ಧಾರವಾಡ: ಈ ಹಿಂದಿನ ಸರ್ಕಾರಗಳೆಲ್ಲ ರಾಜ್ಯದ ರೈತರಿಗೆ (Farmers) ಅನೇಕ ಯೋಜನೆಗಳ ಕೊಡುಗೆ ನೀಡಿದ್ದವು. ಆದ್ರೆ ಹಿಂದಿನ ಸರ್ಕಾರಗಳ ಆದ್ಯತೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದ್ದು, ಆತ್ಮಹತ್ಯೆಯೊಂದೇ ದಾರಿಯಾಗಿದೆ. ಬಹಳಷ್ಟು ಸರ್ಕಾರಗಳು ರೈತರ ಆತ್ಮಹತ್ಯೆ ತಡೆಯಲು ಪ್ರಯತ್ನ ಮಾಡಿವೆ. ಆದ್ರೆ ಕಾಂಗ್ರೆಸ್ (Congress) ಬಂದಮೇಲೆ ಮತ್ತೆ ರೈತ ಆತ್ಮಹತ್ಯೆ ಶುರುವಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಾಲಿ ಶಾಸಕ ಜಿ.ಟಿ ದೇವೇಗೌಡ (GT Devegowda) ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರ (BJP Union Government) ಹಾಗೂ ಹಿಂದಿನ ರಾಜ್ಯ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ
Advertisement
Advertisement
ವಿದ್ಯುತ್ ಇಲ್ಲದೇ ರೈತರು ಪರದಾಡುವಂತಾಗಿದೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಕರೆಂಟ್ ಇಲ್ಲ, ಬರ ಪರಹಾರ ಇಲ್ಲ, ಬೆಳೆ ನಷ್ಟಕ್ಕೆ ಪರಿಹಾರ ಇಲ್ಲ. ರಾಜ್ಯ ಕತ್ತಲೆಯಲ್ಲಿ ಕಳೆಯುತ್ತಿದೆ. 135 ಜನ ಗೆದ್ದು ಬಹುಮತದ ಸರ್ಕಾರ ಬಂದಿದೆ. ಆದರೂ ಏನೂ ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರೇ 5 ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಜನರ ಅಭಿವೃದ್ಧಿಗೆ ಹಣ ಇಲ್ಲ ಅಂತಾ ಆರೋಪ ಮಾಡಿದ್ದಾರೆ. ರಾಜು ಕಾಗೆ ಸಹ ಆರೋಪ ಮಾಡಿದ್ದಾರೆ. ಎಂದೂ ನೋಡಿರದ ಕೆಟ್ಟ ಸರ್ಕಾರ ಇದು. ಯಾವುದಕ್ಕೂ ಜವಾಬ್ದಾರಿಯ ಉತ್ತರವಿಲ್ಲ. ಕಾವೇರಿ ನೀರು ಕೇಳಿದ ತಕ್ಷಣ ತಮಿಳುನಾಡಿಗೆ ಹರಿಸಿಬಿಟ್ಟರು. ತಾವು ನೀರು ಕೊಟ್ಟು, ಮೋದಿಯನ್ನ ಕೇಳಿ ಅಂತಾರೆ. ಈಗ 5 ಗ್ಯಾರಂಟಿ ಕೊಟ್ಟು ಎಂಪಿ ಚುನಾವಣೆ 20 ಸ್ಥಾನ ಗೆಲ್ಲಲು ಹೊರಟಿದ್ದಾರೆ ಎಂದು ಅಸದಮಾಧಾನ ಹೊರಹಾಕಿದ್ದಾರೆ.
Advertisement
ರಾಜ್ಯದಲ್ಲಿ ಬರಗಾಲ ಬಂದಾಗಿದೆ, ವಿದ್ಯುತ್ ಕೊಡಿ ಅಂದ್ರೆ, ಉಪಮುಖ್ಯಮಂತ್ರಿಗಳು ಕೇಂದ್ರದ ಕಡೆ ಕೈ ತೋರಿಸ್ತಾರೆ. ಸಿಎಂ ಕೂಡಾ ಕೇಂದ್ರದ ಕಡೆ ಕೈ ತೋರಿಸ್ತಾರೆ. ವಿದ್ಯುತ್ ಬೇಕಾದಷ್ಟಿದೆ, ಕೇಂದ್ರದ ಗ್ರಿಡ್‌ಗೆ ಇವರು ದುಡ್ಡು ಕೊಡಬೇಕಲ್ವಾ? ರಾಜ್ಯ ಸರ್ಕಾರ ದುಡ್ಡು ಕೊಟ್ಟರೆ ಅವರು ವಿದ್ಯುತ್ ಕೊಡ್ತಾರೆ. ಹಿಂದೆ ನಮ್ಮಲ್ಲಿ ರೈತರಿಗೆ ಸೋಲಾರ್ ಸೇರಿ 7 ಗಂಟೆ 3 ಫೇಸ್ ವಿದ್ಯುತ್ ಕೊಡ್ತಾ ಇದ್ವಿ. ಆಗ ರೈತರು 2 ಫೆಸ್ ಎರಡು ಗಂಟೆ ತಡವಾದರೆ ಬಾಯಿ ಬಡಿತಿದ್ರು, ನಂತರ 7 ಗಂಟೆಗಳ ಕಾಲ 3 ಫೆಸ್ ವಿದ್ಯುತ್ ಅನ್ನು ರೈತರ ಪಂಪ್ ಸೆಟ್‌ಗಳಿಗೆ ಕೊಡಲಾಗುತ್ತಿತ್ತು. ಆದ್ರೆ ಇವತ್ತು ಅವರೇ ಸ್ಥಗಿತ ಮಾಡಿದ್ದೇವೆ ಎಂದು ಹೇಳ್ತಾರೆ ವಿದ್ಯುತ್ ಇಲ್ಲ ಅಂದ್ರೆ, ರೈತರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು
ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ರಾಹಿಂ ಅವರು ಪಕ್ಷ ಬಿಡುವುದಿಲ್ಲ. ಬಿಜೆಪಿ ಜೊತೆ ಸೀಟ್ ಹಂಚಿಕೆ ವಿಚಾರವಾಗಿ ತೀರ್ಮಾನ ಆಗಿಲ್ಲ ಅಷ್ಟೇ. ಎನ್‌ಡಿಎ ಜೊತೆಗೆ ಎಲ್ಲರೂ ಹೋಗಬೇಕು ಎಂದ ಅವರು ಮುಖ್ಯಮಂತ್ರಿಗಳ ಮೇಲೆ ಪ್ರೀತಿ ಹಿಂದೆಯು ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದ್ರೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ್ದಾರೆ.
Web Stories