ಮಡಿಕೇರಿ: ಹಲವಾರು ವರ್ಷಗಳಿಂದ ರೈತರ ಜಮೀನಿನ ಪೋಡಿ ದುರಸ್ತಿಯನ್ನು ಮಾಡದೇ ಇಲಾಖೆಯ ಅಧಿಕಾರಿಗಳು ಆಟವಾಡಿಸುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ಇಂದು (ನ.10) ದುರಸ್ತಿ ಮಾಡದಿದ್ದರೆ ವಿಷ ಕುಡಿದು ಸಾಯುತ್ತೇವೆ ಎಂದು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕೊಡಗು (Kodagu) ಜಿಲ್ಲೆಯ ಜಿಲ್ಲೆಯ ಸೋಮವಾರಪೇಟೆಯಲ್ಲಿನ (Somavarapete) ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಲಾಖೆಯ ಅಧಿಕಾರಿಗಳು ನಮ್ಮ ಜಮೀನುಗಳ ಪೋಡಿ ದುರಸ್ತಿ ಮಾಡಿಲ್ಲ. ಇಲಾಖೆಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ಮಾತ್ರ ಮಾಡಿಕೊಡುತ್ತೇವೆ ಎಂದು ಹೇಳಿ ವಾಪಸು ಕಳಿಸುತ್ತಲೇ ಇದ್ದಾರೆ. ಕಳೆದ ಬಾರಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಇನ್ನೂ ಸರಿಪಡಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಜೆಡಿಎಸ್ ಕೋರ್ ಕಮಿಟಿ ಸ್ಥಾನದಿಂದ ಜಿಟಿ ದೇವೇಗೌಡ ಔಟ್ – ಎಂ.ಕೃಷ್ಣಾರೆಡ್ಡಿಗೆ ಮಣೆ ಹಾಕಿದ ಜೆಡಿಎಸ್ ವರಿಷ್ಠರು
ಪೋಡಿ ದುರಸ್ತಿ ಮಾಡದಿದ್ದರೆ ಬ್ಯಾಂಕ್‌ಗಳಲ್ಲಿ ಲೋನ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂದು ಸಂಜೆಯೊಳಗೆ ಸರಿಪಡಿಸಿಕೊಡದೇ ಇದ್ದರೆ ವಿಷ ಕುಡಿಯುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ತಾನು ಸತ್ತರೆ ತನ್ನ ಸಾವಿಗೆ ಕಂದಾಯ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳೇ ನೇರ ಕಾರಣ. ನಾನು ಸತ್ತರು ಪರವಾಗಿಲ್ಲ, ಬೇರೆ ರೈತರಿಗೆ ನ್ಯಾಯ ಸಿಗಬೇಕು ಎಂದು ಕಿಡಿಕಾರಿದ್ದಾರೆ.
ಈ ನಡುವೆ ಸೋಮವಾರಪೇಟೆ ತಹಶೀಲ್ದಾರ್ ರೈತ ಕೃಷ್ಣಪ್ರಸಾದ್ ಅವರನ್ನು ಮನವೊಲಿಸಲು ಮುಂದಾದರು. ಆದರೂ ತಮ್ಮ ಪಟ್ಟು ಬಿಡದೇ ಸಂಜೆಯವರೆಗೆ ಗಡುವು ನೀಡಿದ್ದಾರೆ. ಈ ಬೆನ್ನಲ್ಲೇ ತಹಶೀಲ್ದಾರ್ ಅವರು ಕಂದಾಯ ಸಚಿವರ ವೀಡಿಯೋ ಕಾನ್ಫರೆನ್ಸ್ ಇದೆ. ಈ ವೇಳೆ ತಮ್ಮ ಸಮಸ್ಯೆಯನ್ನು ಗಮನಕ್ಕೆ ತರುತ್ತೇನೆ ಎಂದು ಹೇಳಿ, ತೆರಳಿದ್ದಾರೆ.ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದು ಕುಟುಕಿದ ಶೆಹಜಾದ್ ಪೂನಾವಾಲಾ

