ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಮಹಾಮಳೆಯಿಂದ ರಾಜ್ಯಾದ್ಯಂತ ಭಾರೀ ಪ್ರಮಾಣದ ಬೆಳೆ ಹಾನಿ ಆಗಿದೆ. ಹೀಗಾಗಿ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಾಲ ಮನ್ನಾದಿಂದ ಆತ್ಮಹತ್ಯೆಗಳು ಕಡಿಮೆಯಾಗಿದ್ದವು. ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಈಗ ಹೆಚ್ಚಾಗುತ್ತಿವೆ. ರೈತರಿಗೆ ಖರ್ಚು ವೆಚ್ಚದ ಶೇ.75 ರಷ್ಟು ಬೆಳೆಹಾನಿ ಪರಿಹಾರ ನೀಡಿ. ಅಭಿವೃದ್ಧಿ ಕಾಮಗಾರಿ ಬೇಕಾದ್ರೆ ಮುಂದೂಡಿ ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
Advertisement
ಜೆಡಿಎಸ್ ಗಿಂತ ಬಿಜೆಪಿ, ಕಾಂಗ್ರೆಸ್ ಗೆ ಚುನಾವಣೆ ಪ್ರತಿಷ್ಠೆ. ವಿಧಾನಪರಿಷತ್ ಚುನಾವಣೆ ಬಿಜೆಪಿ ಕಾಂಗ್ರೆಸ್ ಗೆ ಪ್ರತಿಷ್ಠೆಯಾಗಿದೆ. 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ಮಾಡ್ತೇನೆ ಎಂದರು. ಇದನ್ನೂ ಓದಿ: ಮೈಸೂರಿನ ಉಸ್ತುವಾರಿ ಬಂದು ಇಲ್ಲಿನ ಜೋಡಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿ ಹೋಗ್ತಾರೆ: ವಾಟಾಳ್
Advertisement
Advertisement
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಟುಕಿದ ಕುಮಾರಸ್ವಾಮಿ, ನನ್ನ ವಿರುದ್ಧ ಮಾತನಾಡಲ್ಲ ಅಂತಲೇ ಸಿದ್ದರಾಮಯ್ಯ ಮಾತನಾಡುತ್ತಾರೆ. 2013 ರ ವಿಧಾನಸಭೆ ಚುನಾವಣೆಯೇ ನನ್ನ ಗುರಿ. ಜನರ ವಿಶ್ವಾಸ ಗಳಿಸುವ ಕಾರ್ಯಕ್ರಮ ರೂಪಿಸುವುದು ನನ್ನ ಗುರಿ. ಜೆಡಿಎಸ್ ಹಾಗೂ ನನ್ನ ಬಗ್ಗೆ ಯಾರೇ ಲಘುವಾಗಿ ಮಾತನಾಡಿದ್ರೂ ಪ್ರತಿಕ್ರಿಯಿಸಲ್ಲ ಎಂದು ಕಟುವಾಗಿ ಹೆಚ್‍ಡಿಕೆ ಹೇಳಿದರು.