ಮುಂಬೈ: ಕೃಷಿ ಕೆಲಸಕ್ಕೆ ಹಲವು ಯಂತ್ರಗಳು ಬಂದಿದೆ. ಆದರೂ ರೈತ ಮಾತ್ರ ಸಾಂಪ್ರದಾಯಿಕ ಕೆಲವು ಸಾಧನಗಳನ್ನು ಬಳಸಿಕೊಂಡು ಉಳುಮೆ ಮಾಡುತ್ತಾನೆ. ಇಲ್ಲೊಬ್ಬ ರೈತ ಹಲವು ವರ್ಷಗಳಿಂದ ಸಾಕುತ್ತಿದ್ದ ಕುದುರೆಗಳಿಂದ ಹೊಲ ಉಳುಮೆ ತರಬೇತಿ ಕೊಟ್ಟು ಕೃಷಿ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾನೆ.
ಹೊಲ ಉಳುಮೆ ಮಾಡಲು ಸಾಮಾನ್ಯವಾಗಿ ಎತ್ತು, ಎಮ್ಮೆ, ಕೋಣಗಳ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ರೈತರೇ ನೇಗಿಲಿಗೆ ಹೆಗಲು ಕೊಟ್ಟು ಉಳುಮೆ ಮಾಡುತ್ತಾರೆ. ಮಹಾರಾಷ್ಟ್ರದ ರೈತ ಎರಡು ಕುದುರೆಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಇದರ ಹಿಂದೆ ಒಂದು ಒಂದು ಕಾರಣವೂ ಇದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್
Advertisement
Advertisement
ಟ್ರ್ಯಾಕ್ಟರ್ ತಂದು ಹೊಲ ಉಳುಮೆ ಮಾಡಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ರೈತ ತನ್ನ ಸಾಕು ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ನೀಡಿದ್ದಾನೆ. ಅಮರಾವತಿ ಜಿಲ್ಲೆಯ ವಾಸೀಂ ತಾಲೂಕಿನ ಶೆಲ್ಗಾಂವ್ ಘುಗೆ ಗ್ರಾಮದ ಕೃಷಿಕ ಬಾಬುರಾವ್ ಸೂರ್ಯಭಾನ್ ಧಂಗರ್ ಕೃಷಿ ಕಾರ್ಯಕ್ಕೆ ಕುದುರೆ ಬಳಕೆ ಮಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
Advertisement
ಈ ಕುರಿತಾಗಿ ಮಾತನಾಡಿದ ರೈತ ಬಾಬುರಾವ್, ಟ್ರ್ಯಾಕ್ಟರ್ ಬಳಸಿ ಕೃಷಿ ಮಾಡುವುದು ತುಂಬಾ ದುಬಾರಿ ಹಾಗೂ ಸಮಯಕ್ಕೆ ಸರಿಯಾಗಿ ಟ್ರ್ಯಾಕ್ಟರೂ ಸಿಗುವುದಿಲ್ಲ. ರಾಜ ಮತ್ತು ತುಳಸಾ ಎಂಬ ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ಕೊಟ್ಟು ಅವುಗಳನ್ನು ಬಳಕೆ ಮಾಡುತ್ತಿದ್ದೇನೆ. ಕೆಲ ವರ್ಷಗಳ ಹಿಂದೆ ಈ ಕುದುರೆಗಳನ್ನು ಖರೀದಿಸಿ ಸಾಕುತ್ತಿದ್ದೆನೆ ಎಂದು ಹೇಳಿದ್ದಾರೆ.