ನವದೆಹಲಿ: ಕೂಡಲೇ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಜಾರಿ ಮಾಡಬೇಕು ಮತ್ತು ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಕ್ಕೂ ಅಧಿಕ ರೈತರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಹಾಪಂಚಾಯತ್ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದ್ದು, ಇದರ ಭಾಗವಾಗಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ರೈತರು ಆಗಮಿಸಿದ್ದರು.
Advertisement
Advertisement
ಕರ್ನಾಟಕದಿಂದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಅಡಿಯಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 150ಕ್ಕೂ ಅಧಿಕ ರೈತರು ದೆಹಲಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸುಮಾರು ಇಪ್ಪತ್ತಕ್ಕೂ ಅಧಿಕ ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಎಂಎಸ್‍ಪಿ ಮೇಲಿನ ಕಾನೂನು ಖಾತರಿ, ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದತಿ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ಕೆಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ, ಶಕ್ತಿ ಪ್ರದರ್ಶನ ಸರಿಯಲ್ಲ: ವಿಶ್ವನಾಥ್
Advertisement
Advertisement
ಪ್ರತಿಭಟನೆ ಬಳಿಕ ಮಾತನಾಡಿದ ಕುರಬೂರು ಶಾಂತಕುಮಾರ್, ಎಂಎಸ್‍ಪಿ ಜಾರಿ ಮಾಡುವುದಾಗಿ ಮೋದಿ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಸಮಿತಿಯಲ್ಲಿ ತನ್ನದೇ ಜನರನ್ನು ನಿಯೋಜಿಸಿ ಯಾಮಾರಿಸುತ್ತಿದೆ. ಕೊಟ್ಯಾಧಿಪತಿ ಉದ್ಯಮಿಗಳ ಸಾಲ ಮನ್ನಾ ಆಗುತ್ತಿದೆ. ಈ ಹಿಂದೆ ನೀಡಿದ ಭರವಸೆಯಂತೆ ಕೂಡಲೇ ಎಂಎಸ್‍ಪಿ ಜಾರಿಯಾಗಬೇಕು ರೈತರ ಸಾಲ ಮನ್ನಾ ಆಗಬೇಕು. ಇಲ್ಲದಿದ್ದರೆ ಈ ಹಿಂದೆ ನಡೆಸಿದಂತೆ ವರ್ಷಗಟ್ಟಲೇ ಬೃಹತ್ ಪ್ರತಿಭಟನೆ ನಡೆಸಲಾಗುವುದು ಮೋದಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೊಟ್ಟೆ ಕೇಸ್ – ಸಿದ್ದರಾಮಯ್ಯಗೆ ಈಗ ಝಡ್ ಶ್ರೇಣಿಯ ಭದ್ರತೆ