ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಕನಸಿನ ಕೂಸಾಗಿರುವ ಮಹದಾಯಿ ನೀರು ಸದ್ಬಳಕೆ ಆಸೆಯಾಗಿಯೇ ಉಳಿದಿದೆ. ಹೆಸರಿಗೆ ಮಾತ್ರ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿರುವ ಸರ್ಕಾರ, ಕಾಮಗಾರಿಯನ್ನು ಮಾತ್ರ ಇನ್ನೂ ಆರಂಭಿಸಿಲ್ಲ. ಇದೀಗ ಯೋಜನೆ ಶೀಘ್ರ ಅನುಷ್ಠಾನಕ್ಕೆ ರೈತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
Advertisement
ಮಹದಾಯಿ ಯೋಜನೆಗಾಗಿ ಕಳೆದ 3 ಬಜೆಟ್‌ಗಳಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿದೆ. ಇದು ಕೇವಲ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದ್ದು, ಕಾಮಗಾರಿ ಆರಂಭಕ್ಕೆ ಯಾರು ಕೂಡ ಮುಂದಾಗುತ್ತಿಲ್ಲ. ಇದು ಆಶಾಭಾವನೆ ಹೊತ್ತು ಕುಳಿತಿರುವ ಲಕ್ಷಾಂತರ ರೈತರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ರೈತರು ಮತ್ತೆ ಹೋರಾಟಕ್ಕೆ ನಾಂದಿ ಹಾಡಿ, ಸರ್ಕಾರಕ್ಕೆ ಮತ್ತೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ
Advertisement
Advertisement
ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಬಜೆಟ್‌ನಲ್ಲಿ ಮಹದಾಯಿ ಕಾಮಗಾರಿಗಾಗಿ 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಾಕಷ್ಟು ಭರವಸೆಯ ಮಾತುಗಳನ್ನಾಡಿ, ಬಜೆಟ್‌ನಲ್ಲಿ 1,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಈಗಾಗಲೇ 3 ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿವೆ.
Advertisement
ಇಷ್ಟೆಲ್ಲಾ ಅನುದಾನವಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೇಂದ್ರ ಹಾಗೂ ರಾಜ್ಯದ ಸಚಿವರು ಮಾತ್ರವಲ್ಲದೆ ಸಿಎಂ ಕೂಡ ಈ ಭಾಗದವರಾಗಿದ್ದರೂ ನೋ ಯೂಸ್. ಇದು ಸಾಕಷ್ಟು ಹೋರಾಟ ಮಾಡಿ ಕೇಸ್ ಹಾಕಿಸಿಕೊಂಡು ಇಂದಿಗೂ ಸಮನ್ಸ್ ಜಾರಿಯಾಗುತ್ತಿರುವ ರೈತರ ಪರಿಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ
ಇದೀಗ ಮತ್ತೆ ಹೋರಾಟದ ಹಾದಿ ತುಳಿದಿರುವ ರೈತರು, ಈ ಬಾರಿ ಕಾನೂನಿನ ಮೂಲಕ ಸರ್ಕಾರಕ್ಕೆ ಚಾಟಿ ಬೀಸಲು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಸಮರ ಆರಂಭಿಸಿದ್ದಾರೆ.