ಕೊಪ್ಪಳ: ಕೆನರಾ ಬ್ಯಾಂಕ್‍ನಲ್ಲಿ ಭತ್ತ ಅಡವಿಟ್ಟ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕೊಟ್ಟ ಸಾಲ ವಾಪಾಸ್ ನೀಡುವಂತೆ ನೋಟೀಸ್ ಕಳುಹಿಸಿರುವ ಬ್ಯಾಂಕ್ ಅಧಿಕಾರಿಗಳು, ಅಡವಿಟ್ಟ ಭತ್ತ ಗೋದಾಮಿನಿಂದ ಮಾಯವಾಗಿವೆ ಅಂತಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಹೊಸಕೇರಾ ಕ್ಯಾಂಪ್ ನಲ್ಲಿನ ಗೋದಾಮಿನಲ್ಲಿಟ್ಟಿರೋ ಭತ್ತದ ಮೂಟೆಗಳು ನಾಪತ್ತೆಯಾಗಿವೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಗೋದಾಮು ಮಾಲೀಕರು ಶಾಮೀಲಾಗಿ ಭತ್ತದ ಚೀಲ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. 2015ರಲ್ಲಿ ಸಿ.ಎಚ್ ಸುಬ್ರಮಣ್ಯಂ ಸೇರಿ ಐವರು ರೈತರು ತಲಾ 2500ರಂತೆ ಸುಮಾರು 12 ಸಾವಿರ ಭತ್ತದ ಮೂಟೆಯನ್ನು ಕೆನರಾ ಬ್ಯಾಂಕ್ ನಲ್ಲಿ ಅಡವಿಟ್ಟು ತಲಾ 25 ಲಕ್ಷ ಸಾಲ ಪಡೆದಿದ್ರು. ಆಗ ಕೆನರಾ ಬ್ಯಾಂಕ್ ತನ್ನ ಆಧೀನದಲ್ಲಿದ್ದ ಆದಿನಾರಾಯಣ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಈ ಎಲ್ಲ ಭತ್ತದ ಮೂಟೆ ಸಂಗ್ರಹಿಸಿತ್ತು.
Advertisement
Advertisement
ಹಿಂದಿನ ವರ್ಷ ರೈತರು ಸಾಲ ವಾಪಾಸ್ ಮಾಡಿಲ್ಲ. ಇದ್ರಿಂದ ಕೆನರಾ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡಿದ್ದಾರೆ. ಆಗ ರೈತರು ತಾವು ಅಡವಿಟ್ಟ ಭತ್ತದ ಮೂಟೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರೈತರು ಖರೀದಿದಾರರನ್ನು ಕರೆದುಕೊಂಡು ಹೋದಾಗ ಗೋದಾಮಿನಲ್ಲಿ ಭತ್ತದ ಮೂಟೆಗಳೇ ಮಾಯವಾಗಿರೋದು ಬೆಳಕಿಗೆ ಬಂದಿದೆ.
Advertisement
Advertisement
ಗೋದಾಮಿನ ಕೀಲಿ ಬ್ಯಾಂಕ್ ಮ್ಯಾನೇಜರ್ ಬಳಿಯೇ ಇರುತ್ತದೆ. ಗೋದಾಮಿನಿಂದ ಬರೋಬ್ಬರಿ 30 ಸಾವಿರ ಭತ್ತದ ಮೂಟೆಗಳು ಮಾಯವಾಗಿವೆ ಅನ್ನೋ ಆರೋಪವಿದೆ. ಆದ್ರೆ ಬ್ಯಾಂಕ್ ಅಧಿಕಾರಿಗಳು ಗೋದಾಮಿನ ಮಾಲೀಕನೇ ಭತ್ತದ ಮೂಟೆಯನ್ನ ದರೋಡೆ ಮಾಡಿದ್ದಾರೆ ಅಂತಿದ್ದಾರೆ.