– ಕರೆಂಟ್‍ಗಾಗಿ ಅನ್ನದಾತರಿಂದ ಪ್ರೊಟೆಸ್ಟ್
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ರಾಜ್ಯ ಸರ್ಕಾರ ಸದ್ದಿಲ್ಲದೇ ಅನಧಿಕೃತ ಲೋಡ್ ಶೆಡ್ಡಿಂಗ್ (LoadShedding) ಜಾರಿ ಮಾಡಿದೆ.
ವಿದ್ಯುತ್ ಅಭಾವದ ನಡ್ವೆಯೂ ಎಲ್ಲಾ ಎಸ್ಕಾಂಗಳು (Escom) ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದೆ. ಆದರೆ ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್‍ಶೆಡ್ಡಿಂಗ್ ಶುರುವಾಗಿದೆ. ಲೋಡ್‍ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ.
ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಕರೆಂಟ್ ಪೂರೈಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ – ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಯಾವ ಜಿಲ್ಲೆಯಲ್ಲಿ ಎಷ್ಟು ಗಂಟೆ ಲೋಡ್ ಶೆಡ್ಡಿಂಗ್..?
ಮಂಡ್ಯ ನಗರ:- 1 – 1.5 ಗಂಟೆ
ಮಂಡ್ಯ ಗ್ರಾಮಾಂತರ:- 16 ಗಂಟೆ
ರಾಯಚೂರು ನಗರ:- 5 – 8 ಗಂಟೆ
ರಾಯಚೂರು ಗ್ರಾಮಾಂತರ:- 7 – 8 ಗಂಟೆ
ಬಾಗಲಕೋಟೆ:- ಕನಿಷ್ಟ 2 ಗಂಟೆ
ತುಮಕೂರು ನಗರ:- 3-4 ಗಂಟೆ
ತುಮಕೂರು ಗ್ರಾಮಾಂತರ:- 5-6 ಗಂಟೆ
ಚಾಮರಾಜನಗರ ನಗರ:- 1 ಗಂಟೆ
ಚಾಮರಾಜನಗರ ಗ್ರಾಮೀಣ :- 4 -5 ಗಂಟೆ
ಚಿತ್ರದುರ್ಗ ನಗರ:- 1 – 1.5 ಗಂಟೆ
ಚಿತ್ರದುರ್ಗ ಗ್ರಾಮಾಂತರ:- 3-4 ಗಂಟೆ
ಹಾವೇರಿ ನಗರ:- 1 – 1.5 ಗಂಟೆ
ಹಾವೇರಿ ಗ್ರಾಮಾಂತರ:- 3- 4 ಗಂಟೆ
ಬಳ್ಳಾರಿ ನಗರ:- 4 ಗಂಟೆ
ಬಳ್ಳಾರಿ ಗ್ರಾಮಾಂತರ:- 10 ಗಂಟೆ
ಶಿವಮೊಗ್ಗ:- ಮಧ್ಯಾಹ್ನದ ವೇಳೆ ಮಾತ್ರ
ರಾಮನಗರ ನಗರ:- 1-2 ಗಂಟೆ
ರಾಮನಗರ ಗ್ರಾಮಾಂತರ:- 4-5ಗಂಟೆ
ಚಿಕ್ಕಬಳ್ಳಾಪುರ ನಗರ:- 3-4 ಗಂಟೆ
ಚಿಕ್ಕಬಳ್ಳಾಪುರ ಗ್ರಾಮಾಂತರ:- 7-8 ಗಂಟೆ
ದಾವಣಗೆರೆ ನಗರ:- 1.30 ಗಂಟೆ
ದಾವಣಗೆರೆ ಗ್ರಾಮಾಂತರ:- 4-5 ಗಂಟೆ
ಯಾದಗಿರಿ ನಗರ:- 2 ಗಂಟೆ
ಯಾದಗಿರಿ ಗ್ರಾಮಾಂತರ:- 6 ಗಂಟೆ
ಬೀದರ್ ನಗರ:- 1 ಗಂಟೆ
ಬೀದರ್ ಗ್ರಾಮಾಂತರ:- 2- 3 ಗಂಟೆ
ಕೋಲಾರ:- 3 ಗಂಟೆ
ಮಳೆ ಇಲ್ಲ, ಬೆಳೆಯಿಲ್ಲ, ಎಲ್ಲ ಕಡೆ ಬರದ ತಾಂಡವ. ಅಂತರ್ಜಲ ಬತ್ತಿ ಬೋರ್‍ವೆಲ್‍ಗಳು ಬತ್ತುತ್ತಿವೆ. ಬರುವ ಅಲ್ಪಸ್ವಲ್ಪ ನೀರನ್ನು ಕೃಷಿಗೆ ಬಳಸಬೇಕೆಂದರೆ ವಿದ್ಯುತ್ ಕಣ್ಣು ಮುಚ್ಚಾಲೆ ಆಟ ಆಡ್ತಿದೆ. ಸಿಂಗಲ್ ಫೇಸ್ ಕೂಡ ತೆಗೆದ ಕಾರಣ ತೋಟದ ಮನೆಗಳಲ್ಲಿ ಕತ್ತಲು ಆವರಿಸುತ್ತಿದೆ. ವಿದ್ಯುತ್ ಕಾಟ ಹಳ್ಳಿ ಜನರನ್ನು ಕಂಗಾಲಾಗುವಂತೆ ಮಾಡಿದೆ. ಸರ್ಕಾರದ ವಿರುದ್ಧ ಅನ್ನದಾತರು ಹಿಡಿ ಶಾಪವನ್ನು ಹಾಕಿದ್ದಾರೆ. 7 ಗಂಟೆ ವಿದ್ಯುತ್ ಕೊಡದಿದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಲಿ. ಇಲ್ಲದಿದ್ರೆ ಇತರ ಗ್ಯಾರಂಟಿಗಳಿಗೆ ಹಣ ಕೊಟ್ಟಂತೆ ರೈತರ ಪಂಪ್‍ಸೆಟ್‍ಗಳಿಗೂ ಹಣ ನಿಗದಿ ಮಾಡಿ ಕೊಡಲಿ ಅಂತಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]