ಬೆಳಗಾವಿ: ಕಬ್ಬಿನ ಬಾಕಿ ಬೆಲೆಗೆ ಆಗ್ರಹಿಸಿ ರೈತರ ಹೊರಾಟ ತಾರಕಕ್ಕೆ ಏರಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ರೈತರ ಸಭೆ ಕರೆದಿದ್ದಾರೆ. ಇತ್ತ ಚಿಕ್ಕೋಡಿಯಲ್ಲಿ ರೈತರು ಸಿಎಂಗೆ ಒಳ್ಳೆಯ ಬುದ್ಧಿ ಕೊಡು ಅಂತ ದೇವರ ಮೊರೆ ಹೋಗಿದ್ದಾರೆ.
ಕುಮಾರಸ್ವಾಮಿ ರೈತರ ಹದಿನೈದು ವಿವಿಧ ಬೇಡಿಕೆಗಳು ಮತ್ತು ಸಮಸ್ಯೆ ಬಗೆಹರಿಸಲು ಹದಿನೈದು ದಿನಗಳ ಕಾಲ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತರು ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.
ದೇವರೇ ಸಿಎಂ ಕುಮಾರಸ್ವಾಮಿಗೆ ಒಳ್ಳೆಯ ಬುದ್ಧಿ ಕೊಟ್ಟು ರೈತರ ಸಂಕಷ್ಟ ಬಗೆಹರಿಸಲಿ ಎಂದು ನಮಸ್ಕಾರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿರುವ ಇಂದು ಗ್ರಾಮದ ದೇವರಾದ ಮುರಸಿದ್ದೇಶ್ವರ ದೇವಸ್ಥಾನವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಹೊತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಕಬ್ಬಿನ ಬಾಕಿ ಬಿಲ್ ಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಂದು ಐದನೆ ದಿನಕ್ಕೆ ಮುಂದುವರಿದಿದ್ದು, ಸಿಎಂ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟವಾದ ಬಳಿಕವಷ್ಟೆ ಹೋರಾಟದ ರೂಪು ರೇಷೆಗಳು ಏನು ಅನ್ನುವುದು ತಿಳಿದು ಬರಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews