ಕೊಪ್ಪಳ: ರಾಯಚೂರು (Raichur) ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತುಂಗಭದ್ರಾ ಜಲಾಶಯದಿಂದ (Tungabhadra) ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಈ ಕಾಲುವೆಯ ಅಕ್ಕಪಕ್ಕದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳ ಮೂಲಕ ನೀರು ಕಳ್ಳತನ ಮಾಡುತ್ತಿದ್ದಾರೆ.
ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ಸಹ ಮಳೆಯಾಗದೇ ಇರುವುದರಿಂದ ಕೊಪ್ಪಳದ (Koppala) ಕಾರಟಗಿ, ಗಂಗಾವತಿ, ರಾಯಚೂರಿನ ಮಾನ್ವಿ, ಸಿಂಧನೂರು, ಮಸ್ಕಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಳ್ಳುತ್ತಿದೆ. ಇನ್ನೂ ಒಂದು ವಾರದಲ್ಲಿ ಮಳೆಯಾಗದೆ ಇದ್ದರೆ ನೀರಿನ ಸಮಸ್ಯೆ ಹೆಚ್ಚಾಗುವುದರ ಜೊತೆಗೆ ಜನ ಜಾನುವಾರುಗಳಿಗೂ ನೀರು ದೊರೆಯದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ಕುಡಿಯುವ ನೀರಿನ ಮೂಲಗಳಾಗಿರುವ ಕೆರೆಗಳನ್ನು ತುಂಬಿಸಿಕೊಳ್ಳಲು ತುಂಗಭದ್ರ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿದೆ. ಇದನ್ನೂ ಓದಿ: ಡಿವಿಜಿ ಮನೆ ಶಾಲೆಗೆ ಹೈಟೆಕ್ ಟಚ್ – ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಕಟ್ಟಡ
Advertisement
ಆದರೆ ರೈತರು ಮಾತ್ರ ಕುಡಿಯುವ ಉದ್ದೇಶದರಿಂದ ಹರಿಸುತ್ತಿರುವ ನೀರನ್ನು ಸಹ ಅಕ್ರಮವಾಗಿ ಪಂಪ್‍ಸೆಟ್‍ಗಳ ಮೂಲಕ ಜಮೀನುಗಳಿಗೆ ಹರಿಸಲು ಮುಂದಾಗಿದ್ದಾರೆ. ಇದರಿಂದ ಕಾಲುವೆಯ ಕೆಳಭಾಗದ ರಾಯಚೂರು, ಮಾನ್ವಿ, ಸಿಂಧನೂರು, ಮಸ್ಕಿ ತಾಲೂಕುಗಳಿಗೆ ಬೇಡಿಕೆಯಷ್ಟು ನೀರು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
Advertisement
Advertisement
ಎಲ್ಲೆಲ್ಲಿ ಪೈಪ್ ಅಳವಡಿಕೆ: ಮುನಿರಾಬಾದ್, ಬಂಡಿಹರ್ಲಾಪೂರ, ಸಣಾಪೂರ, ರಾಂಪೂರ, ಮಲ್ಲಾಪೂರ, ಸಿದ್ದಿಕೇರಿ, ದಾಸನಾಳ, ರ್ಹಾಳ, ಶ್ರೀರಾಮನಗರ, ಕೆಸರಹಟ್ಟಿ, ಹಣವಾಳ, ಹೊಸ್ಕೇರಾ, ಬಾಪಿರೆಡ್ಡಿ ಕ್ಯಾಂಪ, ಜಂಗಮರ ಕಲ್ಗುಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ರೈತರು ಎಡದಂಡೆ ಕಾಲುವೆಗೆ ಪೈಪ್‍ಗಳನ್ನು ಹಾಕಿಸಿ, ರಾಜಾರೋಷವಾಗಿ ಹಗಲು ರಾತ್ರಿ ಎನ್ನದೆ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ಪ್ರಭಾವಿ ವ್ಯಕ್ತಿಗಳು ಕಾಲುವೆಗೆ ಮೋಟರ್ ಅಳವಡಿಕೆ ಮಾಡಿ ದೂರದಲ್ಲಿ ಇರುವ ಅವರ ಜಮೀನುಗಳಲ್ಲಿನ ಕೆರೆಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.
Advertisement
ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ಕುಡಿಯುವುದಕ್ಕಾಗಿ ಹರಿ ಬಿಟ್ಟಿರುವ ನೀರನ್ನು ಕೆರೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವ ಸೂಚನೆ ಇದ್ದಿದ್ದು, ಕಾಲುವೆಯ ಕೆಳಭಾಗ ಹಾಗೂ ಮೇಲ್ಭಾಗದ ರೈತರು ಜಮೀನುಗಳಿಗೆ ಬಳಕೆ ಮಾಡುವಂತ್ತಿಲ್ಲ. ಅದಕ್ಕಾಗಿಯೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗಸ್ತು ತಿರುಗಾಡಲು ನಿಯೋಜನೆ ಮಾಡಲಾಗಿದೆ. ಕಾಲುವೆಯ ಮೇಲೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಆದರೂ ಈ ರೀತಿ ನೀರನ್ನು ಕಳ್ಳತನ ಮಾಡಲಾಗುತ್ತಿದೆ. ಇದನ್ನೂ ಓದಿ: ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಆದಿ ರಾಜೀನಾಮೆ
Web Stories