ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ

Public TV
1 Min Read
Farooq Abdullah

ಶ್ರೀನಗರ: ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿರುವ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾವನ್ನು ನಿಷೇಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಒತ್ತಾಯಿಸಿದ್ದಾರೆ.

ಆಧಾರರಹಿತ ಸನ್ನಿವೇಶಗಳನ್ನು ಸಿನಿಮಾ ಒಳಗೊಂಡಿದೆ. ನಾವು ಎಲ್‌ಜಿ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವುದೇ ಈ ಸಿನಿಮಾದ ಉದ್ದೇಶ. ಪ್ರವಾಸಿಗರು ಕಣಿವೆಗೆ ಭೇಟಿ ನೀಡುತ್ತಿದ್ದರೆ, ನಿತ್ಯ ಅವರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಕಾರ್ಯಾಚರಣೆ- ಸ್ವಾತಂತ್ರ್ಯ ಭಾರತದ ಅತಿದೊಡ್ಡ ವಿನಾಶ: ಕೇಜ್ರಿವಾಲ್

the kashmir files 4

ನಾವು ಒಬ್ಬರಿಗೊಬ್ಬರು ಹತ್ತಿರವಾಗಬೇಕಾದರೆ, ಈ ದ್ವೇಷ ಕೊನೆಗೊಳ್ಳಬೇಕು. ಮುಸಲ್ಮಾನನೊಬ್ಬ ಹಿಂದೂ ವ್ಯಕ್ತಿಯನ್ನು ಕೊಂದು ಅವನ ರಕ್ತ ಮೆತ್ತಿಕೊಂಡಿದ್ದ ಅಕ್ಕಿಯನ್ನು ಅವನ ಹೆಂಡತಿಗೆ ತಿನ್ನಲು ಹೇಳುವ ದೃಶ್ಯ ಸಿನಿಮಾದಲ್ಲಿದೆ. ಇದು ಆಧಾರರಹಿತ ಚಲನಚಿತ್ರವಾಗಿದೆ. ಈ ಸಿನಿಮಾ ದೇಶದಲ್ಲಿ ದ್ವೇಷವನ್ನು ಬಿತ್ತುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕಾರಿಯಾಗುವ ಎಲ್ಲದರೊಂದಿಗೂ ನಿಲ್ಲಿರಿ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

the kashmir files 8

ಕಾಶ್ಮೀರಿ ಪಂಡಿತ್ ಮತ್ತು ಸರ್ಕಾರಿ ನೌಕರ ರಾಹುಲ್ ಭಟ್ ಅವರು ಈಚೆಗೆ ಉಗ್ರರ ಗುಂಡಿಗೆ ಹತ್ಯೆಯಾದರು. ಹತ್ಯೆಗೆ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *