ಹಾವೇರಿ: ಮೆಕ್ಕೆಜೋಳಕ್ಕೆ (Maize) 3,000 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹಾವೇರಿಯಲ್ಲಿ (Haveri) ರೈತರು (Farmers) ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೆಕ್ಕೆಜೋಳಕ್ಕೆ 3,000 ರೂ. ಬೆಲೆ ನೀಡಬೇಕು. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ಕೂಡಲೇ ಖರೀದಿ ಕೇಂದ್ರವನ್ನ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಐದಾರು ಜನರ ಗುಟ್ಟಿನ ವ್ಯಾಪಾರ, ಬಹಿರಂಗವಾಗಿ ಚರ್ಚಿಸಲ್ಲ: ಡಿಕೆಶಿ
ರೈತರ ಹೋರಾಟಕ್ಕೆ ಯಾರು ಸ್ಪಂದನೆ ನೀಡುತ್ತಿಲ್ಲ. ಕೇಂದ್ರ & ರಾಜ್ಯ ಸರ್ಕಾರಗಳು ಜೀವಂತ ಇಲ್ಲ. ನ್ಯಾಯ ಸಿಗುವವರೆಗೂ ನಾವು ಹೋರಾಟ ಕೈಬಿಡಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 20 ದಿನಗಳ ಗಗನಯಾನಕ್ಕೆ 5 ವರ್ಷಗಳ ತರಬೇತಿ ಪಡೆದಿದ್ದೆ: ಶುಭಾಂಶು ಶುಕ್ಲಾ

