ಬಾಗಲಕೋಟೆ: ನಗರದಲ್ಲಿ ಕುಡಚಿ ರೈಲು ಸಂಚಾರ ವಿರೋಧಿಸಿ ತಾಲೂಕಿನ ರೈತರು ಬುಧವಾರ ರೈಲು ಹಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ರೈಲ್ವೆ ಇಲಾಖೆಯ ಅಧಿಕಾರಿಗಳು 5 ವರ್ಷಗಳ ಹಿಂದೆ ರೈಲು ಮಾರ್ಗಕ್ಕಾಗಿ ಬಾಗಲಕೋಟೆ ತಾಲೂಕಿನ ಸಿಗಿಕೇರಿ, ನೀರಲಕೇರಿ ಸುಳಿಕೇರಿ ಸೇರಿದಂತೆ ಹತ್ತಾರು ಗ್ರಾಮದ ನೂರಾರು ಎಕರೆ ಜಮೀನು ಸ್ವಾಧೀನ ಪಡೆಸಿಕೊಂಡಿದ್ದರು.
Advertisement
Advertisement
ಭೂ ಸ್ವಾಧೀನ ಪಡೆಸಿಕೊಂಡು ಐದು ವರ್ಷಗಳಾದ್ರೂ ಈವರೆಗೂ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಬೆಲೆ ನೀಡಿರಲಿಲ್ಲ. ಅಲ್ಲದೇ ಭೂ ಸ್ವಾಧೀನ ಪಡೆಸಿಕೊಳ್ಳುವಾಗ ರೈತರ ಮಕ್ಕಳ ಶಿಕ್ಷಣಕ್ಕೆ ಅನುಗುಣವಾಗಿ ಮನೆಯೊಬ್ಬರಿಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದ್ದರು.
Advertisement
Advertisement
ಆದರೆ ಇಲ್ಲಿಯವರೆಗೆ ರೈಲ್ವೇ ಇಲಾಖೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಹೀಗಿರುವಾಗಲೇ ಅಧಿಕಾರಿಗಳು ಪ್ರಾಯೋಗಿಕವಾಗಿ ಕುಡುಚಿ ರೈಲು ಓಡಿಸಲು ಮನಸ್ಸು ಮಾಡಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆಕ್ರೋಶದಿಂದ ರೈಲು ಹಳಿಯಲ್ಲಿಯೇ ಕುಳಿತು ಜನರು ಪ್ರತಿಭಟನೆ ನೆಡೆಸಿದರು.
ಯಾವುದೇ ಕಾರಣಕ್ಕೂ ರೈಲು ಓಡಿಸಲು ಬಿಡೋದಿಲ್ಲವೆಂದು ಖಡಕ್ಕಾಗಿ ಹೇಳಿದ ರೈತರು, ರೈಲ್ವೇ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.