ಶ್ರೀನಗರ: ಕಾಶ್ಮೀರಿ ಪಂಡಿತರ ಮೇಲಿನ ಪ್ರತಿಯೊಂದು ದಾಳಿಯು ಕಾಶ್ಮೀರದ ಆತ್ಮದ ಮೇಲೆಯೇ ದಾಳಿ ಮಾಡಿದಂತಾಗುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದರು.
ಸಂವಾದದಲ್ಲಿ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರ ಹತ್ಯೆಗಳು ಕಣಿವೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಇದರ ವಿರುದ್ಧವಾಗಿ ಸರ್ಕಾರದ ಹೇಳಿಕೆಯನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪಂಡಿತ ಸಹೋದರರ ಮೇಲಿನ ಪ್ರತಿಯೊಂದು ದಾಳಿಯು ಕಾಶ್ಮೀರದ ಆತ್ಮದ ಮೇಲಿನ ದಾಳಿಯಾಗಿದೆ. ಕಾಶ್ಮೀರಿ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರು ಇಬ್ಬರೂ ಅಕ್ಕಪಕ್ಕದಲ್ಲಿ ವಾಸಿಸುವ ಸಮಯವನ್ನು ಎದುರು ನೋಡುತ್ತಿದ್ದೇನೆ. ಆದರೆ ಪ್ರಸ್ತುತ ಸರ್ಕಾರವು ಕೇವಲ ಆಡಂಬರ, ಪ್ರದರ್ಶನ ತೋರಿಸುತ್ತಿದೆಯೇ ವಿನಃ ಮತ್ತು ಶಾಶ್ವತ ವಾಪಸಾತಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಯಾವುದೇ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹ್ಯಾರೀಸ್ ಅಂಧ ದರ್ಬಾರ್- ಗ್ರಂಥಾಲಯದ ಜಾಗದಲ್ಲಿ ಶಾಸಕರ ಕಚೇರಿ!
Advertisement
Advertisement
ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರ ಮತ್ತು ಪೊಲೀಸರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿರುವ ಸರ್ಕಾರವು ರಾಜಕೀಯ ಭರವಸೆಯನ್ನು ನೀಡುತ್ತಿದೆಯೇ ಹೊರತಾಗಿ ಕಾಶ್ಮೀರದಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸಲು ಏನನ್ನು ಮಾಡಿಲ್ಲ ಎಂದ ಅವರು, ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಸಿಖ್ಖರು ಮತ್ತು ಇತರೆ ಅಲ್ಪ ಸಂಖ್ಯಾತರು ಕಾಶ್ಮೀರದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಭಾಗವಾಗಿದ್ದಾರೆ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತು ದರೋಡೆ ಗ್ಯಾಂಗ್
ಗುರುವಾರ ಚದೂರದಲ್ಲಿರುವ ತಹಸಿಲ್ದಾರ್ ಕಚೇರಿಗೆ ಭಯೋತ್ಪಾದಕರು ನುಗ್ಗಿ ಗುಮಾಸ್ತ ರಾಹುಲ್ ಭಟ್ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ದಿನದ ನಂತರ, ಜಿಲ್ಲೆಯ ಗುಡೂರದಲ್ಲಿ ಕಾನ್‍ಸ್ಟೆಬಲ್ ರಿಯಾಜ್ ಅಹ್ಮದ್ ಥೋಕರ್ ಮೇಲೆ ಗುಂಡು ಹಾರಿಸಲಾಗಿತ್ತು. ಆಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.