ಬೆಂಗಳೂರು: ಕಾವೇರಿ (Cauvery) ವಿಚಾರ ಕಾಂಗ್ರೆಸ್ ಸರ್ಕಾರದ (Congress Government) ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾಧಿಕಾರದ ಆದೇಶದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡದ ಕಾರಣ ರಾಜ್ಯ ಸರ್ಕಾರ ಅನಿವಾರ್ಯವಾಗಿ ತಮಿಳುನಾಡಿಗೆ (Tamil Nadu) ನೀರು ಹರಿಸತೊಡಗಿದೆ. ಸಹಜವಾಗಿಯೇ ಇದು ಕಾವೇರಿ ಕೊಳ್ಳದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು ರೈತ ಹಿತರಕ್ಷಣಾ ಸಮಿತಿ ಶನಿವಾರ ಮಂಡ್ಯ ಬಂದ್‌ಗೆ (Mandya Bandh) ಕರೆ ನೀಡಿದೆ.
ಈ ಬಂದ್‌ಗೆ ಎಲ್ಲಾ ಸಂಘಟನೆಗಳು ಬೆಂಬಲ ಘೋಷಿಸಿವೆ. ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಲಿದ್ದು, ವಾಹನ ಸಂಚಾರ, ಶಾಲೆ ಕಾಲೇಜು ಬಂದ್ ಆಗಲಿವೆ. ಸರ್ಕಾರಿ ಕಚೇರಿಗಳು ತೆರೆಯವುದು ಅನುಮಾನ. ತುರ್ತು ಮತ್ತು ಅಗತ್ಯ ಸೇವೆಗಳು ಮಾತ್ರ ಮಂಡ್ಯದಲ್ಲಿ ಲಭ್ಯ ಇರುತ್ತವೆ. ಇಂದು ಬೈಕ್ ರ‍್ಯಾಲಿ ಮೂಲಕ ಬಂದ್ ಜಾಗೃತಿ ಮೂಡಿಸಲಾಗಿದೆ. ಇದನ್ನೂ ಓದಿ: ಎನ್‌ಡಿಎ ಕೂಟ ಸೇರಿದ ಜೆಡಿಎಸ್ – ದೋಸ್ತಿ ಲೆಕ್ಕಾಚಾರ ಏನು? ಸೀಟ್ ಹಂಚಿಕೆ ಸೂತ್ರ ಏನು?
ಭಾನುವಾರ ಮದ್ದೂರು (Madduru) ಕೂಡ ಸ್ತಬ್ಧ ಆಗಲಿದೆ. ಈ ಬಂದ್ ದಶಪಥದ ರಸ್ತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳು ಇವೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶನಿವಾರ ಅತ್ತಿಬೆಲೆ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಈಗಾಗಲೇ ತಮಿಳುನಾಡು ಗಡಿಯಲ್ಲಿ ರಸ್ತೆ ತಡೆಗಳು ಶುರುವಾಗಿವೆ. ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರವೇ ತೀರ್ಮಾನಿಸಿದೆ. ಕರವೇ ನಾರಾಯಣಗೌಡರ ಬಣ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಚಿಂತನೆ ನಡೆಸಿದೆ.
ಈ ನಡುವೆ ಬಿಜೆಪಿ (BJP) ಬೆಂಗಳೂರು (Bengaluru) ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]