ಹುಬ್ಬಳ್ಳಿ: ಜಿಲ್ಲೆಯಲ್ಲಿ ರೈತರ (Farmers) ಮಕ್ಕಳು ಮದುವೆಯಾಗಲು (Marriage) ಹೆಣ್ಣು ಕೊಡುತ್ತಿಲ್ಲ. ಸರ್ಕಾರ (Government) ಈ ಬಗ್ಗೆ ಜಾಗೃತಿ ಮೂಡಿಸುವಂತೆ ರೈತ ಪೋಷಕರು ಹಾಗೂ ಮಕ್ಕಳು ಮನವಿ ಮಾಡಿದ್ದಾರೆ.
ಸರ್ಕಾರ ಜಾಗೃತಿ ಮೂಡಿಸಬೇಕೆಂದು ಧಾರವಾಡ ಜಿಲ್ಲೆಯ ಹೊಸಳ್ಳಿ ಗ್ರಾಮಸ್ಥರು ಕುಂದಗೋಳ ತಹಶಿಲ್ದಾರ್‌ಗೆ ಗ್ರಾಮ ವಾಸ್ತವ್ಯ ವೇಳೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ – 162 ಮಂದಿ ಸಾವು, 700ಕ್ಕೂ ಅಧಿಕ ಮಂದಿಗೆ ಗಾಯ
Advertisement
Advertisement
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗಾಗಿ ಮದುವೆಯಾಗಲು ಹೆಣ್ಣು ಕೊಡೋದಕ್ಕೆ ನಿರಾಕರಿಸುತ್ತಿದ್ದಾರೆ. ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ. ಆದ್ದರಿಂದ ಸರ್ಕಾರ ರೈತರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿನಂತಿ ಮಾಡಿದ್ದಾರೆ. ಇದನ್ನೂ ಓದಿ: ಚಳಿಗೆ ನಡುಗಿದ ಬೆಂಗಳೂರು – ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು
Advertisement
Advertisement
ಸರ್ಕಾರ ಅರಿವು ಕಾರ್ಯಕ್ರಮ ಮಾಡಿ ರೈತರ ಮಕ್ಕಳಿಗೆ ಕನ್ಯೆ ಕೊಡಿಸಿ, ಕೃಷಿಗೆ ಉತ್ತೇಜಿಸಬೇಕು. ರೈತ ದೇಶದ ಬೆನ್ನೆಲಬು ಅಂತಾರೆ, ಅನ್ನ ನೀಡಲು ರೈತ ಬೇಕು, ಹೀಗಾಗಿ ನಾವು ಕೃಷಿ ಅವಲಂಬಿಸಿದ್ದೇವೆ ಎಂದು ಕೋರಿದ್ದಾರೆ.