು ಸಾಧಿಸುತ್ತಾರೆ? ಇಂತಹ ದಾಳಿಗಳಿಂದ ಪಾಕಿಸ್ತಾನವನ್ನು ಇಲ್ಲಿ ಸೃಷ್ಟಿಸಬಹುದು ಎಂದು ಭಾವಿಸುತ್ತಾರೆಯೇ? ದಾಳಿಗಳು ನಡೆದ ಮಾತ್ರಕ್ಕೆ ಕಾಶ್ಮೀರ ಪಾಕಿಸ್ತಾನ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನ.19ರ ವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಉಗ್ರ ಪನ್ನುನ್ ಬೆದರಿಕೆ
Advertisement
Advertisement
ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಲವು ವರ್ಷಗಳಿಂದ ಉಗ್ರರ ದಾಳಿಗೆ ಸಾಕ್ಷಿಯಾಗಿದೆ. ಇದನ್ನು ಯಾವಾಗ ಕೊನೆಗೊಳಿಸಬಹುದು ಎಂಬುದರ ಕುರಿತು ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಪಾಕಿಸ್ತಾನ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಲು ಉತ್ಸುಕವಾಗಿದ್ದರೆ, ಇಂತಹ ದಾಳಿಗಳನ್ನು ನಿಲ್ಲಿಸಬೇಕು. ಏಕೆಂದರೆ ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಅಮಾಯಕರ ಹತ್ಯೆಯಿಂದ ಮಾತುಕತೆ ಹೇಗೆ ಸಾಧ್ಯ? ಇಂತಹ ಭಯೋತ್ಪಾದಕ ದಾಳಿಗಳು ನಮ್ಮೆಲರ ಮೇಲೆ ಪರಿಣಾಮ ಬೀರುತ್ತದೆ. ಪಾಕಿಸ್ತಾನಕ್ಕೆ ಈಗಲೂ ಹೇಳುತ್ತಿದ್ದೇನೆ ಇಂತಹ ದಾಳಿಗಳನ್ನು ನಿಲ್ಲಿಸಿ, ಗೌರವದಿಂದ ಬಾಳಿ ಬದುಕೋಣ ಎಂದು ಮನವಿ ಮಾಡಿದ್ದಾರೆ.
Advertisement
Advertisement
ವಲಸೆ ಕಾರ್ಮಿಕರ ಹತ್ಯೆಯನ್ನು ಉಗ್ರರ ದಾಳಿ ಎಂದ ಸಿಎಂ:
ಈ ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ (Omar Abdullah) ʻಉಗ್ರರ ದಾಳಿʼ ಕರೆದಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ J&K ಸಿಎಂ, ಸೋನಾಮಾರ್ಗ್ ಪ್ರದೇಶದ ಗಗಾನ್‌ಗೀರ್‌ನಲ್ಲಿ ಸ್ಥಳೀಯರಲ್ಲದ ವಲಸೆ ಕಾರ್ಮಿಕರ ಮೇಲೆ ಉಗ್ರರ ಭೀಕರ ಮತ್ತು ಹೇಡಿತನದ ದಾಳಿಯ ಅತ್ಯಂತ ದುಃಖದ ಸುದ್ದಿ. ಉಗ್ರರ ದಾಳಿಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ದಾಳಿಉನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪ ತಿಳಿಸುತ್ತೇನೆ. ಇನ್ನೂ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೀಘ್ರವೇ ಅವರು ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.
ಒಮಾರ್ ಅಬ್ದುಲ್ಲಾ ಅವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ʻಭಯೋತ್ಪಾದಕರುʼ ಅನ್ನುವ ಬದಲಿಗೆ, ಉಗ್ರರು ಎಂಬ ಪದವನ್ನು ಏಕೆ ಆಯ್ಕೆ ಮಾಡಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮುಫ್ತಿ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಸಿದ್ದಾರೆ. ಇದನ್ನೂ ಓದಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು
ಬಡ್‌ಗಾಂವ್ ಕ್ಷೇತ್ರಕ್ಕೆ ಒಮರ್ ಅಬ್ದುಲ್ಲಾ ಗುಡ್‌ಬೈ:
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಮವಾರ ಬುದ್ಗಾಮ್ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಭದ್ರಕೋಟೆಯಾಗಿರುವ ಗಂದರ್‌ಬಾಲ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ದಶಕದ ನಂತರ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ, ಗಂದರ್‌ಬಲ್ ಮತ್ತು ಬುದ್ಗಾಮ್ ಎರಡೂ ಕ್ಷೇತ್ರಗಳಲ್ಲೂ ಪ್ರತಿನಿಧಿಸಿ ಗೆದ್ದಿದ್ದರು. ಗಂದರ್‌ಬಲ್‌ನಲ್ಲಿ ಪಿಡಿಪಿಯ ಬಶೀರ್ ಅಹ್ಮದ್ ಮಿರ್ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಬುದ್ಗಾಮ್ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಮೀರ್ ವಿರುದ್ಧ 10,574 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಭದ್ರಕೋಟೆಯನ್ನು ಉಳಿಸಿಕೊಂಡು ಬುದ್ಗಾಮ್ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದ್ದಾರೆ. ಇದನ್ನೂ ಓದಿ: ಕೌರವರನ್ನು ಶಕುನಿ ಮುಗಿಸಿದಂತೆ ಸಿದ್ದರಾಮಯ್ಯರನ್ನು ಬೈರತಿ ಸುರೇಶ್ ಮುಗಿಸುತ್ತಿದ್ದಾರೆ: ಕರಂದ್ಲಾಜೆ