ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದು, ತಾನು ಬಿಸಿಸಿಐ ಅಧ್ಯಕ್ಷ ಅಥವಾ ತಂಡದ ರೆಗ್ಯುಲರ್ ನಾಯಕನಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಪಂದ್ಯದ ಕುರಿತು ಮಾಧ್ಯಮಗಳ ಎದುರು ಮಾಹಿತಿ ನೀಡಲು ಆಗಮಿಸಿದ್ದ ರೋಹಿತ್ ಅವರಿಗೆ ಸುದ್ದಿಗೋಷ್ಠಿಯ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಕೇಳಿ ಬಂದ ವಿಮರ್ಶೆಗಳ ಕುರಿತ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆ ಎದುರಾಗುತ್ತಿದಂತೆ ರೋಹಿತ್ ಗರಂ ಆಗಿ ಮಾತನಾಡಿದರು.
Advertisement
Relaxed and ready – mood in the camp in today's training in Delhi ???????????????????????? #TeamIndia #INDvBAN @Paytm pic.twitter.com/F9JVcu0IOP
— BCCI (@BCCI) November 1, 2019
Advertisement
ಮೊದಲು ಅನುಷ್ಕಾ ಶರ್ಮಾರ ಅವರ ವಿಮರ್ಶೆ ಮಾಡಿ ಹೇಳಿಕೆ ನೀಡಿದ್ದ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್, ಅನುಷ್ಕಾ ಶರ್ಮಾ ಖಡಕ್ ಉತ್ತರ ನೀಡುತ್ತಿದಂತೆ ಕ್ಷಮೆ ಕೋರಿದ್ದರು. ಈ ಬೆಳವಣಿಗೆಗಳ ಬಗ್ಗೆ ರೋಹಿತ್ ರನ್ನು ಪ್ರಶ್ನಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ರೋಹಿತ್, ನಾನು ಬಿಸಿಸಿಐ ಅಧ್ಯಕ್ಷ, ತಂಡದ ರೆಗ್ಯುಲರ್ ಕ್ಯಾಪ್ಟನ್ ಕೂಡ ಅಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡುವುದು ಏನಿದೆ? ಈ ಬಗ್ಗೆ ನೀವು ನೇರವಾಗಿ ಫಾರೂಖ್ ಅವರನ್ನೇ ಪ್ರಶ್ನೆ ಮಾಡಿ. ಅವರು ಏನು ಹೇಳಿದ್ದಾರೆ ಎಂಬುವುದು ತಿಳಿಯುತ್ತದೆ. ನಾನು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ: ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್
Advertisement
Advertisement
ವಿಶ್ವ ದಾಖಲೆ ಸನಿಹ: ಇತ್ತ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಳ್ಳಲು ರೋಹಿತ್‌ಗೆ 8 ರನ್ ಗಳ ಅಗತ್ಯವಿದೆ. ಸದ್ಯ 2,450 ರನ್ ಗಳಿರುವ ಕೊಹ್ಲಿ ನಂ.1 ಪಟ್ಟದಲ್ಲಿದ್ದು, ರೋಹಿತ್ 2,443 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ರೋಹಿತ್, ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆದಿದ್ದಾರೆ.
20 seconds of Shivam Dube ???????????????? #TeamIndia ???????????????? #INDvBAN @Paytm pic.twitter.com/yWiVUpDQ8f
— BCCI (@BCCI) November 2, 2019