ಯಾದಗಿರಿ: ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಇದೀಗ ಅನ್ನದಾತರಿಗೆ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ (Load Shedding) ಶಾಕ್ ನೀಡಿದೆ.
ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದ ಯಾದಗಿರಿ (Yadagiri) ಜಿಲ್ಲೆಯ ರೈತರ ಕಂಗಾಲಾಗಿದ್ದು, ಐಪಿಸೆಟ್ ಗೆ ಕೇವಲ 3 ಗಂಟೆ 3 ಫೇಸ್ ವಿದ್ಯುತ್ ಪೂರೈಕೆಯಿಂದ ಮಾಡಲಾಗ್ತಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಬೆಳೆಗಳು ಒಣಗುತ್ತಿರೋದ್ರಿಂದ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿ ರೈತರಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ್ ಗ್ರಾಮದ ರೈತ ಚನ್ನಪ್ಪ ತನ್ನ ಜಮೀನಿನಲ್ಲೇ ನಿಂತು, ಬೆಳೆ ಒಣಗುತ್ತಿರೋದನ್ನ ಕಣ್ಣಾರೆ ಕಂಡು ತನ್ನ ನೋವು ತೊಡಿಕೊಂಡಿದ್ದಾನೆ. ರೈತರ ಗೋಳು ಯಾರಿಗೆ ಅರ್ಥವಾಗ್ತದೆ. 6 ಗಂಟೆ ವಿದ್ಯುತ್ ಕೊಟ್ಟು ವೊಲ್ಟೇಜ್ ಸಮಸ್ಯೆ ಮಾಡ್ತಿದ್ದಾರೆ. ಇದರಿಂದಾಗಿ ಬೆಳೆಗೆ ನೀರು ಹರಿಸಲು ಆಗುತ್ತಿಲ್ಲ. ಬರಗಾಲದಿಂದ ತತ್ತರಿಸಿ ರೈತರು ಸಾಯುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ
ರೈತರ ಗೋಳು ಸಿಎಂ ಸೇರಿದಂತೆ ಯಾರಿಗೂ ಅರ್ಥ ಆಗೋದಿಲ್ಲ. ರೈತರು ಬದುಕು ನಡೆಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ಅಂತಾ ರೈತ ಚನ್ನಪ್ಪ ಒತ್ತಾಯಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]