ಲಕ್ನೋ: ಉತ್ತರ ಪ್ರದೇಶದ ಬುಲಂದರ್‌ಶಹರ್‌ನ ರೈತರು ಆಲೂಗೆಡ್ಡೆ ಕೃಷಿಯಲ್ಲಿ ಮದ್ಯವನ್ನು ಬಳಸಿ ಸುದ್ದಿಯಾಗಿದ್ದಾರೆ.
ಹೌದು, ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯಲು ನೀರು, ಗೊಬ್ಬರ ಬಳಸುತ್ತಾರೆ. ಆದರೆ ಬುಲಂದರ್‌ಶಹರ್‌ನ ರೈತರು ಮಾತ್ರ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರೈತರು ತಮ್ಮ ಬೆಳೆಗಳು ಹಾನಿಯಾಗಬಾರದೆಂದು ಮದ್ಯವನ್ನು ಔಷಧಿ ರೀತಿ ಬಳಸುತ್ತಿದ್ದಾರೆ.
Advertisement
ಇದನ್ನು ನೋಡಿದ ಕೃಷಿ ತಜ್ಞರು, ಮದ್ಯವನ್ನು ಬೆಳೆಗಳಿಗೆ ಹಾಕುವ ಬದಲು ಸರಿಯಾದ ಔಷಧಿಗಳನ್ನು ಬಳಸಬೇಕು. ಇದರಿಂದ ಬೆಳೆಗೂ ಒಳ್ಳೆಯದು ಮತ್ತು ಅದನ್ನು ಸೇವಿಸುವವರಿಗೂ ಒಳ್ಳೆಯದು ಎಂದು ಹೇಳಿ ಈ ಹೊಸ ವಿಧಾನವನ್ನು ತಿರಸ್ಕರಿಸಿದ್ದಾರೆ. ಹೀಗೆ ಮದ್ಯವನ್ನು ಬಳಸುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಣವನ್ನು ಹಾಳುಮಾಡುವ ವಿಧಾನ. ಇದರಿಂದ ಏನೂ ಉಪಯೋಗವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
Advertisement
Advertisement
ಕೃಷಿ ತಜ್ಞರು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರೂ, ನಾವು ಮಾತ್ರ ಮದ್ಯವನ್ನೇ ಬಳಸಿ ಆಲೂಗಡ್ಡೆ ಬೆಳೆಸುತ್ತೇವೆ ಅದರಿಂದ ನಮಗೆ ಹೆಚ್ಚು ಇಳುವರಿ ಸಿಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ.
Advertisement
ಅದರಲ್ಲೂ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆಗೆ ಮದ್ಯವನ್ನು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾವು ಒಮ್ಮೆ ಈ ವಿಧಾನ ಅನುಸರಿಸೋಣ ಎಂದು ಜನರು ಚರ್ಚಿಸಿದ್ದಾರೆ.
Farmers using liquor to increase potato production in Bulandshahr. Plant Production Officer says, “There's no scientific reason behind use of alcohol as medicine for plants.I appeal to farmers to use right medicines. Farmers experiment with it to boost production, which is wrong pic.twitter.com/Bv6v4tBmZh
— ANI UP/Uttarakhand (@ANINewsUP) December 23, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv