ಕಾವೇರಿ (Cauvery) ಸಮಸ್ಯೆ ಈಗಿನದ್ದಲ್ಲ. ಆವಾಗಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಸಮಸ್ಯೆ ಎಲ್ಲಿದೆ? ಯಾರು ಮಾಡುತ್ತಿರುವುದು? ಯಾಕೆ ಪರಿಹಾರ ಸಿಗುತ್ತಿಲ್ಲ ಎಂದು ಪ್ರಾಮಾಣಿಕವಾಗಿ ನೋಡಬೇಕಿದೆ. ಯಾವ ರಾಜ್ಯದವರಾದರೂ ಅವರು ರೈತರೆ. ಅದರಲ್ಲಿ ಭೇದ ಭಾವ ಮಾಡಬಾರದು. ಎರಡೂ ಸರಕಾರಗಳು ಕೂತುಕೊಂಡು ಚರ್ಚೆ ಮಾಡಿ ಸಮಸ್ಯೆಯನ್ನು ಸರಿ ಮಾಡಬೇಕು ಎಂದಿದ್ದಾರೆ ನಟ ಶಿವರಾಜ್ ಕುಮಾರ್.
Advertisement
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಕಾವೇರಿ ನದಿ ನೀರು ಹೋರಾಟದ ಕಾರ್ಯಕ್ರಮದಲ್ಲಿ ಶಿವಣ್ಣ (Shivaraj Kumar) ಮಾತನಾಡಿ, ‘ಕಲಾವಿದರ ಹೋರಾಟಕ್ಕೆ ಬರೊಲ್ಲಅಂತೀರಾ. ಕಲಾವಿದರು ಬಂದು ಏನ್ ಮಾಡ್ಬೇಕು?. ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದ್ರೆ ಸಮಸ್ಯೆ ಬಗೆಹರಿಯುತ್ತಾ?. ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು’ ಎಂದರು.
Advertisement
Advertisement
ನಿನ್ನೆಯಷ್ಟೇ ಕೆಲ ಕನ್ನಡ ಪರ ಹೋರಾಟಗಾರರು ತಮಿಳ ನಟ ಸಿದ್ಧಾರ್ಥ ಅವರ ಸಿನಿಮಾ ಪ್ರಚಾರವನ್ನು ಮಾಡಲು ಬಿಟ್ಟಿರಲಿಲ್ಲ. ಈ ನಡೆಗೆ ಶಿವರಾಜ್ ಕುಮಾರ್ ಆಕ್ಷೇಪಣೆ ವ್ಯಕ್ತ ಪಡಿಸಿದರು. ‘ಮೊನ್ನೆ ಕಲಾವಿದರೊಬ್ಬರ ಮಾತನ್ನು ನಿಲ್ಲಿಸಿದ್ರಂತೆ ಅದು ತಪ್ಪು ಅಲ್ವಾ? ಎಂದು ವೇದಿಕೆಯ ಮೇಲೆಯೇ ಪ್ರಶ್ನೆ ಮಾಡಿದರು.
Advertisement
ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ದರ್ಶನ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ವಸಿಷ್ಠ ಸಿಂಹ, ಧ್ರುವ ಸರ್ಜಾ, ಪೂಜಾ ಗಾಂಧಿ, ಶ್ರುತಿ, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.
Web Stories